ADVERTISEMENT

ವಡಗೇರಾ: ಅಂಬಾಮಹೇಶ್ವರಿ ದೇವಸ್ಥಾನ ಲೋಕಾರ್ಪಣೆ ಫೆ.6ರಂದು

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2026, 5:23 IST
Last Updated 5 ಫೆಬ್ರುವರಿ 2026, 5:23 IST
ವಡಗೇರಾ ಪಟ್ಟಣದ ಗ್ರಾಮ ದೇವತೆ ಅಂಬಾಮಹೇಶ್ವರಿ ದೇವಿಯ ನೂತನ ದೇವಸ್ಥಾನ ಲೋಕಾರ್ಪಣೆಗೊಳ್ಳಲು ಸಿದ್ದವಾಗಿರುವುದು
ವಡಗೇರಾ ಪಟ್ಟಣದ ಗ್ರಾಮ ದೇವತೆ ಅಂಬಾಮಹೇಶ್ವರಿ ದೇವಿಯ ನೂತನ ದೇವಸ್ಥಾನ ಲೋಕಾರ್ಪಣೆಗೊಳ್ಳಲು ಸಿದ್ದವಾಗಿರುವುದು   

ವಡಗೇರಾ: ‘ವಡಗೇರಾ ಪಟ್ಟಣದ ಗ್ರಾಮ ದೇವತೆ ಅಂಬಾಮಹೇಶ್ವರಿ ದೇವಿಯ ನೂತನ ದೇವಸ್ಥಾನ ಫೆ.6 ರಂದು ಲೋಕಾರ್ಪಣೆಗೊಳ್ಳಲಿದೆ’ ಎಂದು ಅಂಬಾಮಹೇಶ್ವರಿ ದೇವಿ ದೇವಸ್ಥಾನ ಸಮಿತಿಯವರು ತಿಳಿಸಿದ್ದಾರೆ.

‘ಫೆ.5 ರಂದು ನೂತನ ದೇವಸ್ಥಾನದಲ್ಲಿ ಹೋಮ ಹವನ ಕಳಸಾರೋಹಣ ವಾಸ್ತು ಇನ್ನಿತರ ಪೂಜೆಗಳು ಜರುಗಲಿವೆ. ಫೆ.6ರಂದು ಬೆಳಿಗ್ಗೆ 7 ಗಂಟೆಗೆ ವಿವಿಧ ಪೂಜೆ ಹಾಗೂ ನೂತನ ದೇವಸ್ಥಾನ ಲೋಕಾರ್ಪಣೆ ನಂತರ ಕುಂಭ ಕಳಸ ಹಾಲಗಂಭ ಪೂಜೆ, ಅಂಬಾ ಮಹೇಶ್ವರಿ ದೇವಿ ಹಾಗೂ ಕಾಳಿಕಾ ದೇವಿಗೆ ಉಡಿತುಂಬುವ ಕಾರ್ಯಕ್ರಮ ಹಾಗೂ ಮುತ್ತೈದೆ ಮಹಿಳೆಯರಿಗೆ ಉಡಿತುಂಬುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ವಿವಿಧ ಮಠಾಧೀಶರು ಶರಣರು ಸಂತರು ಪಾಲ್ಗೊಳ್ಳಲಿದ್ದಾರೆ’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರತಿ 3 ಮೂರು ವರ್ಷಕ್ಕೊಮ್ಮ ಹಮ್ಮಿಕೊಳ್ಳುವ ಅಂಬಾಮಹೇಶ್ವರಿ ದೇವಿಯ ಜಾತ್ರೆಯು ಫೆ.9 ಮತ್ತು 10.ರಂದು ಎರಡು ದಿನಗಳ ಕಾಲ ಅತಿ ವಿಜೃಂಭಣೆಯಿಂದ ಜರಗಲಿದೆ.

ADVERTISEMENT

‘ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮದ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು’ ಎಂದು ಕೋರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.