ADVERTISEMENT

ಅವಧಿ ಮುಗಿದ ₹3 ಲಕ್ಷ ಮೌಲ್ಯದ ಮದ್ಯ ನಾಶ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2020, 15:11 IST
Last Updated 7 ಫೆಬ್ರುವರಿ 2020, 15:11 IST
ಯಾದಗಿರಿಯ ರಾಜ್ಯ ಪಾನೀಯ ನಿಗಮ ನಿಯಮಿತ ಮದ್ಯ ಸಂಗ್ರಹ ಮಳಿಗೆಯಲ್ಲಿ ಮಾರಾಟವಾಗದೆ ಅವಧಿ ಮುಗಿದ ಬಿಯರ್‌ಗಳನ್ನು ಶುಕ್ರವಾರ ನಾಶ ಮಾಡಲಾಯಿತು
ಯಾದಗಿರಿಯ ರಾಜ್ಯ ಪಾನೀಯ ನಿಗಮ ನಿಯಮಿತ ಮದ್ಯ ಸಂಗ್ರಹ ಮಳಿಗೆಯಲ್ಲಿ ಮಾರಾಟವಾಗದೆ ಅವಧಿ ಮುಗಿದ ಬಿಯರ್‌ಗಳನ್ನು ಶುಕ್ರವಾರ ನಾಶ ಮಾಡಲಾಯಿತು   

ಯಾದಗಿರಿ: ನಗರ ಹೊರವಲಯದಲ್ಲಿರುವ ರಾಜ್ಯ ಪಾನೀಯ ನಿಗಮ ನಿಯಮಿತದ ಮದ್ಯ ಸಂಗ್ರಹ ಮಳಿಗೆಯಲ್ಲಿ ಅವಧಿ ಮುಗಿದ ₹3 ಲಕ್ಷ ಮೌಲ್ಯದ ವಿವಿಧ ಬ್ರಾಂಡ್‌ಗಳ ಬಿಯರ್ ಮದ್ಯವನ್ನು ಮಳಿಗೆ ಆವರಣದಲ್ಲಿ ನಾಶಪಡಿಸಲಾಯಿತು.

ಅಬಕಾರಿ ಇಲಾಖೆ ಉಪ ಅಧೀಕ್ಷಕ ಮಹಮ್ಮದ್ ಇಸ್ಮಾಯಿಲ್ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಪರಿಸರಕ್ಕೆ ಹಾನಿಯಾಗದಂತೆ ಎಚ್ಚರಿಕೆ ವಹಿಸಿ ದೊಡ್ಡ ಗುಂಡಿತೆಗೆದು ಸುರಿದು ನಂತರ ಮಣ್ಣು ಮುಚ್ಚಲಾಯಿತು.

ಉಪ ತಹಶೀಲ್ದಾರ್ ಬಸವರಾಜ, ಮದ್ಯ ಸಂಗ್ರಹ ಮಳಿಗೆ ವ್ಯವಸ್ಥಾಪಕ ವೆಂಕಟೇಶ, ಅಡಿವೆಪ್ಪ ಭಜಂತ್ರಿ, ಎಂ.ಎಸ್.ಪಾಟೀಲ, ಯಲ್ಲಾರಡ್ಡಿ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.