
ಸುರಪುರ: ‘ಕೆವೈಡಿಸಿಸಿ ಬ್ಯಾಂಕ್ ಬಲವರ್ಧನೆಗೆ ಪ್ರಾಮಾಣಿಕವಾಗಿ ಪ್ರಯತ್ನ ಮಾಡಲಾಗುವುದು. ರೈತರ ಮತ್ತು ಗ್ರಾಹಕರ ಅನುಕೂಲಕ್ಕಾಗಿ ಹುಣಸಗಿ ಮತ್ತು ಕೆಂಭಾವಿ ಪಟ್ಟಣದಲ್ಲಿ ಡಿಸಿಸಿ ಬ್ಯಾಂಕ್ ಶಾಖೆಗಳನ್ನು ಸ್ಥಾಪಿಸಲಾಗುವುದು’ ಎಂದು ಕೆವೈಡಿಸಿಸಿ ಬ್ಯಾಂಕ್‍ನ ಅಧ್ಯಕ್ಷ ವಿಠ್ಠಲ ಯಾದವ ಹೇಳಿದರು.
ನಗರದಲ್ಲಿ ಶನಿವಾರ ತಾಲ್ಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ನೌಕರರ ಸಂಘದವರು ಏರ್ಪಡಿಸಿದ್ದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
‘ಹಿಂದಿನ ಆಡಳಿತ ಮಂಡಳಿಯವರು ಬ್ಯಾಂಕ್‍ನ ಸ್ಥಿತಿಯನ್ನು ಉತ್ತಮ ಹಂತದಲ್ಲಿ ತಂದಿದ್ದಾರೆ. ಕಲಬುರಗಿ-ಯಾದಗಿರಿ ಜಿಲ್ಲೆಯ ಸಹಕಾರ ಕ್ಷೇತ್ರದಲ್ಲಿ ನಾನು ಮತ್ತು ನಮ್ಮ ನಿರ್ದೇಶಕರು ಪಕ್ಷಾತೀತವಾಗಿ ಕೆಲಸ ಮಾಡಲು ಪ್ರಾಮಾಣಿಕವಾಗಿ ಪಯತ್ನ ಮಾಡುತ್ತೇವೆ’ ಎಂದರು.
‘ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಕಾರ್ಯದರ್ಶಿಗಳೇ ಸಂಘದ ಆಧಾರ ಸ್ತಂಭಗಳು. ಅವರು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ಗುತ್ತಿಗೆದಾರ ಸಂಘದಿಂದ ಪಿಕೆಪಿಸಿಎಸ್‍ನಲ್ಲಿ ಚಾಲ್ತಿ ಖಾತೆ ತೆಗೆದು ಠೇವಣಿ ಇಡಲು ವಿನಂತಿಸಲಾಗುವುದು’ ಎಂದರು.
ನಿರ್ದೇಶಕ ಸುರೇಶ್ ಸಜ್ಜನ್ ಮಾತನಾಡಿ, ‘ಸೊಸೈಟಿಗಳ ಕಾರ್ಯದರ್ಶಿಗಳು ಹಲವಾರು ಸಮಸ್ಯೆಗಳ ಮಧ್ಯೆ ಇಂದು ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಸೇವೆ ಅನನ್ಯ. ಅವರನ್ನು ಕಾಯಂ ಗೊಳಿಸಲು ಈ ಹಿಂದೆ ಪ್ರಯತ್ನಿಸಲಾಗಿತ್ತು. ಅವರ ಹುದ್ದೆ ಕಾಯಂ ಗೊಳಿಸುವುದರಿಂದ ಸರ್ಕಾರಕ್ಕೆ ಹೊರೆಯಾಗುವುದಿಲ್ಲ’ ಎಂದರು.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ತಾಲೂಕು ಘಟಕದ ಅಧ್ಯಕ್ಷ ಬಸವರಾಜ ದೋರನಹಳ್ಳಿ ರುಕ್ಮಾಪುರ ಮಾತನಾಡಿದರು.
ಸಹಕಾರಿ ಪಿತಾಮಹ ಸಿದ್ದನಗೌಡ ಪಾಟೀಲ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.
ನಿರ್ದೇಶಕ ಬಸನಗೌಡ ಪಾಟೀಲ ಚಿಂಚೋಳಿ, ಪಿಎಲ್‍ಡಿ ಬ್ಯಾಂಕ್ ನಿರ್ದೇಶಕ ಪ್ರಕಾಶ ಸಜ್ಜನ್, ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ಶಿವಲಿಂಗಪ್ಪ ವೆಂಕಟಗಿರಿ, ಟಿಎಪಿಸಿಎಂಎಸ್ ನಿರ್ದೇಶಕ ಬಸನಗೌಡ ಹೊಸಮನಿ ವೇದಿಕೆಯಲ್ಲಿದ್ದರು.
ತಾಲ್ಲೂಕಿನ ಎಲ್ಲಾ ಸಹಕಾರ ಸಂಘದ ಕಾರ್ಯದರ್ಶಿಗಳು, ಸಿಬ್ಬಂದಿಗಳು ಇದ್ದರು. ಸಿಇಒಗಳಾದ ರಾಜಶೇಖರ ಯಾಳಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಗದೀಶ ದೇಸಾಯಿ ಸೂಗೂರು ಸ್ವಾಗತಿಸಿದರು. ವಸಂತ ಕುಲಕರ್ಣಿ ಕಾಮನಟಗಿ ನಿರೂಪಿಸಿದರು. ಮಲ್ಲು ಬಾದ್ಯಾಪುರ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.