
ಪ್ರಜಾವಾಣಿ ವಾರ್ತೆ
ಕಕ್ಕೇರಾ: ಕಳೆದ 45 ವರ್ಷಗಳಿಂದ ಸರ್ಕಾರ ಕಾಲುವೆ ರಸ್ತೆ ದುರಸ್ತಿಗೆ ಮುಂದಾಗಿಲ್ಲ. ಹೀಗಾಗಿ ನಾವೆಲ್ಲರೂ ಸ್ವಂತ ಹಣ ಹಾಕಿ ಕಾಲುವೆ ರಸ್ತೆ ದುರಸ್ತಿಗೆ ಮುಂದಾಗಿದ್ದೇವೆ ಎಂದು ರೈತ ಮುಖಂಡ ಮಾಳಪ್ಪ ಮಲಮುತ್ತೇರ ತಿಳಿಸಿದರು.
ಸಮೀಪದ ಪಿರಗಾರದೊಡ್ಡಿಯಿಂದ ಬನದೊಡ್ಡಿ ರಸ್ತೆಯವರೆಗೆ ಅಂದಾಜು 50 ಟಾಕ್ಟರ್ ಮರಮ್ ಹಾಕಿಸಿದ್ದೇವೆ. ಮಳೆಯಿಂದ ಕಾರ್ಯ ಮುಂದೂಡಲಾಗಿತ್ತು. ಮತ್ತೆ ಕಾರ್ಯ ಆರಂಭಿಸಿದ್ದು, ಶೀಘ್ರದಲ್ಲಿಯೇ ಸಂಪೂರ್ಣ ಕಾಲುವೆ ರಸ್ತೆ ದುರಸ್ತಿಗೊಳಿಸುತ್ತೇವೆ ಎಂದರು.
ಶೀಘ್ರವೇ ಬೆಳೆ ಕೊಯ್ಲಿಗೆ ಬರುವ ಹಂತದಲ್ಲಿದ್ದು, ರಾಶಿ ಮಾಡಿ ಭತ್ತ ತೆಗೆದುಕೊಂಡು ಹೋಗಲು ರಸ್ತೆಯಿಲ್ಲ. ಹೀಗಾಗಿ ನಾವೆಲ್ಲರೂ ದುರಸ್ತಿಗೊಳಿಸುತ್ತಿದ್ದೇವೆ ಎಂದು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.