ADVERTISEMENT

PHOTOS | ಯಾದಗಿರಿ; ಗುಡುಗು, ಗಾಳಿ ಸಹಿತ ಭಾರಿ ಮಳೆ, ಜನಜೀವನ ಅಸ್ತವ್ಯಸ್ತ, ವ್ಯಾಪಕ ಹಾನಿ

ಯಾದಗಿರಿ: ನಗರ ಸೇರಿದಂತೆ ತಾಲ್ಲೂಕಿನಲ್ಲಿ ಸೋಮವಾರ(ಏಪ್ರಿಲ್ 5) ಸಂಜೆ ಸುರಿದ ಗುಡುಗು, ಸಿಡಿಲಿನ ಸಹಿತ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದ್ದು, ವ್ಯಾಪಕ ಹಾನಿ ಸಂಭವಿಸಿದೆ. ನಗರದ ಶುಭಾಷ ವೃತ್ತದ ಬಳಿ ಉಳ್ಳೆಸೂಗುರ ಕಾಂಪ್ಲೆಕ್ಸ್ ಬಳಿ ನಿರ್ಮಾಣ ಹಂತದ ಆವರಣ ಗೋಡೆ ಬಿದ್ದು, 7–8 ಬೈಕ್‌ಗಳು ಜಖಂ ಆಗಿವೆ. ಜೋರಾಗಿ ಮಳೆ ಸುರಿದ ಪರಿಣಾಮ ವಾಹನ ಸವಾರರು ಪರದಾಡಿದರು.

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2021, 14:43 IST
Last Updated 5 ಏಪ್ರಿಲ್ 2021, 14:43 IST
ಎಪಿಎಂಸಿ ಆವರಣದಲ್ಲಿ ರೈತರು ಮಾರಾಟಕ್ಕೆ ತಂದಿದ್ದ ಶೇಂಗಾ ನೀರು ಪಾಲಾಗಿದೆ
ಎಪಿಎಂಸಿ ಆವರಣದಲ್ಲಿ ರೈತರು ಮಾರಾಟಕ್ಕೆ ತಂದಿದ್ದ ಶೇಂಗಾ ನೀರು ಪಾಲಾಗಿದೆ   
ಏಕಾಏಕಿ ಗಾಳಿ, ಮಳೆಗೆ ಶೇಂಗಾ ಮಳೆ ನೀರಿನಲ್ಲಿ ಹರಿದುಕೊಂಡು ಚರಂಡಿ ಸೇರಿವೆ
ಹಲವಾರು ರೈತರು ಪ್ರಾಗಂಣದಲ್ಲಿ ಶೇಂಗಾ ಹಾಕಿದ್ದರು
ಗಾಳಿ, ಮಳೆಗೆ ಯಾದಗಿರಿ ನಗರಸಭೆ ಸಭಾಂಗಣದ ಮೇಲ್ಛಾವಣಿ ಕುಸಿದಿದೆ
ರಸ್ತೆ ಮೇಲೆ ನೀರು ನಿಂತು ವಾಹನ ಸವಾರರು ಪರದಾಡಿದರು
7–8 ಬೈಕ್‌ಗಳು ಜಖಂ ಆಗಿವೆ
ಸಿಡಿಲಿನ ಸಹಿತ ಮಳೆಗೆ ಜನಜೀವನ ಅಸ್ತವ್ಯಸ್ತ
ಗೋಡೆ ಬಿದ್ದು ಬೈಕ್‌ಗಳು ಜಖಂ, ನಗರಸಭೆ ಮೇಲ್ಚಾವಣೆ ಕುಸಿತ
ಸಾವಿರಾರು ರೂಪಾಯಿ ಮೌಲ್ಯದ ಶೇಂಗಾ ಚರಂಡಿ ಪಾಲಾಗಿದೆ
ರಸ್ತೆಯಲ್ಲಿ ನೀರು ಸಂಗ್ರಹ, ವಾಹನ ಸಂಚಾರರ ಪರದಾಟ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.