ಅಮಾನತು
ಯಾದಗಿರಿ: ಅಕ್ರಮವಾಗಿ ಮರಳು ಸಾಗಣೆಗೆ ಬಳಸುತ್ತಿದ್ದ ವಾಹನಗಳನ್ನು ಬಿಟ್ಟು ಕಳುಹಿಸಿದ ಆರೋಪದಡಿ ಸುರಪುರ ಠಾಣೆಯ ಇಬ್ಬರು ಎಎಸ್‌ಐ ಸೇರಿ ನಾಲ್ವರನ್ನು ಅಮಾನತು ಮಾಡಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಸುರಪುರ ವಿಭಾಗದ ಡಿವೈಎಸ್‌ಪಿ ಅವರು ನೀಡಿದ್ದ ವರದಿ ಆಧರಿಸಿ ಎಎಸ್‌ಐಗಳಾದ ನಿಂಗಪ್ಪ, ಬಲರಾಮ, ಕಾನ್‌ಸ್ಟೆಬಲ್‌ಗಳಾದ ತಾಯಣ್ಣ ಮತ್ತು ಲಕ್ಷ್ಮಣ ಅವರನ್ನು ಅಮಾನತು ಮಾಡಲಾಗಿದೆ ಎಂದು ತಿಳಿಸಿವೆ.
ಕೃಷ್ಣಾ ನದಿ ತೀರದಿಂದ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಆರು ಟಿಪ್ಪರ್‌ಗಳನ್ನು ದೇವಿಕೇರಾ ಕ್ರಾಸ್ ಸಮೀಪ ತಡೆಯದೆ ಬಿಟ್ಟು ಕಳುಹಿಸಿರುವುದು ಇಲಾಖೆ ವಿಚಾರಣೆಯಲ್ಲಿ ಮೇಲ್ನೋಟಕ್ಕೆ ಸಾಬೀತಾಗಿದೆ ಎಂದು ಹೇಳಿವೆ.
ಅಕ್ರಮ ಸಂಬಂಧ ವಶಕ್ಕೆ ಪಡೆದಿರುವ ವಾಹನಗಳ ನೋಂದಣಿ ರದ್ದತಿಗಾಗಿ ಯಾದಗಿರಿ ಹಾಗೂ ಕಲಬುರಗಿ ಆರ್‌ಟಿಒ ಕಚೇರಿಗೆ ಪತ್ರ ಬರೆಯಲಾಗಿದೆ. ಈಗಾಗಲೇ 3-4 ವಾಹನಗಳ ನೋಂದಣಿ ರದ್ದಾಗಿದೆ ಎಂದು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.