ADVERTISEMENT

ಹೆಗ್ಗಣಗೇರಾ: ದ್ಯಾವಮ್ಮದೇವಿ ಜಾತ್ರಾ ಮಹೋತ್ಸವ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2022, 6:33 IST
Last Updated 16 ಫೆಬ್ರುವರಿ 2022, 6:33 IST
ಸೈದಾಪುರ ಸಮೀಪದ ಹೆಗ್ಗಣಗೇರಾ ಗ್ರಾಮದ ದ್ಯಾವಮ್ಮದೇವಿ ಜಾತ್ರೆ ನಿಮಿತ್ತ ನಡೆದ ಗಂಗಾಸ್ನಾನದಲ್ಲಿ ಪಾಲ್ಗೊಂಡ ಗ್ರಾಮಸ್ಥರು
ಸೈದಾಪುರ ಸಮೀಪದ ಹೆಗ್ಗಣಗೇರಾ ಗ್ರಾಮದ ದ್ಯಾವಮ್ಮದೇವಿ ಜಾತ್ರೆ ನಿಮಿತ್ತ ನಡೆದ ಗಂಗಾಸ್ನಾನದಲ್ಲಿ ಪಾಲ್ಗೊಂಡ ಗ್ರಾಮಸ್ಥರು   

ಹೆಗ್ಗಣಗೇರಾ (ಸೈದಾಪುರ): ಸಮೀಪದ ಹೆಗ್ಗಣಗೇರಾ ಗ್ರಾಮದಲ್ಲಿರುವ ದ್ಯಾವಮ್ಮದೇವಿಯ ಜಾತ್ರೆಯು ಅತ್ಯಂತ ಸರಳವಾಗಿ ಜರುಗಿತು.

ಪ್ರತಿ ಮೂರು ವರ್ಷಕ್ಕೊಮ್ಮ ದ್ಯಾವಮ್ಮದೇವಿ ಜಾತ್ರೆ ನಡೆಯುತ್ತದೆ. ಮಂಗಳವಾರ ಬೆಳಿಗ್ಗೆ ಗ್ರಾಮದ ಹಿರಿಯರು, ಮುಖಂಡರು ಮುಂದಾಳತ್ವದಲ್ಲಿ ದೇವಸ್ಥಾನದಿಂದದ್ಯಾವಮ್ಮದೇವಿ ಮೂರ್ತಿಯನ್ನು ಹೊರಗಡೆ ತಂದು ಡೊಳ್ಳು, ಜಾಗಟೆ, ಹಲಗೆಯ ನಾದ ಮತ್ತು ಮಹಿಳೆಯರು ಕುಂಭ, ಕಳಸದೊಂದಿಗೆ ಪಲ್ಲಕ್ಕಿ ಮೆರವಣಿಗೆ ಮೂಲಕ ಹಳ್ಳಕ್ಕೆ ತೆಗೆದುಕೊಂಡು ಬರಲಾಯಿತು. ಅಲ್ಲಿ ಗಂಗಾಸ್ನಾನ ಮಾಡಿಸಿ ದೇವಿಯನ್ನು ದೇವಸ್ಥಾನದ ಸುತ್ತಲೂ ಐದು ಬಾರಿ ಪ್ರದಕ್ಷಿಣೆಯನ್ನು ಹಾಕಿ ನಂತರ ಭಕ್ತರ ಜೈಘೋಷಗಳೊಂದಿಗೆ ದೇವಸ್ಥಾನದ ಒಳಗಡೆ ಪ್ರತಿಷ್ಠಾಪಿಸಲಾಯಿತು.

ಜಾತ್ರೆಯ ನಿಮಿತ್ತ ಗ್ರಾಮದ ಭಕ್ತರು ಮನೆ ಮನೆಗಳಲ್ಲಿ ಹುಗ್ಗಿ, ಹೋಳಿಗೆ, ಕಡಬು,ಅನ್ನ, ಸಾಂಬಾರು ಸೇರಿದಂತೆ ವಿವಿಧ ರೀತಿಯ ಖಾದ್ಯಗಳನ್ನು ತಯಾರಿಸಿ, ತೆಂಗು, ಊದುಬತ್ತಿಯೊಂದಿಗೆ ದೇವಿಗೆ ಅರ್ಪಿಸಿ ಹರಕೆಯನ್ನು ತೀರಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.