ADVERTISEMENT

ಶಹಾಪುರ: ಕಳ್ಳಬಟ್ಟಿ ಸಾರಾಯಿ ಕಮುಟು ವಾಸನೆ ಜೋರು

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2020, 17:14 IST
Last Updated 29 ಏಪ್ರಿಲ್ 2020, 17:14 IST
ಶಹಾಪುರ ತಾಲ್ಲೂಕಿನ ಕನ್ಯಾಕೊಳ್ಳೂರ ತಾಂಡಾದಲ್ಲಿ ಬುಧವಾರ ಅಕ್ರಮವಾಗಿ ಸಂಗ್ರಹಿಸಿ ಇಟ್ಟಿದ್ದ ಕಳ್ಳಭಟ್ಟಿ ಸರಾಯಿ ಪೊಲೀಸರು ವಶಪಡಿಸಿಕೊಂಡರು
ಶಹಾಪುರ ತಾಲ್ಲೂಕಿನ ಕನ್ಯಾಕೊಳ್ಳೂರ ತಾಂಡಾದಲ್ಲಿ ಬುಧವಾರ ಅಕ್ರಮವಾಗಿ ಸಂಗ್ರಹಿಸಿ ಇಟ್ಟಿದ್ದ ಕಳ್ಳಭಟ್ಟಿ ಸರಾಯಿ ಪೊಲೀಸರು ವಶಪಡಿಸಿಕೊಂಡರು   

ಶಹಾಪುರ: ಗ್ರಾಮೀಣ ಪ್ರದೇಶದಲ್ಲಿ ಕೆಲ ದುಷ್ಟ ಶಕ್ತಿಗಳು ಇದನ್ನೆ ಬಂಡವಾಳ ಮಾಡಿಕೊಂಡು ಕಳ್ಳಬಟ್ಟಿ ಸರಾಯಿ ಸಿದ್ಧಪಡಿಸಿಕೊಂಡು ಮಾರಾಟ ಮಾಡುವ ಜಾಲ ಜೋರಾಗಿದೆ.

ಲಾಕ್ ಡೌನ್ ಆದ ನಂತರ ತಾಲ್ಲೂಕಿನಲ್ಲಿ ವನದುರ್ಗ, ನಡಿಹಾಳ ತಾಂಡಾ, ಕದರಾಪುರ, ಕನ್ಯಾಕೊಳ್ಳುರ ತಾಂಡಾ ಸೇರಿದಂತೆ ನಾಲ್ಕು ಕಡೆ ದಾಳಿ ಮಾಡಿ ಪ್ರಕರಣವನ್ನು ದಾಖಲಿಸಿಕೊಂಡಿದ್ದೇವೆ. ಗ್ರಾಮದಲ್ಲಿ ಕಳ್ಳಬಟ್ಟಿ ಸರಾಯಿ ಸೇವನೆಯಿಂದ ಆರೋಗ್ಯಕ್ಕೆ ಹಾನಿಕಾರಕ ಹಾಗೂ ಕಾನೂನು ವಿರೋಧಿಯಾಗಿದೆ. ಅಕ್ರಮ ಎಸಗಿದವರ ಮೇಲೆ ಶಿಸ್ತು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗುತ್ತಿದೆ. ಸಾರ್ವಜನಿಕರಿಂದ ದೂರು ಬಂದರೆ ತೆರಳಿ ದಾಳಿ ನಡೆಸಲಾಗುತ್ತಿದೆ. ಸಿಬ್ಬಂದಿಯ ಕೊರತೆಯು ಇದೆ ಎಂದು ಅಬಕಾರಿ ಇಲಾಖೆಯ ಅಧಿಕಾರಿ ಭೀಮಣ್ಣ ರಾಠೋಡ ತಿಳಿಸಿದರು.

