ತೊಗರಿ
ಯಾದಗಿರಿ: ‘ಜಿಲ್ಲೆಯಲ್ಲಿ ಬೆಂಬಲ ಬೆಲೆ ಯೋಜನೆಯಡಿ ಎಫ್‌ಎಕ್ಯೂ ಗುಣಮಟ್ಟದ ತೊಗರಿ ಬೆಳೆಯ ಖರೀದಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಹರ್ಷಲ್ ಬೋಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತೊಗರಿ ಪ್ರತಿ ಕ್ವಿಂಟಾಲ್‌ಗೆ ₹ 8 ಸಾವಿರದಂತೆ, ರೈತರಿಂದ ಎಕರೆಗೆ 4 ಕ್ವಿಂಟಾಲ್ ಖರೀದಿಸಲಾಗುವುದು. ಫ್ರೂಟ್ಸ್ ತಂತ್ರಾಂಶದಲ್ಲಿ ನಮೂದಿತ ರೈತರ ನೋಂದಾಣಿಗೆ 80ದಿನಗಳು ಮತ್ತು ಖರೀದಿಗೆ 90 ದಿನಗಳ ಕಾಲಾವಕಾಶ ನೀಡಲಾಗಿದೆ.
ಜಿಲ್ಲೆಯ ಯಾದಗಿರಿ ತಾಲ್ಲೂಕಿನ ಪಿಎಸಿಎಸ್ ಹತ್ತಿಕುಣಿ(78927 41116), ಟಿಎಪಿಸಿಎಂಎಸ್(70195 24908), ಪಿಎಸಿಎಸ್ ರಾಮಸಮುದ್ರ(99454 05710).
ಶಹಾಪುರ ತಾಲ್ಲೂಕಿನ ಶಹಾಪುರ ಟಿಎಪಿಸಿಎಂಎಸ್(94485 77858), ಪಿಎಸಿಎಸ್ ಚಾಮನಾಳ(80882 886797), ಪಿಎಸಿಎಸ್ ಹೊಸಕೇರಾ(97411 38687), ಎಫ್‌ಪಿಒ ಗಂಗನಾಳ(99026 23346), ಪಿಎಸಿಎಸ್ ದೋರನಹಳ್ಳಿ(9902 124640), ಪಿಎಸಿಎಸ್ ಮದ್ರಕಿ(99809 44446).
ಸುರಪುರ ತಾಲ್ಲೂಕಿನ ಟಿಎಪಿಸಿಎಂಎಸ್(72596 88231), ಪಿಎಸಿಎಸ್-1 ಕೆಂಬಾವಿ(89701 00234), ಪಿಎಸಿಎಸ್-2 ಕೆಂಬಾವಿ(97418 54971), ಪಿಎಸಿಎಸ್ ಮಾಲಗತ್ತಿ(91086 36156), ಪಿಎಸಿಎಸ್ ಮುನಿರ್ ಬೊಮ್ಮನಹಳ್ಳಿ(96631 57756), ಪಿಎಸಿಎಸ್ ನಗನೂರ(98804 56797), ಪಿಎಸಿಎಸ್ ಯಾಳಗಿ(99457 67305).
ಹುಣಸಗಿ ತಾಲ್ಲೂಕಿನ ಟಿಎಪಿಸಿಎಂಎಸ್ ಹುಣಸಗಿ(95352 20396), ಪಿಎಸಿಎಸ್ ಕೊಡೆಕಲ್(73496,66155), ಪಿಎಸಿಎಸ್ ರಾಜನಕೊಳೂರು(97417 64178), ಪಿಎಸಿಎಸ್ ಹಗರಟಗಿ(93619 35156).
ವಡಗೇರಾ ತಾಲ್ಲೂಕಿನ ಪಿಎಸಿಎಸ್ ಬೆಂಡೆಗಂಬಳಿ(99028 13005), ಪಿಎಸಿಎಸ್ ಹೈಯಾಳ.ಬಿ(91106 03122), ಪಿಎಸಿಎಸ್ ನಾಯ್ಕಲ್(974161655).
ಗುರುಮಠಕಲ್ ತಾಲ್ಲೂಕಿನ ಪಿಎಸಿಎಸ್ ಚಪೆಟ್ಲಾ(72595 43708), ಎಫ್‌ಪಿಒ ಗುರುಮಠಕಲ್(72595 43708), ಸೈದಾಪುರ ಎಫ್‌ಪಿಒ(70221 92270), ಎಫ್‌ಪಿಒ ಕೊಂಕಲ್(72049 22282) ಕೇಂದ್ರಗಳನ್ನು ಸ್ಥಾಪಿಸಲಾಗಿದೆ.
ನೋಂದಾಣಿ ಮತ್ತು ಹೆಚ್ಚಿನ ಮಾಹಿತಿಗಾಗಿ ಖರೀದಿ ಕೇಂದ್ರಗಳಿಗರ ಸಂಪರ್ಕಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.