ADVERTISEMENT

ಯಾದಗಿರಿ: ಮಳೆ ನಡುವೆಯೂ ಭಾರತ ಬಂದ್ ಗೆ ಬೆಂಬಲಿಸಿ ಹೋರಾಟಗಾರರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2021, 5:09 IST
Last Updated 27 ಸೆಪ್ಟೆಂಬರ್ 2021, 5:09 IST
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಅನ್ನು ಪ್ರತಿಭಟನೆ ನಿರತರು ತಡೆಯಲು ಮುಂದಾದರು. 
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಅನ್ನು ಪ್ರತಿಭಟನೆ ನಿರತರು ತಡೆಯಲು ಮುಂದಾದರು.    

ಯಾದಗಿರಿ: ಕೇಂದ್ರ ಸರ್ಕಾರದ ಜನ ವಿರೋಧಿ ಕಾಯ್ದೆಗಳನ್ನು ವಿರೋಧಿಸಿ ಸಂಯುಕ್ತ ಕಿಸಾನ್ ಮೋರ್ಚಾ ನೀಡಿರುವ ಭಾರತ್ ಬಂದ್ ಗೆ ಜಿಲ್ಲೆಯಲ್ಲಿ ಉತ್ತಮ ಬೆಂಬಲ ವ್ಯಕ್ತವಾಗಿದೆ. ಮಳೆ ನಡುವೆಯೂ ಹೋರಾಟಗಾರರು ಪ್ರತಿಭಟನೆ ನಡೆಸುತ್ತಿದ್ದಾರೆ.

ಕೇಂದ್ರ ಬಸ್ ನಿಲ್ದಾಣದ ಮುಂದೆ ಎಐಟಿಯುಸಿ, ಎಸ್ ಯುಸಿಐ, ಸಿಪಿಎಂ, ಸಿಪಿಐ ಆರ್ ಎಸ್ ಕೆ ಹಾಗೂ ವಿವಿಧ ಸಂಘಟನೆ ಸದಸ್ಯರಿಂದ ಮಳೆಯಲ್ಲಿಯೇ ಪ್ರತಿಭಟನೆ ನಡೆಸಲಾಗುತ್ತಿದೆ. ಕೇಂದ್ರ ಸರ್ಕಾರ ಕಾಯ್ದೆಗಳನ್ನು ವಾಪಸ್ ಪಡೆಯಲು ಆಗ್ರಹಿಸುತ್ತಿದ್ದಾರೆ.

ಪೊಲೀಸ್ ಹಾಗೂ ಹೋರಾಟಗಾರರ ನಡುವೆ ವಾಗ್ವಾದ:ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಅನ್ನು ಪ್ರತಿಭಟನೆ ನಿರತರು ತಡೆಯಲು ಮುಂದಾದರು.

ADVERTISEMENT

ಈ ವೇಳೆ ಪೊಲೀಸ್ ಹಾಗೂ ಪ್ರತಿಭಟನೆ ನಿರತರ ನಡುವೆ ವಾಗ್ವಾದ ಉಂಟಾಯಿತು.

ಭಾರತ ಬಂದ್ ಗೆ ಬೆಂಬಲಿಸಿ ಬಸ್ ಬಂದ್ ಮಾಡಬೇಕೆಂದು ಹೋರಾಟಗಾರರ ಒತ್ತಾಯಿಸಿದರೆ, ಬಲವಂತವಾಗಿ ಬಸ್ ಬಂದ್ ಮಾಡಿಸದಂತೆ ಹೋರಾಟಗಾರರಿಗೆ ಪೊಲೀಸರ ಖಡಕ್ ಎಚ್ಚರಿಕೆ ನೀಡಿದರು.ಪೊಲೀಸರ ಎಚ್ಚರಿಕೆಗೆ ಅಕ್ರೋಶಗೊಂಡ ಹೋರಾಟಗಾರರು ಬಂದ್ ಮಾಡುವಂತೆ ಒತ್ತಾಯಿಸಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.