ADVERTISEMENT

31ವರೆಗೆ ನೀರು: ರೈತರ ಹರ್ಷ

ನೀರಾವರಿ ಸಲಹಾ ಸಮಿತಿ ಸಭೆ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2018, 5:49 IST
Last Updated 26 ಮಾರ್ಚ್ 2018, 5:49 IST
31ವರೆಗೆ ನೀರು: ರೈತರ ಹರ್ಷ
31ವರೆಗೆ ನೀರು: ರೈತರ ಹರ್ಷ   

ಶಹಾಪುರ: ನಾರಾಯಣಪುರ ಎಡದಂಡೆ ಕಾಲುವೆಗೆ (ಎನ್ಎಲ್‌ಬಿಸಿ) ಕಾಲುವೆಗೆ ಮಾರ್ಚ್ 31ವರೆಗೆ ನೀರು ಹರಿಸುವ ನಿರ್ಣಯವನ್ನು ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ನಿರ್ಧರಿಸಲಾಗಿದೆ.

ಶನಿವಾರ ಬೆಂಗಳೂರಿನ ಕೃಷ್ಣಾ ಭಾಗ್ಯ ಜಲ ನಿಗಮ(ಕೆಬಿಜೆಎನ್ಎಲ್‌) ಕಚೇರಿಯಲ್ಲಿ ನಡೆದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ ಎಂದು ಶಾಸಕ ಗುರು ಪಾಟೀಲ್ ಶಿರವಾಳ ತಿಳಿಸಿದರು.

‘ಮಾರ್ಚ್ 25ವರೆಗೆ ಮಾತ್ರ ನೀರು ಹರಿಸಲು ತೀರ್ಮಾಸಿತ್ತು. ಆದರೆ ಬೇಸಿಗೆ ಹಂಗಾಮಿನ ಬೆಳೆಗಳು ಕಾಳು ಕಟ್ಟುವ ಹಂತದಲ್ಲಿ ಇವೆ. ತಕ್ಷಣ ನೀರು ಸ್ಥಗಿತಗೊಂಡರೆ ಕೋಟ್ಯಂತರ ಮೌಲ್ಯದ ಬೆಳೆ ಹಾನಿಯಾಗುವುದರ ಜತೆಯಲ್ಲಿ ರೈತರು ಸಂಕಷ್ಟದಲ್ಲಿ ಸಿಲುಕುತ್ತಾರೆ. ಕೊನೆ ಪಕ್ಷ ಏಪ್ರಿಲ್ 1ವರೆಗೆ ನೀರು ಹರಿಸುವಂತೆ ನೀರಾವರಿ ಸಲಹಾ ಸಮಿತಿ ಅಧ್ಯಕ್ಷ ಆರ್.ಬಿ.ತಿಮ್ಮಾಪೂರ ಅವರಿಗೆ ಮನವಿ ಮಾಡಲಾಯಿತು. ಕೊನೆಗೆ ನೀರಿನ ಲಭ್ಯತೆಯನ್ನು ನೋಡಿ ಮಾರ್ಚ್ 31ವರೆಗೆ ನೀರು ಹರಿಸಲು ನಿರ್ಧರಿಸಲಾಯಿತು’ ಎಂದು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.