ADVERTISEMENT

ಸುರಪುರ: ಭಾರತ ಬಂದ್‍ಗೆ ಬೆಂಬಲ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2021, 16:53 IST
Last Updated 26 ಸೆಪ್ಟೆಂಬರ್ 2021, 16:53 IST
ಸುರಪುರದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದವರು ಭಾನುವಾರ ಭಾರತ ಬಂದ್ ಕರ ಪತ್ರ ಬಿಡುಗಡೆ ಮಾಡಿ ಘೋಷಣೆ ಕೂಗಿದರು. ಮಲ್ಲಯ್ಯ ವಗ್ಗಾ, ದೇವಿಂದ್ರಪ್ಪ ಪತ್ತಾರ, ಅಯ್ಯಣ್ಣ ಹಾಲಭಾವಿ, ಹಣಮಂತ್ರಾಯ ಮಡಿವಾಳ ಇದ್ದರು
ಸುರಪುರದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದವರು ಭಾನುವಾರ ಭಾರತ ಬಂದ್ ಕರ ಪತ್ರ ಬಿಡುಗಡೆ ಮಾಡಿ ಘೋಷಣೆ ಕೂಗಿದರು. ಮಲ್ಲಯ್ಯ ವಗ್ಗಾ, ದೇವಿಂದ್ರಪ್ಪ ಪತ್ತಾರ, ಅಯ್ಯಣ್ಣ ಹಾಲಭಾವಿ, ಹಣಮಂತ್ರಾಯ ಮಡಿವಾಳ ಇದ್ದರು   

ಸುರಪುರ: ವಿವಿಧ ರೈತ ಸಂಘಟನೆಗಳು ಸೋಮವಾರ ಕರೆ ನೀಡಿರುವ ಭಾರತ ಬಂದ್ ಬೆಂಬಲಿಸಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಎಐಟಿಯುಸಿ ಮುಖಂಡರು ಭಾನುವಾರ ಗಾಂಧಿವೃತ್ತದಲ್ಲಿ ಕರಪತ್ರ ಬಿಡುಗಡೆ ಮಾಡಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಅಯ್ಯಣ್ಣ ಹಾಲಭಾವಿ ಮಾತನಾಡಿ, ‘ಕೃಷಿ ವಿರೋಧಿ ಕಾಯ್ದೆಗಳ ಹಿಂತೆಗೆತಕ್ಕೆ ಒತ್ತಾಯಿಸಿ ನಡೆಯುತ್ತಿರುವ ಪ್ರತಿಭಟನೆಗೆ ಕೇಂದ್ರ ಸರ್ಕಾರ ಕವಡೆ ಕಾಸಿನ ಕಿಮ್ಮತ್ತು ನೀಡುತ್ತಿಲ್ಲ. ಇದನ್ನು ಪ್ರತಿಭಟಿಸಿ ಸೋಮವಾರ ನಡೆಯುತ್ತಿರುವ ಭಾರತ ಬಂದ್‍ಗೆ ನಗರದಲ್ಲಿ ಉತ್ತಮ ಬೆಂಬಲ ವ್ಯಕ್ತವಾಗಿದೆ’ ಎಂದರು.

ಎಐಟಿಯುಸಿ ಜಿಲ್ಲಾ ಘಟಕದ ಉಪಾಧ್ಯಕ್ಷ ದೇವಿಂದ್ರಪ್ಪ ಪತ್ತಾರ ಮಾತನಾಡಿ, ‘ಬೆಳಿಗ್ಗೆ 10 ಗಂಟೆಗೆ ವೇಣುಗೋಪಾಲಸ್ವಾಮಿ ದೇವಸ್ಥಾನದಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ. ಗಾಂಧಿವೃತ್ತದಲ್ಲಿ ಬಹಿರಂಗ ಸಭೆ ನಡೆಯಲಿದೆ’ ಎಂದರು.

ADVERTISEMENT

ವಿವಿಧ ಸಂಘಟನೆಗಳು ಮುಖಂಡರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.