ADVERTISEMENT

ಹಿಂದು ಶಕ್ತಿ ಸಂಗಮಕ್ಕೆ ಶ್ರಮಿಸಿದ ಸಂತ

ಭೀಮಶೇನರಾವ ಕುಲಕರ್ಣಿ
Published 30 ಡಿಸೆಂಬರ್ 2019, 9:49 IST
Last Updated 30 ಡಿಸೆಂಬರ್ 2019, 9:49 IST
ಹುಣಸಗಿ ಸಮೀಪದ ಹುಣಸಿಹೊಳೆ ಕಣ್ವಮಠದಲ್ಲಿ ಕಳೆದ ವರ್ಷ ಜುಲೈ ತಿಂಗಳಲ್ಲಿ ನಡೆದ ಕಾರ್ಯಕ್ರಮಕ್ಕೆ ಪೇಜಾವರ ಮಠದ ವಿಶ್ವೇಶ ತೀರ್ಥ ಶ್ರೀಗಳು ಗರುಡ ಮೂರ್ತಿಯನ್ನು ಉದ್ಘಾಟಿದ್ದರು (ಸಂಗ್ರಹ ಚಿತ್ರ)
ಹುಣಸಗಿ ಸಮೀಪದ ಹುಣಸಿಹೊಳೆ ಕಣ್ವಮಠದಲ್ಲಿ ಕಳೆದ ವರ್ಷ ಜುಲೈ ತಿಂಗಳಲ್ಲಿ ನಡೆದ ಕಾರ್ಯಕ್ರಮಕ್ಕೆ ಪೇಜಾವರ ಮಠದ ವಿಶ್ವೇಶ ತೀರ್ಥ ಶ್ರೀಗಳು ಗರುಡ ಮೂರ್ತಿಯನ್ನು ಉದ್ಘಾಟಿದ್ದರು (ಸಂಗ್ರಹ ಚಿತ್ರ)   

ಹುಣಸಗಿ: ಸಮಸ್ತ ಹಿಂದೂ ಸಮಾಜ ಒಂದಾಗಬೇಕು. ಆಗ ಮಾತ್ರ ಭವ್ಯ ಭಾರತದ ಉದ್ಧೇಶಗಳು ಸಾಕಾರವಾಗಲು ಸಾಧ್ಯ ಎಂಬ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ಉಡುಪಿ ಪೇಜಾವರ ಮಠದ ವಿಶ್ವೇಶತೀರ್ಥ ಶ್ರೀಗಳು ಪ್ರತಿಪಾದಿಸುತ್ತಿದ್ದರು.

ಕಳೆದ ವರ್ಷ ಸಮೀಪದ ಹುಣಸಿಹೊಳೆ ಕಣ್ವಮಠದ ಹಿಂದಿನ ಯತಿಗಳಾಗದ್ದ ವಿದ್ಯಾಭಾಸ್ಕರ ತೀರ್ಥರ 3ನೇ ಮಹಾಸಮಾರಾಧನೆ ಕಾರ್ಯಕ್ರಮ ಮತ್ತು ಗರುಡ ದೇವರ ಮೂರ್ತಿ ಉದ್ಘಾಟನಾ ಕಾರ್ಯಕ್ರ ಮದಲ್ಲಿ ಭಾಗವಹಿಸಿ ಮಾತನಾಡಿದ್ದರು.

ಅವರ ಒಂದೊಂದು ನುಡಿಗಳು ಎಂದಿಗೂ ಮರೆಯುವಂತಿಲ್ಲ ಎಂದು ಸುರಪುರ ಶಾಸಕ ರಾಜುಗೌಡ ನೆನಪಿಸಿಕೊಂಡರು.2018 ಜುಲೈ ತಿಂಗಳ 8 ರಂದು ನಡೆದ ವಿವಿಧ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ನೆರೆದ ಭಕ್ತರನ್ನುದ್ದೇಶಿಸಿ ಮಾತನಾಡಿದ್ದರು.

