
ಪ್ರಜಾವಾಣಿ ವಾರ್ತೆ
ಯಾದಗಿರಿ: 2025-26ನೇ ಸಾಲಿನ ಹಿಂಗಾರು ಹಂಗಾಮಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಬಿಮಾ (ವಿಮಾ) ಯೋಜನೆಯಡಿ ಬೆಳೆ ವಿಮೆ ಕಂತು ಪಾವತಿ ಮಾಡಬೇಕು ಎಂದು ಜಂಟಿ ಕೃಷಿ ನಿರ್ದೇಶಕ ರತೇಂದ್ರನಾಥ ಸೂಗುರ ಹೇಳಿದ್ದಾರೆ.
ಹಿಂಗಾರು ಬೆಳೆಗಳಾದ ಕಡಲೆ, ಜೋಳ, ಕುಸುಮೆ ಬೆಳೆಗಳಿಗೆ ಡಿಸೆಂಬರ್ 15ರ ಒಳಗೆ ವಿಮಾ ಕಂತು ಪಾವತಿಸಬೇಕು. ಭತ್ತ ಬೆಳೆಗೆ ನವೆಂಬರ್ 15ರ ಒಳಗೆ ಸಲ್ಲಿಸಬೇಕು. ಬೇಸಿಗೆ ಬೆಳೆಗಳಾದ ಶೇಂಗಾ, ಭತ್ತ 2026ರ ಫೆಬ್ರವರಿ 27ರ ಒಳಗೆ ರೈತರು ವಿಮಾ ಕಂತು ಸಲ್ಲಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆಸಕ್ತ ರೈತರು ತಾವೂ ಬೆಳೆದ ಬೆಳೆಗಳಿಗೆ, ಬೆಳೆ ವಿಮೆ ಮಾಡಿಸಲು ಸಮೀಪದ ಬ್ಯಾಂಕ್, ರೈತ ಸಂಪರ್ಕ ಕೇಂದ್ರ ಅಥವಾ ಆಯಾ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿ, ಸಾಮಾನ್ಯ ಸೇವಾ ಕೇಂದ್ರ ಹಾಗೂ ಟಾಟಾ ಎಐಜಿ ಇನ್ಶೂರೆನ್ಸ್ ಕಂಪನಿ ವ್ಯವಸ್ಥಾಪಕರನ್ನು ಸಂಪರ್ಕಿಸಬಹುದು ಎಂದು ಹೇಳಿದ್ದಾರೆ.