ಹಳ್ಳಿಗಳಲ್ಲಿ ಕಳ್ಳಬಟ್ಟೆ ಸರಾಯಿ ತಯಾರಿಸಲು ಬೇಕಾಗುವ ಕಚ್ಚಾ ಸಾಮಗ್ರಿಗಳನ್ನು ಸಿದ್ಧಪಡಿಸಿಕೊಂಡು ಕತ್ತಲು ಆಗುತ್ತಿದ್ದಂತೆ ದ್ವಿಚಕ್ರ ವಾಹನಗಳು ರಸ್ತೆಗೆ ಇಳಿಯುತ್ತವೆ. ಅಕ್ರಮವಾಗಿ ಒಳ ರಸ್ತೆಗಳ ಮೂಲಕ ಬೇರೆ ಬೇರೆ ಗ್ರಾಮಕ್ಕೆ ತೆರಳಿ ಮಾರಾಟ ಮಾಡಲಾಗುತ್ತಿದೆ. ಈಗ ಸದ್ಯಕ್ಕೆ ಒಂದು ಲೀಟರ್ ಕಳ್ಳಬಟ್ಟಿ ಸರಾಯಿಗೆ ₹400 ತೆಗೆದುಕೊಳ್ಳುತ್ತಿದ್ದಾರೆ. ಇದು ತಾಲ್ಲೂಕಿನ ಹಲವು ತಾಂಡಾಗಳಲ್ಲಿ ಹೆಚ್ಚು ಹಿಂದುಳಿದ ಸಮುದಾಯದ ಹಳ್ಳಿಗಳಲ್ಲಿ ಮಾರಾಟ ಮಾಡುತ್ತಿದ್ದಾರೆ. ಗ್ರಾಮದಲ್ಲಿ ಇದನ್ನು ಪ್ರಶ್ನಿಸಿದರೆ ಉಲ್ಟಾ ಅವರನ್ನು ಗದರಿಸುತ್ತಾರೆ ಎಂದು ಎಂದು ನಡಿಹಾಳ ತಾಂಡಾದ ಯುವಕನೊಬ್ಬ ತಿಳಿಸಿದ.

ADVERTISEMENT

ಮದ್ಯ ಮಾರಾಟ ನಿಷೇಧದಿಂದ ಮದ್ಯ ವ್ಯಸನಿಗಳು ಅನ್ಯ ಮಾರ್ಗವಾಗಿ ಕಳ್ಳಬಟ್ಟಿ ಸರಾಯಿಗೆ ಗಂಟು ಬಿದ್ದಿದ್ದಾರೆ. ಹಳ್ಳಿಯಲ್ಲಿ ಐದಾರು ತಂಡಗಳಂತೆ ಕೆಲಸ ನಿರ್ವಹಿಸುತ್ತಿವೆ. ಇದರಿಂದ ದಿನಕ್ಕೆ ಐದಾರು ಸಾವಿರ ಆದಾಯವನ್ನು ಮಾಡಿಕೊಳ್ಳುತ್ತಿದ್ದಾರೆ. ದಾಳಿ ಮಾಡಲು ಅಬಕಾರಿ ಇಲಾಖೆಯಲ್ಲಿ ನಿರೀಕ್ಷೆಯಷ್ಟು ಸಿಬ್ಬಂದಿ ಇಲ್ಲ. ಅಲ್ಲದೆ ಲಾಕ್ ಡೌನ್ ಕಟ್ಟುನಿಟ್ಟಾಗಿ ಜಾರಿ ಮಾಡಲು ನಗರ ಹಾಗೂ ಹಳ್ಳಿಯಲ್ಲಿ ಪೊಲೀಸರು ಕರ್ತವ್ಯ ನಿರ್ವಹಿಸುತ್ತಿದ್ದರಿಂದ ದಾಳಿ ಮಾಡಲು ತೊಂದರೆಯಾಗುತ್ತದೆ ಎಂದು ಪೊಲೀಸ ಅಧಿಕಾರಿ ಒಬ್ಬರು ತಿಳಿಸಿದರು.
ಅಬಕಾರಿ ಇಲಾಖೆ ಜಾಗೃತಕೊಂಡು ಅಕ್ರಮವಾಗಿ ಕಳ್ಳಬಟ್ಟಿ ತಯಾರಿಸುವ ಅಡ್ಡೆಗಳ ಮೇಲೆ ದಾಳಿ ಮಾಡಿ ಬಡ ಜನತೆಯ ಜೀವ ಉಳಿಸಬೇಕು ಎಂದು ತಾಲ್ಲೂಕಿನ ಜನತೆ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.