ADVERTISEMENT

ತಾತಾಳಗೇರಾ | ಬಂಗಾರುಗುಂಡು ಮಲ್ಲಯ್ಯ ಜಾತ್ರೆ: ಭಂಡಾರದಲ್ಲಿ ಮಿಂದೆದ್ದ ಭಕ್ತರು

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2025, 7:29 IST
Last Updated 29 ಅಕ್ಟೋಬರ್ 2025, 7:29 IST
ಗುರುಮಠಕಲ್‌ ತಾಲ್ಲೂಕಿನ ತಾತಾಳಗೇರಾ ಗ್ರಾಮದಲ್ಲಿ ಭಾನುವಾರ ಜರುಗಿದ ಬಂಗಾರುಗುಂಡು ಮಲ್ಲಯ್ಯ ಜಾತ್ರಾ ಮೆರವಣಿಗೆಯಲ್ಲಿ ಭಂಡಾರ(ಅರಶಿಣ)ದಲ್ಲಿ ಮಿಂದೆದ್ದ ಭಕ್ತರು
ಗುರುಮಠಕಲ್‌ ತಾಲ್ಲೂಕಿನ ತಾತಾಳಗೇರಾ ಗ್ರಾಮದಲ್ಲಿ ಭಾನುವಾರ ಜರುಗಿದ ಬಂಗಾರುಗುಂಡು ಮಲ್ಲಯ್ಯ ಜಾತ್ರಾ ಮೆರವಣಿಗೆಯಲ್ಲಿ ಭಂಡಾರ(ಅರಶಿಣ)ದಲ್ಲಿ ಮಿಂದೆದ್ದ ಭಕ್ತರು   

ಗುರುಮಠಕಲ್‌: ತಾಲ್ಲೂಕಿನ ತಾತಾಳಗೇರಾ ಗ್ರಾಮದಲ್ಲಿ ಭಾನುವಾರ ಜರುಗಿದ ಬಂಗಾರುಗುಂಡು ಮಲ್ಲಯ್ಯ ಜಾತ್ರೆಯಲ್ಲಿ ಭಕ್ತರು ಭಂಡಾರದಲ್ಲಿ ಮಿಂದು ಸಂಭ್ರಮಿಸಿದರು.

ಗ್ರಾಮದ ಪ್ರಮುಖ ಬೀದಿಗಳಲ್ಲಿ ಮಲ್ಲಯ್ಯನ ಜಾತ್ರಾ ಮೆರವಣಿಗೆ ಜರುಗಿತು. ತಾತಾಳಗೇರಾ ಸೇರಿದಂತೆ ಸುತ್ತಲಿನ ಗ್ರಾಮಗಳಿಂದ ಜಾತ್ರೆಗೆ ಆಗಮಿಸಿದ್ದ ಭಕ್ತರು, ‘ಭಂಡಾರದೊಡಯನಿಗೆ ಜೈಕಾರ’ ಕೂಗುತ್ತಿರುವುದು ಕಂಡುಬಂದಿತು.

ದೇವರ ಗುಂಡಗುರ್ತಿಯ ಮಲ್ಲಿಕಾರ್ಜುನ(ಹೊನ್ನಯ್ಯ ತಾತ) ಮಾತನಾಡಿ, ‘ದಶಕದಿಂದ ಜಾತ್ರೆಯನ್ನು ನಡೆಸಲಾಗುತ್ತಿದೆ. ಜಾತ್ರೆ ಮತ್ತು ಉತ್ಸವಗಳು ಸಾಮಾಜಿಕ ಸಾಮರಸ್ಯಕ್ಕೆ ವೇದಿಕೆಯಾಗಿವೆ. ಇಲ್ಲಿನ ಎಲ್ಲಾ ಸಮುದಾಯಗಳೂ ಅನೋನ್ಯವಾಗಿರುವುದು ಅನುಕರಣೀಯ’ ಎಂದು ಹೇಳಿದರು.

ADVERTISEMENT

ಮಲ್ಲಯ್ಯನ ಕೃಪೆಯಾಗಲಿ, ಮುಂದಿನ ದಿನಗಳಲ್ಲಿ ಉತ್ತಮ ಬೆಳೆಯಾಗಿ, ರೈತಾಪಿ ಜನರ ಕಷ್ಟ ಕಳೆದು, ಬದುಕು ಹಸನಾಗಲಿ ಎಂದು ಹಾರೈಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.