
ಅಬ್ಬೆ ತುಮಕೂರು (ಯರಗೋಳ): ‘ಕೋಲಿ ಸಮಾಜದ ಮುಖಂಡ ವಿಠಲ್ ಹೇರೂರು ಅವರ 12ನೇ ಪುಣ್ಯಸ್ಮರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಗಿದ್ದು, ಹೋಬಳಿ, ತಾಲ್ಲೂಕು ಹಾಗೂ ಜಿಲ್ಲಾ ಘಟಕಗಳ ರಚನೆ ಮಾಡಲು ಜಿಲ್ಲೆಯಾದ್ಯಂತ ಪ್ರವಾಸ ಕೈಗೊಳ್ಳಲಾಗುವುದು’ ಎಂದು ಅಖಿಲ ಭಾರತೀಯ ಕೋಲಿ ಸಮಾಜದ ರಾಜ್ಯ ಸಂಘಟನಾ ಕಾರ್ಯದರ್ಶಿ ಉಮೇಶ ಮುದ್ನಾಳ ತಿಳಿಸಿದರು.
ಮಂಗಳವಾರ ಅಬ್ಬೆತುಮಕೂರ ಗ್ರಾಮದಲ್ಲಿ ನಿಜ ಶರಣ ಅಂಬಿಗೇರ ಚೌಡಯ್ಯನವರ ನಾಮಫಲಕ್ಕೆ ಪೂಜೆ ಸಲ್ಲಿಸಿ ಈ ವಿಷಯ ತಿಳಿಸಿದ ಅವರು, ‘ಸಮಾಜದ ನಾಯಕರಾಗಿದ್ದ ವಿಠಲ್ ಹೇರೂರು ಅವರಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ಅವರ ಪುಣ್ಯಸ್ಮರಣೆಯನ್ನು ಸಮಾಜದ ಎಲ್ಲಾ ಕುಲಭಾಂದವರು ಆಚರಿಸುವಂತಾಗಲಿ ಎಂಬ ಉದ್ದೇಶ ದಿಂದ ಪ್ರವಾಸ ಕೈಗೊಳ್ಳಲಾಗುತ್ತಿದೆ’ ಎಂದರು.
ಈ ಸಂಧರ್ಭದಲ್ಲಿ ವಿಠಲ್ ಹೇರೂರ ಅವರ ಭಾವಚಿತ್ರಗಳನ್ನು ಬಿಡುಗಡೆ ಮಾಡಿ, ವಿತರಿಸಲಾಯಿತು.
ಮಲ್ಲಿಕಾರ್ಜುನ, ಪವನ, ನಾಗಪ್ಪ, ಮಹೇಶ, ಸಾಬಣ್ಣ, ಮಲ್ಲಿಕಾರ್ಜುನ, ಭಿಮಪ್ಪ, ಹಣಮಂತ, ಸಾಬರೆಡ್ಡಿ ಮಣಿಕಂಠಪ್ಪ, ವಿಶ್ವ, ಬನ್ನಪ್ಪ, ಕಾಶಪ್ಪ, ಮೊಹಲ್ಲಾ, ಗಂಗು, ಮಂಜು, ಭೀಮು, ಮಲ್ಲಿಕಾರ್ಜುನ, ನಾಗರಾಜ, ಈಶಪ್ಪ, ಬನ್ನಪ್ಪ ಸೇರಿದಂತೆ ಅನೇಕು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.