ಗುರುಮಠಕಲ್: ನೂತನ ತಾಲ್ಲೂಕು ಕೇಂದ್ರವಾದರೂ ಇನ್ನೂ ಯಾದಗಿರಿಯತ್ತ ಮುಖಮಾಡುವುದು ತಪ್ಪುತ್ತಿಲ್ಲ. ಕನಿಷ್ಠ ನೂತನ ತಾಲ್ಲೂಕಿಗೆ ಪ್ರತ್ಯೇಕ ಅಗ್ನಿಶಾಮಕ ಠಾಣೆಯನ್ನು ಸ್ಥಾಪಿಸಲು ಶೀಘ್ರ ಕರ್ಮವಹಿಸಿ ಎಂದು ಕರ್ನಾಟಕ ರಕ್ಷಣ ವೇದಿಕೆ ತಾಲ್ಲೂಕು ಘಟಕದ ಅಧ್ಯಕ್ಷ ಶರಣಬಸಪ್ಪ ಎಲ್ಲೇರಿ ಮನವಿ ಮಾಡಿದರು.
ಯಾದಗಿರಿ ನಗರದ ಅಗ್ನಿಶಾಮಕ ದಳದ ಕಚೇರಿಯಲ್ಲಿ ಮನವಿ ಪತ್ರ ನೀಡಿ ಮಾತನಾಡಿದ ಅವರು, ‘ನಮ್ಮ ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿ ಅಗ್ನಿ ಅವಘಡಗಳು ಜರುಗಿದರೆ ಜಿಲ್ಲಾ ಕೇಂದ್ರದಿಂದಲೇ ವಾಹನ ಬರಬೇಕಿದೆ. ಆದರೆ, ಕನಿಷ್ಠ 45 ರಿಂದ ಸುಮಾರು 70 ಕಿ.ಮೀ. ದೂರದಿಂದ ಅಗ್ನಿಶಾಮಕ ವಾಹನ ಬರುವಷ್ಟಕ್ಕೆ ಬಹುತೇಕ ಹಾನಿ ಮತ್ತು ನಷ್ಟ ಆಗುತ್ತಿರುವುದು ಈಗಾಗಲೇ ಕಂಡುಬಂದಿದೆ’ ಎಂದರು.
ಜನತೆಯ ಸುರಕ್ಷತೆಯ ದೃಷ್ಟಿಯಿಂದ ಇನ್ನೂ ಹೆಚ್ಚಿನ ಅನಾಹುತಗಳಾಗುವ ಮುನ್ನವೇ ತಾಲ್ಲೂಕು ಕೇಂದ್ರದಲ್ಲಿ ಪ್ರತ್ಯೇಕ ಅಗ್ನಿಶಾಮಕ ಠಾಣೆ ಸ್ಥಾಪನೆ ಮಾಡಬೇಕಿದೆ ಎಂದು ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.