
ಪ್ರಾತಿನಿಧಿಕ ಚಿತ್ರ
ಯಾದಗಿರಿ: ಜಿಲ್ಲೆಯ ವಡಗೇರಾ ತಾಲ್ಲೂಕಿನ ಕೋರ ಗ್ರೀನ್ ಶುಗರ್ ಫ್ಯಾಕ್ಟರಿಯಲ್ಲಿ ಅ.29ರಂದು ನಡೆಸಿದ ಅಬಕಾರಿ ದಾಳಿಯಲ್ಲಿ ವಶಪಡಿಸಿಕೊಂಡ ಗಾಂಜಾ ಪದಾರ್ಥಗಳನ್ನು ನಾಶಪಡಿಸಲಾಗಿದೆ ಎಂದು ಅಬಕಾರಿ ಉಪ ಆಯುಕ್ತೆ ಶಾರದಾ ಸಿ.ಕೋಲಕಾರ ತಿಳಿಸಿದರು.
ದಾಳಿ ವೇಳೆ ಅಕ್ರಮ ಪತ್ತೆಯಾಗಿದ್ದ ಚಟುವಟಿಕೆಗಳಿಗಳಲ್ಲಿ ಸಂಗ್ರಹಿಸಿದ್ದ ಗಾಂಜಾ ವಶಪಡಿಸಿಕೊಂಡು, ಅಬಕಾರಿ ಜಿಲ್ಲಾ ಕಚೇರಿಯಲ್ಲಿ ಸಂಗ್ರಹಿಸಿಡಲಾಗಿತ್ತು. ಸಂಗ್ರಹಿಸಿದ್ದ 971 ಗಾಂಜಾ ಗಿಡಗಳು, 158.475 ಒಣಗಿದ ಗಾಂಜಾ, 7915 ಗಾಂಜಾ ಮಿಶ್ರಿತ ಚಾಕೋಲೇಟ್ ಗುಳಿಗೆಗಳನ್ನು ನ್ಯಾಯಾಲಯದ ನಿರ್ದೇಶನದಂತೆ ನಾಶಪಡಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಗಾಂಜಾ ಪದಾರ್ಥಗಳ ನಾಶ ಪಡಿಸುವ ವೇಳೆ ಜಂಟಿ ಅಬಕಾರಿ ಆಯುಕ್ತರ ಸಂಗಣ್ಣಗೌಡ, ಅಬಕಾರಿ ಉಪ ಆಯುಕ್ತರಾದ ಶಾರದಾ.ಸಿ.ಕೋಲಕಾರ ಮತ್ತು ಸಿ.ಕೆ.ಮಹಿಂದ್ರ, ಅಬಕಾರಿ ಅಧಿಕ್ಷಕರಾದ ಇಂದುದುಬಾಯಿ, ಹರ್ಷರಾಜ್.ಬಿ., ಇಲಾಖೆಯ ಶ್ರೀಶೈಲ ಒಡೆಯರ್, ಕೇದಾರನಾಥ ಎಸ್.ಟಿ., ಶಿವಾನಂದ ಪಾಟೀಲ, ಶರಣಗೌಡ ಬಿರಾದಾರ, ಪ್ರವೀಣಕುಮಾರ, ಪಾಂಡುರಂಗ, ರೇಣುಕಮ್ಮಾ, ಮಹೇಶ ಚೌಧರಿ, ಅನಿಲ್ ಕುಮಾರ, ಶರೀಫ್ ವಾಲಿಕರ್, ಮಹ್ಮದ್ ರಫೀ, ಮಹ್ಮದ ಸುಭಾನಿ, ಮಡಿವಾಳಪ್ಪ, ಪ್ರವೀಣಕುಮಾರ, ಶೇಖರ ಮೋಹನ, ಬಸ್ಸಪ್ಪ, ಶರಣಪ್ಪ ಮತ್ತು ಡಿಸಿಇ ಕಛೇರಿ ಸಿಬ್ಬಂದಿ ರಘುವೀರಸಿಂಗ ಠಾಕೂರ ಹಾಗೂ ಅರುಣಕುಮಾರ ಉಪಸ್ಥಿತರಿದ್ದರು ಎಂದು ಅವರು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.