ADVERTISEMENT

ಯಾದಗಿರಿ | ಪಿಯು ಫಲಿತಾಂಶ; ಟಾಪ್‌ 10ರೊಳಗೆ ಬಾಲಕಿಯರೇ ಮೇಲುಗೈ

ಕಲಾ, ವಿಜ್ಞಾನ, ವಾಣಿಜ್ಯ ವಿಭಾಗದಲ್ಲಿ ಮೂವರು ಬಾಲಕಿಯರೇ ಟಾಪ್‌

ಬಿ.ಜಿ.ಪ್ರವೀಣಕುಮಾರ
Published 11 ಏಪ್ರಿಲ್ 2025, 4:23 IST
Last Updated 11 ಏಪ್ರಿಲ್ 2025, 4:23 IST
ಯಾದಗಿರಿಯ ಪದವಿ ಪೂರ್ವ ಉಪನಿರ್ದೇಶಕರ ಕಚೇರಿ
ಯಾದಗಿರಿಯ ಪದವಿ ಪೂರ್ವ ಉಪನಿರ್ದೇಶಕರ ಕಚೇರಿ   

ಯಾದಗಿರಿ: ಜಿಲ್ಲೆಯಲ್ಲಿ ಈಚೆಗೆ ಪ್ರಕಟಗೊಂಡ ಪಿಯು ಫಲಿತಾಂಶದಲ್ಲಿ ಟಾಪ್‌ 10ರೊಳಗೆ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ.

ಕಲಾ, ವಿಜ್ಞಾನ, ವಾಣಿಜ್ಯ ವಿಭಾಗದಲ್ಲಿ ಮೂವರು ವಿದ್ಯಾರ್ಥಿನಿಯರೇ ಟಾಪ್‌ ಪಡೆದಿದ್ದಾರೆ. ಜೊತೆಗೆ ಮೂರು ವಿಭಾಗಗಳಲ್ಲಿ ಬಾಲಕಿಯರೇ ಹೆಚ್ಚಿನ ಅಂಕಗಳನ್ನು ಪಡೆದಿದ್ದಾರೆ.

ಕಲಾ ವಿಭಾಗದಲ್ಲಿ ಟಾಪ್-10:
ಶಹಾಪುರ ಸರ್ಕಾರಿ ಬಾಲಕಿಯರ ಪಿಯು ಕಾಲೇಜು ನಸೀಮಾ ಬಾನು, ಶಹಾಪುರ ಸರ್ಕಾರಿ ಪಿಯು ಕಾಲೇಜು ಸತೀಶ ಜಾಧವ್‌, ಗೋಗಿ ಪಿಯು ಕಾಲೇಜು ಹನುಮಂತರಾಯ ಎಸ್‌ ಏವೂರು, ಸಗರ ಸರ್ಕಾರಿ ಪಿಯು ಕಾಲೇಜು ಜ್ಯೋತಿ, ದೋರನಹಳ್ಳಿ ಡಿ. ದೇವರಾಜ್ ಅರಸ ಕಾಲೇಜು ದೇವಮ್ಮ, ಗುರುಮಠಕಲ್ ಸ್ವಾಮಿ ವಿವೇಕಾನಂದ ಕಾಲೇಜು ಲಕ್ಷ್ಮೀ, ಯಾದಗಿರಿ ಜವಾಹರ ಕಾಲೇಜು ಬನ್ನಮ್ಮ, ಮಲ್ಲಪ್ಪ, ಗುರುಮಠಕಲ್ ಬಾಲಕಿಯರ ಸರ್ಕಾರಿ ಪಿಯು ಕಾಲೇಜು ಅನುಷಾ, ಯಾದಗಿರಿ ಬಾಲಕಿಯರ ಸರ್ಕಾರಿ ಪಿಯು ಕಾಲೇಜು ಗಂಗಿ ಮಾಳಮ್ಮ ಟಾಪ್‌ 10ರಲ್ಲಿ ಸ್ಥಾನ ಪಡೆದಿದ್ದಾರೆ.

