ADVERTISEMENT

ತೊಗರಿ ಖರೀದಿ ಕೇಂದ್ರ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 17 ಜನವರಿ 2018, 6:46 IST
Last Updated 17 ಜನವರಿ 2018, 6:46 IST

ಹುಣಸಗಿ: ‘ಕೊಡೇಕಲ್ಲ ಹೋಬಳಿ ವ್ಯಾಪ್ತಿಯಲ್ಲಿನ ಬಹುತೇಕ ಹಳ್ಳಿಗಳ ರೈತರು ತೊಗರಿ ಬಿತ್ತನೆ ಮಾಡಿದ್ದಾರೆ. ಆದ್ದರಿಂದ ಎಲ್ಲ ರೈತರು ಖರೀದಿ ಕೇಂದ್ರದ ಸೌಲಭ್ಯವನ್ನು ಬಳಸಿಕೊಳ್ಳಬೇಕು’ ಎಂದು ಕೊಡೇಕಲ್ಲ ಜಿಲ್ಲಾ ಪಂಚಾಯಿತಿ ಸದಸ್ಯ ಎನ್.ಡಿ.ನಾಯಕ ಹೇಳಿದರು. ಹುಣಸಗಿ ಸಮೀಪದ ಕೊಡೇಕಲ್ಲ ಗ್ರಾಮದಲ್ಲಿ ಮಂಗಳವಾರ ತೊಗರಿ ಖರೀದಿ ಕೇಂದ್ರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಈ ಭಾಗದ ರೈತರು ತೊಗರಿ ಮಾರಾಟಕ್ಕಾಗಿ ಸಾಕಷ್ಟು ತೊಂದರೆ ಅನುಭವಿಸಿದ್ದರು. ತೊಗರಿ ಮಾರಾಟಕ್ಕಾಗಿ ಹುಣಸಗಿ, ಸುರಪುರ ಇಲ್ಲವೇ ಬೇರೆ ಪಟ್ಟಣಗಳತ್ತ ಹೋಗುವ ಅನಿವಾರ್ಯ ಇತ್ತು. ಖರೀದಿ ಕೇಂದ್ರ ಆರಂಭದಿಂದಾಗಿ ಸಣ್ಣ ಮತ್ತು ಅತಿಸಣ್ಣ ರೈತರಿಗೆ ಸಹಕಾರಿಯಾಗಲಿದೆ’ ಎಂದರು.

ತಾಲ್ಲೂಕು ಪಂಚಾಯಿತಿ ಸದಸ್ಯ ಮೋಹನ್‌ ಪಾಟೀಲ ಮಾತನಾಡಿ, ‘ಪ್ರತಿ ರೈತರು 20 ಕ್ವಿಂಟಲ್ ವರೆಗೆ ತೊಗರಿ ಮಾರಾಟ ಮಾಡಬಹುದಾಗಿದೆ.
ರೈತರು ಕಡ್ಡಾಯವಾಗಿ ಆಧಾರ್ ಕಾರ್ಡ್‌ ಮತ್ತು ಆಧಾರ್ ಸಂಖ್ಯೆ ಲಿಂಕ್ ಆಗಿರುವ ಬ್ಯಾಂಕ್ ಖಾತೆ, ಬೆಳೆ ನಮೂದಿಸಿರುವ ಪಹಣಿ ಪತ್ರಿಕೆ ಇವುಗಳೊಂದಿಗೆ ತೊಗರಿ ತರಬೇಕು’ ಎಂದು ಹೇಳಿದರು.

ADVERTISEMENT

ರೈತ ಮುಖಂಡ ರವೀಂದ್ರ ಅಂಗಡಿ ಮಾತನಾಡಿ, ‘ಇನ್ನು ಹೆಚ್ಚಿನ ರೈತರು ತೊಗರಿ ಬೆಳೆದಿದ್ದರೂ ಕೂಡಾ ಅರ್ಜಿ ಸಲ್ಲಿಸಲು ಸಾಧ್ಯವಾಗಿಲ್ಲ. ಆದ್ದರಿಂದ ರೈತರಿಗೆ ಯಾವುದೇ ತೊಂದರೆಯಾಗದಂತೆ ಅರ್ಜಿಗಳನ್ನು ಪಡೆದು ತೊಗರಿ ಖರೀದಿಸಬೇಕು’ ಎಂದು ಒತ್ತಾಯಿಸಿದರು.

1,300 ರೈತರು ಅರ್ಜಿ ಸಲ್ಲಿಸಿದ್ದು, 740 ಅರ್ಜಿಗಳನ್ನು ದಾಖಲು ಮಾಡಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ. ಗ್ರಾಮದ ಯುವ ಮುಖಂಡ ಹನುಮಂತನಾಯಕ (ಬಬಲುಗೌಡ) ಕಾರ್ಯಕ್ರಮ ಉದ್ಘಾಟಿಸಿದರು.

ಮಹಲಿನಮಠದ ವೃಷಬೇಂದ್ರ ಸ್ವಾಮೀಜಿ, ನೀಲಕಂಠಸ್ವಾಮಿ ವಿರಕ್ತಮಠ, ಗ್ರಾಮ ಪಂಚಾಯಿತಿ ಅಧ್ಯಕ್ಷ ಮಹಿಮಪ್ಪ ಸೊನ್ನಾಪುರ, ಮುಖಂಡರಾದ ರಂಗನಾಥ ದೊರಿ, ವೀರಸಂಗಪ್ಪ ಹಾವೇರಿ, ಶಾಮಸುಂದರ ಜೋಶಿ, ಮಹಮ್ಮದ ಖಾಜಿ, ಬಸವರಾಜ ಕೊಡೇಕಲ್ಲಮಠ, ಪಿಕೆಪಿಎಸ್ ಅಧ್ಯಕ್ಷ ಬೊಮ್ಮಣ್ಣ ಪತ್ತಾರ, ಅಯ್ಯಪ್ಪ ಪಡಶೆಟ್ಟಿ, ಶರಣಪ್ಪ ಕೆಂಭಾವಿ, ನಾಗಯ್ಯ ಹಿರೇಮಠ ಇದ್ದರು. ಬಸವರಾಜ ಹಾಲಕ್ಕಿ ಸ್ವಾಗತಿಸಿದರು. ಸಂಗಯ್ಯ ಭದ್ರಗೋಳ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.