ADVERTISEMENT

ವಿದ್ಯುತ್ ಶಾರ್ಟ್ ಸರ್ಕ್ಯೂಟ್‌: ಸಾಮಗ್ರಿ ಭಸ್ಮ

ಚಟ್ನಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಅವಘಢ

​ಪ್ರಜಾವಾಣಿ ವಾರ್ತೆ
Published 23 ಮೇ 2020, 16:14 IST
Last Updated 23 ಮೇ 2020, 16:14 IST
ಚಟ್ನಳ್ಳಿ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಅವಘಡ ಸಂಭವಿಸಿ ದಾಖಲಾತಿ ಮತ್ತು ಸಾಮಗ್ರಿಗಳು ಆಹುತಿಯಾಗಿವೆ
ಚಟ್ನಳ್ಳಿ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಅವಘಡ ಸಂಭವಿಸಿ ದಾಖಲಾತಿ ಮತ್ತು ಸಾಮಗ್ರಿಗಳು ಆಹುತಿಯಾಗಿವೆ   

ಯಾದಗಿರಿ: ನಾಯ್ಕಲ್ ಸಮೀಪದ ಚಟ್ನಳ್ಳಿ ಗ್ರಾಮ ಪಂಚಾಯಿತಿ ಕಟ್ಟಡದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಕಚೇರಿಯಲ್ಲಿನ ದಾಖಲಾತಿ ಮತ್ತು ಸಾಮಗ್ರಿಗಳು ಭಸ್ಮಗೊಂಡಿರುವ ಘಟನೆ ಶನಿವಾರ ಸಂಭವಿಸಿದೆ.

ಶಹಾಪುರದಿಂದ ಅಗ್ನಿ ಶಾಮಕದಳ ವಾಹನ ಬರುವಷ್ಟರಲ್ಲಿ ಕಚೇರಿಯ ದಾಖಲಾತಿಗಳು ಬೆಂಕಿಗೆ ಆಹುತಿಯಾಗಿವೆ. ಬೆಂಕಿಯನ್ನು ಆರಿಸುವಲ್ಲಿ ಗ್ರಾಮಸ್ಥರು ಶ್ರಮಿಸಿದ್ದಾರೆ. ಕೋಣೆಯಲ್ಲಿ ಇಡಲಾದ ಚುನಾವಣೆಯ ಮತದಾನ ವೇಳೆ ವಿಕಲಚೇತನರಿಗೆ ಬಳಕೆಯಾಗುವ ತ್ರಿಚಕ್ರ ಬೈಸಿಕಲ್‍ಗಳು ಬೆಂಕಿಗೆ ಆಹುತಿಯಾಗಿವೆ. ಕಟ್ಟಡದಪಕ್ಕದ ಕೋಣೆಯಲ್ಲಿ ಸಾರ್ವಜನಿಕ ಗ್ರಂಥಾಲಯ ಇದೆ. ಅದೃಷ್ಟವಾಶತ್ ಗ್ರಂಥಾಲಯಕ್ಕೆ ಯಾವುದೇ ಅನಾಹುತ ಸಂಭವಿಸಿಲ್ಲ.

ಸ್ಥಳಕ್ಕೆ ಶಹಾಪುರ ಠಾಣೆ ಪೊಲೀಸರು, ಕಂದಾಯ ಇಲಾಖೆ ಅಧಿಕಾರಿಗಳು, ಗ್ರಾಪಂ ಪಿಡಿಒ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಶಹಾಪುರ ಪೊಲೀಸ್ ಠಾಣೆಗೆ ಚಟ್ನಳ್ಳಿ ಗ್ರಾಪಂ ಪಿಡಿಒ ದೂರು ನೀಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.