ADVERTISEMENT

ಹಿಂದು ಸಂಸ್ಕೃತಿ ಎನ್ನುವದು ದೊಡ್ಡ ಮರವಿದ್ದಂತೆ ಎಲ್ಲ ಮತಗಳು ಆ ಮರದ ರೆಂಬೆ ಕೊಂಬೆಗಳು ಇದ್ದಂತೆ ಆದ್ದರಿಂದ ಪ್ರತಿಯೊಬ್ಬರಿಗೆ ಮರವೇ ಆಧಾರವಾಗಿರುತ್ತದೆ ಎಂದು ತಿಳಿಸಿದ್ದರು ಎಂದು ಮಠದ ಭಕ್ತರಾಗಿರುವ ರಾಘವೇಂದ್ರ ಕಾಮನಟಗಿ ನೆನಪಿಸಿಕೊಂಡದರು.

ಇನ್ನು ನವೆಂಬರ್ 2014 ರಲ್ಲಿ ತಾಲ್ಲೂಕಿನ ಕೊಡೇಕಲ್ಲದ ದುರದುಂಡೇಶ್ವರ ಮಠಕ್ಕೆ ಭೇಟಿ ನೀಡಿ ಇಲ್ಲಿ ನಡೆದ ಕಾರ್ತಿಕೋತ್ಸವ ಮತ್ತು ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಆ ಸಂದರ್ಭವನ್ನು ಎಂದು ದುರದುಂಡೇಶ್ವರ ಮಠದ ಪೀಠಾಧಿಪತಿ ಶಿವಕುಮಾರ ದೇವರು ನೆನಪಿಸಿಕೊಂಡರು.

ಪೇಜಾವರ ಶ್ರೀಪಾದರು ಸಮಸ್ತ ಹಿಂದು ಸಮಾಜದ ಮತ್ತು ಎಲ್ಲ ಮಠಾಧಿಶರಿಗೆ ಒಂದು ದೊಡ್ಡ ಶಕ್ತಿಯಾಗಿದ್ದರು ಎಂದು ಹೇಳಿದರು.

ಎಲ್ಲ ಧರ್ಮಗಳ ಸಾರ ಒಂದೇ ಆಗಿದ್ದರೂ ಕೂಡಾ ಧರ್ಮ ಮಾರ್ಗದಲ್ಲಿ ನಡೆಯುವದು ನಮ್ಮೆಲ್ಲರ ಕರ್ತವಾಗಿದೆ ಯತಿಗಳು ಯತಿ ಧರ್ಮವನ್ನು ಪಾಲಿಸಬೇಕು. ಸಂಸಾರಿಕರು ಭಗವಂತನ ಸ್ಮರಣೆಯೊಂದಿಗೆ ಧಾರ್ಮಿಕ ಕಾರ್ಯದಲ್ಲಿ ನಿರಂತರವಾಗಿ ತೊಡಗಿಕೊಳ್ಳಬೇಕು ಎಂದು ಹೇಳಿದ್ದರು ಎಂದು ಛಾಯಾಭಗವತಿ ಅರ್ಚಕ ಶಾಮಸುಂದರ ಜ್ಯೋಶಿ ನೆನಪಿಸಿ ಕೊಂಡರು. ಇದೇ ಸಂದರ್ಭದಲ್ಲಿ ನಾರಾಯಣಪುರ ರಾಘವೇಂದ್ರಸ್ವಾಮಿ ಮಠಕ್ಕೆ ಆಗಮಿಸಿ ಯತಿಗಳ ವೃಂದಾವನಕ್ಕೆ ಪೂಜೆ ಸಲ್ಲಿಸಿ ಬಳಿಕ ಭಕ್ತರಿಗೆ ಆಶಿರ್ವಚನ ನೀಡಿದ್ದರು ಎಂದು ಮಠದ ರಾಘವೇಂದ್ರಾಚಾರ ಮಾರಲಬಾವಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.