ADVERTISEMENT

ವಾಣಿಜ್ಯ ವಿಭಾಗದಲ್ಲಿ ಟಾಪ್-10:
ಯಾದಗಿರಿ ಜವಾಹರ್‌ ಪಿಯು ಕಾಲೇಜು ನಾಗವೇಣಿ, ಯಾದಗಿರಿ ಆರ್‌ವಿ ಇಎಸ್ ಪಿಯು ಕಾಲೇಜು ಶಿವನೀಲಮ್ಮ, ಯಾದಗಿರಿ ಜವಾಹರ ಪಿಯು ಕಾಲೇಜು ಸಾಬಣ್ಣ, ಯಾದಗಿರಿ ಲಿಂಗೇರಿ ಕೋನಪ್ಪ ಪಿಯು ಕಾಲೇಜು ಜೆ. ಪ್ರೀತಿ, ದೋರನಹಳ್ಳಿ ದೇವರಾಜ್ ಅರಸ್ ಪಿಯು ಕಾಲೇಜು ಎಂ. ಮೌನೇಶ್, ದೋರನಹಳ್ಳಿ ದೇವರಾಜ್ ಅರಸ್ ಪಿಯು ಕಾಲೇಜು ಪದ್ಮಾವತಿ, ಯಾದಗಿರಿ ಲಿಂಗೇರಿ ಕೋನಪ್ಪ ಕಾಲೇಜು ಎಂ. ಜ್ಯೋತಿ, ಯಾದಗಿರಿ ಲಿಂಗೇರಿ ಕೋನಪ್ಪ ಕಾಲೇಜು ಅಮೀನ್ ಅದೀಬಾ, ಸುನೀತಾ, ಭೀಮರಾಯನಗುಡಿ ಸರ್ಕಾರಿ ಪಿಯು ಕಾಲೇಜು ಹರ್ಷವರ್ಧನ್ ಟಾಪ್‌ 10ರೊಳಗೆ ಇದ್ದಾರೆ.

ವಿಜ್ಞಾನ ವಿಭಾಗದಲ್ಲಿ ಟಾಪ್-10:
ಯಾದಗಿರಿ ಸಿದ್ಧಲಿಂಗೇಶ್ವರ ಪಿಯು ಕಾಲೇಜು ರಾಜೇಶ್ವರಿ, ಶಹಾಪುರ ಎಸ್‌ಸಿಜಿ ಮೆಮೋರಿಯಲ್ ಕಾಲೇಜು ಅಕ್ಕಮಹಾದೇವಿ, ಶಹಾಪುರ ಶ್ರೀಮತಿ ಎಸ್.ಬಿ. ದರ್ಶನಾಪುರ ಪಿಯು ಕಾಲೇಜು ಸಫಾ ಪರ್ವೀನ್, ಯಾದಗಿರಿ ಪ್ರೇರಣಾ ಪಿಯು ಕಾಲೇಜು ನಿಖಿತಾ, ಶಹಾಪುರ ಸಾಯಿರಾಂ ಪಿಯು ಕಾಲೇಜು ಸಫಿಯಾ ಪರ್ವೀನ್, ಯಾದಗಿರಿ ಸಹ್ಯಾದ್ರಿ ಪಿಯು ಕಾಲೇಜು ಯುವರಾಜ್‌, ಶಹಾಪುರ ಎಸ್‌ಸಿಜಿ ಮೆಮೋರಿಯಲ್ ಕಾಲೇಜು ಐಶ್ವರ್ಯಾ, ಯಾದಗಿರಿ ಆರ್ಯಭಟ್ಟ ಪಿಯು ಕಾಲೇಜು ಕೆ. ಹರಿತಾ, ಸುರಪುರ ಎನ್.ಎನ್.ಶೆಟ್ಟಿ ಪಿಯು ಕಾಲೇಜು ಮಹಮ್ಮದ್‌ ಫೌಜಾನ್, ಶಹಾಪುರ ಎಸ್.ಬಿ.ದರ್ಶನಾಪುರ ಪಿಯು ಕಾಲೇಜು ಸುಪ್ರಿಯಾ 10ರೊಳಗೆ ಸ್ಥಾನ ಪಡೆದಿದ್ದಾರೆ.

