ADVERTISEMENT

ಆದರ್ಶ ವಿದ್ಯಾಲಯಕ್ಕೆ ರಾಷ್ಟ್ರ ಪ್ರಶಸ್ತಿ

ಶಹಾಪುರ; ಪುರಸ್ಕಾರಕ್ಕೆ ಪಾತ್ರವಾದ ರಾಜ್ಯದ ಏಕೈಕ ಶಾಲೆ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2022, 8:40 IST
Last Updated 21 ನವೆಂಬರ್ 2022, 8:40 IST
20ಎಸ್ಎಚ್ಪಿ 2: ಶಹಾಪುರ ನಗರದ ಆದರ್ಶ ವಿದ್ಯಾಲಯದ ಒಳ ಆವರಣ ಹಸಿರಿನಿಂದ ಕಂಗೋಳಿಸುತ್ತಿದೆ
20ಎಸ್ಎಚ್ಪಿ 2: ಶಹಾಪುರ ನಗರದ ಆದರ್ಶ ವಿದ್ಯಾಲಯದ ಒಳ ಆವರಣ ಹಸಿರಿನಿಂದ ಕಂಗೋಳಿಸುತ್ತಿದೆ   

ಶಹಾಪುರ: 2021-22ನೇ ಸಾಲಿನ ರಾಜ್ಯದ ಏಕೈಕ ಸ್ವಚ್ಛ ವಿದ್ಯಾಲಯ ಪುರಸ್ಕಾರವನ್ನು ನಗರದ ಆದರ್ಶ ವಿದ್ಯಾಲಯ ಮುಡಿಗೇರಿಸಿಕೊಂಡಿದೆ.

₹60 ಸಾವಿರ ನಗದನ್ನು ಪ್ರಶಸ್ತಿ ಒಳಗೊಂಡಿದೆ. ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ರಾಜ್ಯ ಸಚಿವ ಡಾ.ಸುಭಾಷ್, ಕೇಂದ್ರ ಶಾಲಾ ಶಿಕ್ಷಣ ರಾಜ್ಯ ಸಚಿವ ಡಾ.ರಾಜಕುಮಾರ ರಂಜನ್ ಸಿಂಗ್ ಹಾಗೂ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯ ಕೇಂದ್ರ ಕಾರ್ಯದರ್ಶಿ ಸಂಜೀವಕುಮಾರ ಅವರಿಂದ ವಿದ್ಯಾಲಯದ ಪಾಚಾರ್ಯಎಚ್.ಎಸ್.ಸೋಮಲಾಪುರ ಪ್ರಶಸ್ತಿ ಸ್ವೀಕರಿಸಿದರು.

ನಮ್ಮ ವಿದ್ಯಾಲಯ ಸೇರಿ ದೇಶದ 39 ಶಾಲೆಗಳು ಆಯ್ಕೆಯಾಗಿವೆ. ಸ್ವಚ್ಛ ವಿದ್ಯಾಲಯಕ್ಕೆ ಮುಖ್ಯವಾಗಿ ವಿದ್ಯಾಲಯದಲ್ಲಿ ನೀರ, ನೈರ್ಮಲ್ಯ ಮತ್ತು ಉತ್ತಮ ಆರೋಗ್ಯ ಸಂರಕ್ಷಣೆ ಮಕ್ಕಳಿಗೆ ಆಧುನಿಕ ಶಿಕ್ಷಣ ವ್ಯವಸ್ಥೆಯ ಬಗ್ಗೆ ಅರಿವು ಸೇರಿದಂತೆ ಹಲವಾರು ರಚನಾತ್ಮಕ ಅಂಶಗಳನ್ನು ಗಣನೆಗೆ ತೆಗೆದುಕೊಂಡು ಆಯ್ಕೆ ಮಾಡಲಾಗಿದೆ ಎಂದು ಅವರು ತಿಳಿಸಿದರು.

ADVERTISEMENT

ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಿರುವುದು ತುಂಬಾ ಖುಷಿಯಾಗಿದೆ. ಪಾಲಕರ ಹಾಗೂ ತಾಲ್ಲೂಕಿನ ಎಲ್ಲಾ ಶಿಕ್ಷಣ ಪ್ರೇಮಿಗಳಿಗೆ ಪ್ರಶಸ್ತಿ ಸಲ್ಲುತ್ತದೆ ಎಂದು ಪ್ರಾಚಾರ್ಯ ಎಚ್.ಎಸ್.ಸೋಮಲಾಪುರ ಹರ್ಷ ವ್ಯಕ್ತಪಡಿಸಿದರು.

ವಿದ್ಯಾಲಯಕ್ಕೆ ಇನ್ನೂ ಹೆಚ್ಚಿನ ಪ್ರತ್ಯೇಕ ಅನುದಾನವನ್ನು ಒದಗಿಸಬೇಕು. ವಿದ್ಯಾಲಯಕ್ಕೆ ತೆರಳಲು ಉತ್ತಮ ರಸ್ತೆ ನಿರ್ಮಿಸಿ, ಕಂಪೌಂಡ ನಿರ್ಮಾಣ ಅಗತ್ಯವಾಗಿದೆ ಎಂದು ಪಾಲಕರು ಜಿಲ್ಲಾಧಿಕಾರಿಗೆ ಮನವಿ
ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.