ADVERTISEMENT

24 ಗಂಟೆ ಯಾದಗಿರಿ ಜಿಲ್ಲೆ ಸಂಪೂರ್ಣ ಲಾಕ್‌ಡೌನ್: ಜಿಲ್ಲಾಧಿಕಾರಿ ಆದೇಶ

​ಪ್ರಜಾವಾಣಿ ವಾರ್ತೆ
Published 12 ಮೇ 2020, 4:37 IST
Last Updated 12 ಮೇ 2020, 4:37 IST
ಎಂ.ಕೂರ್ಮಾರಾವ್
ಎಂ.ಕೂರ್ಮಾರಾವ್    

ಯಾದಗಿರಿ: ಕೊರೊನಾ ಸೋಂಕು ಹರಡುವಿಕೆಯಿಂದ ಸಂಭವಿಸುವ ಅನಾಹುತಗಳನ್ನು ಪರಿಣಾಮಕಾರಿಯಾಗಿ ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲೆಯಾದ್ಯಂತ ಸೋಮವಾರ ಮಧ್ಯರಾತ್ರಿಯಿಂದ ಮಂಗಳವಾರ ಮಧ್ಯರಾತ್ರಿವರೆಗೆ ಸಂಪೂರ್ಣ ಲಾಕ್‌ಡೌನ್‌ಗೆ ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್ ಆದೇಶಿದ್ದಾರೆ.

ಸೋಮವಾರ ಮಧ್ಯರಾತ್ರಿ 1 ಗಂಟೆಗೆ ಆದೇಶ ಹೊರಡಿಸಿದ್ದು, ಔಷಧಾಲಯ ಮತ್ತು ತುರ್ತು ಸೇವೆ ಹೊರತುಪಡಿಸಿ ಉಳಿದ ಎಲ್ಲ ಅಂಗಡಿಗಳನ್ನು ಲಾಕ್‌ಡೌನ್ ಮಾಡಲು ಆದೇಶದಲ್ಲಿ ತಿಳಿಸಿದ್ದಾರೆ.

ಮಂಗಳವಾರ ಬೆಳಿಗ್ಗೆಯಿಂದ ನಗರಸಭೆ ವತಿಯಿಂದ ಧ್ವನಿವರ್ಧಗಳ‌ ಮೂಲಕ ಅಂಗಡಿ ಮುಟ್ಟುವ ಮುಚ್ಚುವಂತೆ ತಿಳಿಸುತ್ತಿದ್ದಾರೆ. ಪೊಲೀಸರು ರಸ್ತೆಗಿಳಿದಿದ್ದು, ಸಂಚಾರ ಸಂಪೂರ್ಣ ಸ್ಥಗಿತಗೊಳಿಸಲಾಗಿದೆ.

ADVERTISEMENT

ನಗರ ಸೇರಿದಂತೆ ಸುರಪುರ, ಶಹಾಪುರಗಳಲ್ಲಿ ಬಂದ್ ಮಾಡಲಾಗಿದೆ.

ಅಡಿಯೊ ವೈರಲ್: ಆತಂಕ ಸೋಮವಾರ ರಾತ್ರಿಯಿಂದ ಜಿಲ್ಲೆಯಲ್ಲಿ ಪಾಸಿಟಿವ್ ಪ್ರಕರಣ ಬಂದಿದೆ ಎನ್ನುವ ಅಡಿಯೊ ವೈರಲ್ ಆಗಿದೆ. ಜಿಲ್ಲಾಡಳಿತದಿಂದ ಯಾವುದೇ ಸ್ಪಷ್ಟನೆ ಈ ಬಗ್ಗೆ ನೀಡಿಲ್ಲ. ಆದರೂ ಅಡಿಯೊ ಕೇಳಿ ಜನರು ಆತಂಕದಿಂದ ಕಾಲಕಳೆಯುತ್ತಿದ್ದಾರೆ.
ಹಸಿರು ವಲಯದಲ್ಲಿರುವ ಜಿಲ್ಲೆಗೆ ಕೊರೊನಾ ಆತಂಕ ಮನೆ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.