ADVERTISEMENT

ಶಹಾಪುರ: ರಂಗು ಕಳೆದುಕೊಂಡ ಹೋಳಿ

ಕೊರೊನಾ ಭೀತಿ, ಬ್ಯಾಂಕ್‌ ವಹಿವಾಟು ಕ್ಷೀಣ: ಕಳೆಗಟ್ಟದ ಆಚರಣೆ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2020, 13:58 IST
Last Updated 11 ಮಾರ್ಚ್ 2020, 13:58 IST
ಶಹಾಪುರ ನಗರದ ಆಶ್ರಯ ಕಾಲೊನಿಯಲ್ಲಿ ಬುಧವಾರ ಬಾಲಕರು ಬಣ್ಣದ ಆಟವಾಡಿದರು
ಶಹಾಪುರ ನಗರದ ಆಶ್ರಯ ಕಾಲೊನಿಯಲ್ಲಿ ಬುಧವಾರ ಬಾಲಕರು ಬಣ್ಣದ ಆಟವಾಡಿದರು   

ಶಹಾಪುರ: ಕೊರೊನಾ ಸೋಂಕು ಭೀತಿಯಿಂದ ಬಣ್ಣದ ಹಬ್ಬ ಹೋಳಿಯಿಂದ ಯುವಕರು ಹಾಗೂ ಬಹುತೇಕ ಬಾಲಕರು ದೂರ ಉಳಿದುಕೊಂಡರು.

ಕಳೆದ ವರ್ಷದ ಉತ್ಸಾಹ ಈಗ ಕಾಣಿಸಲಿಲ್ಲ. ತಮಟೆ ಬಡಿದು ಹಾಡುತ್ತ ಕುಣಿದು ಕುಪ್ಪಳಿಸುತ್ತಿದ್ದ ಯುವಕರು ರಸ್ತೆಯ ಮೇಲೆ ಹೆಚ್ಚಾಗಿ ಕಾಣಿಸಲಿಲ್ಲ. ಅಲ್ಲದೆ, ಪಿಯುಸಿ ಹಾಗೂ ಎಸ್ಸೆಸ್ಸೆಲ್ಸಿ ಪರೀಕ್ಷೆ ಸಮಯವಾಗಿದ್ದರಿಂದ ವಿದ್ಯಾರ್ಥಿಗಳು ದೂರು ಉಳಿದುಕೊಂಡಿದ್ದರು.

ಮಹಿಳೆಯರು ಸಹ ಬಣ್ಣದ ರಂಗಿನಾಟದಲ್ಲಿ ಕಾಣಿಸಿಕೊಳ್ಳಲಿಲ್ಲ. ಬೆರಳೆಣಿಯಷ್ಟು ಪ್ರದೇಶದಲ್ಲಿ ತಮ್ಮ ಆತ್ಮೀಯರ ಜತೆ ಬಣ್ಣದ ಆಟವಾಡಿದರು. ಪ್ರಸಕ್ತ ಬಾರಿ ಹಬ್ಬದ ಕಳೆ ಮಾತ್ರ ಸಂಪೂರ್ಣವಾಗಿ ಕಳೆದುