
ಸುರಪುರ: ‘ಬೆಂಗಳೂರು ಸಮೀಪದ ನೆಲಮಂಗಲದ ಪ್ರವಾಡ ಬಸವಣ್ಣ ದೇವರ ಮಠದಲ್ಲಿ ಭಾನುವಾರ ಜರುಗಿದ ಶರಣ ಸಂಸ್ಕೃತಿ ಅಭಿಯಾನದಲ್ಲಿ ಕಾಯಕ ಜೀವಿ ಸುರಪುರದ ಗಂಗಾಧರ ಹುಲಕಲ್‍ಗೆ ಡೋಹರ ಕಕ್ಕಯ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು.
ವೀರಶೈವ ಲಿಂಗಾಯತ ನಿವೃತ್ತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಸಹಯೋಗದೊಂದಿಗೆ ಮಡಿವಾಳ ಮಾಚಿದೇವ ಮತ್ತು ಡೋಹರ ಕಕ್ಕಯ್ಯ ಜಯಂತಿ ನಿಮಿತ್ತವಾಗಿ ಶರಣ ಸಂಸ್ಕೃತಿ ಅಭಿಯಾನ ಆಯೋಜಿಸಲಾಗಿತ್ತು.
‘50 ವರ್ಷಗಳಿಂದ ಚರ್ಮಗಾರಿಕೆ ವೃತ್ತಿಯಲ್ಲಿ ತೊಡಗಿಸಿಕೊಂಡಿರುವ ಗಂಗಾಧರ್ ಹುಲಕಲ್ ಅವರು ಶರಣ ಸಂಸ್ಕೃತಿ ಪರಂಪರೆ ಮೈಗೂಡಿಸಿಕೊಂಡಿರುತ್ತಾರೆ. ಚರ್ಮಗಾರಿಕೆ ಕಾಯಕವೇ ಇವರಿಗೆ ಜೀವಾಳವಾಗಿದೆ. ತಂತ್ರಜ್ಞಾನದಿಂದ ಬದಲಾದ ವರ್ತಮಾನಕ್ಕೆ ತಕ್ಕಂತೆಯೇ ಉದ್ಯೋಗ ಮುಂದುವರಿಸಿಕೊಂಡು ಬಂದಿರುವುದು ಪ್ರಶಂಸನೀಯ’ ಎಂದು ಮಠದ ಸಿದ್ದಲಿಂಗಯ್ಯಸ್ವಾಮಿ ಹೇಳಿದರು.
ಸಂಘದ ಅಧ್ಯಕ್ಷ ನಾಗರಾಜು, ಪ್ರಶಸ್ತಿ ದಾನಿಗಳಾದ ಗಂಗಾಧರಯ್ಯ, ಆರ್.ಮಹಾದೇವಯ್ಯ, ಹುಲಕಲ್ ಕುಟುಂಬಸ್ಥರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.