ADVERTISEMENT

ಯಾದಗಿರಿ: ಯಾದವ ಗೊಲ್ಲ ಸಮುದಾಯಕ್ಕೆ ಸಚಿವ ಸ್ಥಾನ ನೀಡಲು ಪಟ್ಟು

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2021, 3:30 IST
Last Updated 11 ಆಗಸ್ಟ್ 2021, 3:30 IST
ಶಾಸಕಿ ಪೂರ್ಣಿಮಾ ಶ್ರೀನಿವಾಸಗೆ ಸಚಿವ ಸ್ಥಾನ ನೀಡಲು ಜಿಲ್ಲಾ ಯಾದವ ಸಂಘ ಮನವಿ ಸಲ್ಲಿಸಿತು
ಶಾಸಕಿ ಪೂರ್ಣಿಮಾ ಶ್ರೀನಿವಾಸಗೆ ಸಚಿವ ಸ್ಥಾನ ನೀಡಲು ಜಿಲ್ಲಾ ಯಾದವ ಸಂಘ ಮನವಿ ಸಲ್ಲಿಸಿತು   

ಯಾದಗಿರಿ: ಹಿರಿಯೂರ ಮತಕ್ಷೇತ್ರ ಶಾಸಕಿ ಪೂರ್ಣಿಮಾ ಶ್ರೀನಿವಾಸಗೆ ಸಚಿವ ಸ್ಥಾನ ನೀಡುವಂತೆ ಅಗ್ರಹಿಸಿ ಜಿಲ್ಲಾ ಯಾದವ ಗೊಲ್ಲ ಸಂಘವು ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಿದೆ.

ಈ ಸಂದರ್ಭದಲ್ಲಿ ಜಿಲ್ಲಾ ಘಟಕದ ಅಧ್ಯಕ್ಷ ತಾಯಪ್ಪ ಯಾದವ ಕಾಳೆಬೆಳಗುಂದಿ ಮಾತನಾಡಿ, ಗೊಲ್ಲ ಜನಾಂಗದ ಏಕೈಕ ಮಹಿಳಾ ಶಾಸಕಿ ಕೆ. ಪೂರ್ಣಿಮಾ ಅವರಿಗೆ ಸಚಿವ ಸ್ಥಾನ ನೀಡುವ ಮೂಲಕ ಸಮಾಜಕ್ಕೆ ನ್ಯಾಯ ಒದಗಿಸುವಂತೆ ಆಗ್ರಹಿಸಿದರು.

ಗೊಲ್ಲ ಸಮುದಾಯವು ಶತ ಶತಮಾನಗಳ ಇತಿಹಾಸ ಹೊಂದಿದೆ. ಅಲೆಮಾರಿಗಳಾಗಿ ಜೀವನ ಸಾಗಿಸುತ್ತಿದ್ದಾರೆ. ರಾಜ್ಯದಲ್ಲಿ ಅತಿ ಹೆಚ್ಚು ಹಿಂದುಳಿದ ಸಮುದಾಯಕ್ಕೆ ಸರ್ಕಾರ ರಾಜಕೀಯ ಸ್ಥಾನಮಾನ ಕಲ್ಪಿಸದಿರುವುದು ನೋವುಂಟು ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ನಮ್ಮ ಸಮುದಾಯದ ಶಾಸಕಿಗೆ ಸಚಿವ ಸ್ಥಾನ ಕಲ್ಪಿಸುವ ಮೂಲಕ ಸಾಮಾಜಿಕ ನ್ಯಾಯ ಒದಗಿಸಿಕೊಡಬೇಕೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಶಹಾಪುರ ತಾಲ್ಲೂಕುಅಧ್ಯಕ್ಷ ಲಕ್ಷ್ಮಣ ಯಾದವ, ಮಾಳಪ್ಪ ಯಾದವ, ನರಸಿಂಹ ಯಾದವ ಬದ್ದೇಪಲ್ಲಿ, ಅಂಬ್ರೇಶ ಯಾದವ, ನರಸಿಂಹ ಚಂಡ್ರಿಕಿ, ಗುರುಬದ್ದೇಪಲ್ಲಿ, ಸಾಯಬಣ್ಣ ಪುರ್ಲೆ, ಸುರೇಶ ಯಾದವ ಪೇಠ ಅಮ್ಮಾಪುರ, ಭೀಮಣ್ಣ ಮುಡಬೂಳ, ವೆಂಕಟೇಶ ಯಾದವ ಬದ್ದೇಪಲ್ಲಿ, ನಿಂಗಪ್ಪ ಕಟ್ಟಿಮನಿ, ಸತೀಶ ಯಾದವ ಪ್ರಮುಖರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.