ಬೆಳಿಗ್ಗೆಯಿಂದ ರಾತ್ರಿವರೆಗೆ ನಿರಂತರ ಅಧ್ಯಯನ ಮಾಡಿದ್ದೇನೆ. ಇದಕ್ಕೆ ಉಪನ್ಯಾಸಕರು ತಂದೆ ತಾಯಿ ಸಾಥ್‌ ನೀಡಿದ್ದಾರೆ. ಪರೀಕ್ಷೆಗೆ ತಯಾರಿ ಮಾಡಲು ಆತ್ಮವಿಶ್ವಾಸ ತುಂಬಿದ್ದರು. ಇದು ಪ್ರಥಮ ಬರಲು ಸಹಾಯವಾಗಿದೆ
ರಾಜೇಶ್ವರಿ ಗಣೇಶ, ವಿಜ್ಞಾನ ವಿಭಾಗ
ಪಿಯು ಫಲಿತಾಂಶ ತಂದೆ ತಾಯಿಯ ಆಶೆಯನ್ನು ನೆರವೇರಿಸಿದ ಖುಷಿ ಕೊಟ್ಟಿದೆ. ಉಪನ್ಯಾಸಕರು ಅಧ್ಯಯನಕ್ಕೆ ಸಹಾಯ ಮಾಡಿದ್ದಾರೆ. ಗ್ರಂಥಾಲಯದಲ್ಲಿ ಓದು ಪ್ರಥಮ ಸ್ಥಾನ ಪ‍ಡೆಯಲು ಸಹಕಾರಿಯಾಗಿದೆ
ನಾಗವೇಣಿ ಶಿವರಾಜರೆಡ್ಡಿ, ವಾಣಿಜ್ಯ ವಿಭಾಗ ಪ್ರಥಮ ಸ್ಥಾನ
ಜಿಲ್ಲೆಯಲ್ಲಿ ಪ್ರತಿ ಬಾರಿಯಂತೆ ಈ ಬಾರಿಯೂ ಬಾಲಕಿಯರೇ ಟಾಪ್‌ ಸ್ಥಾನ ಪಡೆದಿದ್ದಾರೆ. ಆದರೂ ಗ್ರಾಮೀಣ ನಗರದ ವಿದ್ಯಾರ್ಥಿನಿಯರು ಹೆಚ್ಚಿನ ಸ್ಥಾನ ‍ಪಡೆದಿದ್ದಾರೆ
ಸಿ.ಕೆ.ಕುಳಗೇರಿ, ಉಪನಿರ್ದೇಶಕ ಪದವಿ ಪೂರ್ವ ಕಾಲೇಜು
ವಿದ್ಯಾರ್ಥಿನಿಯರು ಶ್ರದ್ಧೆಯಿಂದ ವಿದ್ಯಾಭ್ಯಾಸ ಮಾಡಿದ್ದರಿಂದ ಜಿಲ್ಲೆಯಲ್ಲಿ ಹಲವು ಪ್ರಥಮ ಸ್ಥಾನಗಳನ್ನು ಗಳಿಸಿದ್ದಾರೆ. ಅವರಿಗೆ ಪ‍‍್ರೋತ್ಸಾಹ ಸಿಕ್ಕರೆ ಮತ್ತಷ್ಟು ಸಾಧನೆ ಮಾಡುತ್ತಾರೆ
ಯಲ್ಲಯ್ಯ ನಾಯಕ ವನದುರ್ಗ ಶಿಕ್ಷಣ ಪ‍‍್ರೇಮಿ

ವೆಬ್‌ ಕಾಸ್ಟಿಂಗ್‌ ಗುಮ್ಮ!

ಪಿಯು ವಿದ್ಯಾರ್ಥಿಗಳಿಗೆ ಈ ಬಾರಿ ವೆಬ್‌ ಕಾಸ್ಟಿಂಗ್‌ ಗುಮ್ಮ ಕಾಡಿದೆ. ಕಳೆದ ಬಾರಿ ವೆಬ್‌ ಕಾಸ್ಟಿಂಗ್‌ ವ್ಯವಸ್ಥೆ ಇರಲಿಲ್ಲ. ಅದರಲ್ಲೂ ಗ್ರಾಮೀಣ ಭಾಗದ ರೆಗ್ಯೂಲರ್‌ ವಿದ್ಯಾರ್ಥಿಗಳು ಕಾಲೇಜಿಗೆ ಸರಿಯಾಗಿ ಹಾಜರಾಗದೇ ಇರುವುದು ಕಡಿಮೆ ಫಲಿತಾಂಶಕ್ಕೆ ಕಾರಣವಾಗಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಮೂಲಗಳ ಮಾಹಿತಿಯಾಗಿದೆ. ಮತ್ತೊಂದೆಡೆ ಪರೀಕ್ಷೆ–1 ಪರೀಕ್ಷೆ–2 ವ್ಯವಸ್ಥೆ ಇದೆ. ‘ಜಿಲ್ಲೆಯಲ್ಲಿ ಉಪನ್ಯಾಸಕರ ಕೊರತೆ ಕಾಯಂ ಪ್ರಾಂಶುಪಾಲರ ಖಾಲಿ ಹುದ್ದೆಗಳಿಂದ ಫಲಿತಾಂಶದ ಮೇಲೆ ಪರಿಣಾಮ ಬೀರಿದೆ. ಹಲವಾರು ಸರ್ಕಾರಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ನೋಂದಣಿ ಮಾಡಿ ಆಗೊಮ್ಮೆ ಈಗೊಮ್ಮೆ ಕಾಲೇಜಿಗೆ ಬರುತ್ತಾರೆ. ಹೇಗೋ ಪರೀಕ್ಷೆಗೆ ಬೇಕಾಗುವ ಹಾಜರಾತಿ ಪಡೆದುಕೊಂಡು ಪರೀಕ್ಷೆಯಲ್ಲಿ ಅನ್ನುತ್ತೀರ್ಣರಾಗುತ್ತಿದ್ದಾರೆ. ಇದರಿಂದಲೂ ಕಡಿಮೆ ಫಲಿತಾಂಶಕ್ಕೆ ಕಾರಣವಾಗಿದೆ’ ಎನ್ನುತ್ತಾರೆ ಪದವಿ ಪೂರ್ವ ಕಾಲೇಜು ಉಪನಿರ್ದೇಶಕ ಸಿ.ಕೆ.ಕುಳಗೇರಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.