ADVERTISEMENT

ಅವಧಿ ಮುಗಿದ ಮದ್ಯ ನಾಶ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2019, 9:48 IST
Last Updated 6 ಡಿಸೆಂಬರ್ 2019, 9:48 IST
ಯಾದಗಿರಿ ಹೊರವಲಯದ ಮದ್ಯ ಸಂಗ್ರಹ ಮಳಿಗೆ ಆವರಣದಲ್ಲಿ ಅವಧಿ ಮುಗಿದ ಮದ್ಯವನ್ನು ಅಧಿಕಾರಿಗಳು ನಾಶ ಪಡಿಸಿದರು
ಯಾದಗಿರಿ ಹೊರವಲಯದ ಮದ್ಯ ಸಂಗ್ರಹ ಮಳಿಗೆ ಆವರಣದಲ್ಲಿ ಅವಧಿ ಮುಗಿದ ಮದ್ಯವನ್ನು ಅಧಿಕಾರಿಗಳು ನಾಶ ಪಡಿಸಿದರು   

ಯಾದಗಿರಿ: ನಗರದ ಹೊರವಲಯದ ಕರ್ನಾಟಕ ರಾಜ್ಯ ಪಾನಿಯ ನಿಗಮ ನಿಯಮಿತ (ಮದ್ಯ ಸಂಗ್ರಹ ಮಳಿಗೆ) ಆವರಣದಲ್ಲಿ ಅವಧಿ ಮುಗಿದ ₹ 14.50 ಲಕ್ಷ ಮೌಲ್ಯದ ಮದ್ಯವನ್ನು ಅಧಿಕಾರಿಗಳ ಸಮ್ಮುಖದಲ್ಲಿ ನಾಶ ಪಡಿಸಲಾಯಿತು.

ಅಬಕಾರಿ ಇಲಾಖೆ ಉಪ ಅಧೀಕ್ಷಕ ಮಹ್ಮದ್‌ ಇಸ್ಮಾಯಿಲ್ ಮದ್ಯ ಸಂಗ್ರಹ ಮಳಿಗೆಗೆ ಭೇಟಿ ನೀಡಿ ಪರಿಶೀಲಿಸಿದ ನಂತರ ಪರಿಸರಕ್ಕೆ ಹಾನಿಯಾಗದಂತೆ ಎಚ್ಚರಿಕೆ ವಹಿಸಿ ನಿರ್ಮಾಣ ಮಾಡಿದ ದೊಡ್ಡ ಗುಂಡಿಯಲ್ಲಿ ಸುರಿದು ನಂತರ ಮಣ್ಣು ಮುಚ್ಚಿಸಿದರು.

ಅಬಕಾರಿ ಇಲಾಖೆ ನಿರೀಕ್ಷಕ ಶಬ್ಬಿರ್, ಉಪತಹಶೀಲ್ದಾರ್ ಮಲ್ಲಿಕಾರ್ಜುನ್ ತಂಗಡಗಿ, ಮದ್ಯ ಸಂಗ್ರಹ ಮಳಿಗೆ ವ್ಯವಸ್ಥಾಪಕ ವೆಂಕಟೇಶ, ಅಡಿವೆಪ್ಪ ಭಜಂತ್ರಿ, ಎಂ.ಎಸ್ ಪಾಟೀಲ, ಯಲ್ಲಾರೆಡ್ಡಿ, ವೆಂಕಟೇಶ ಹಾಗೂ ಸಿಬ್ಬಂದಿ ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.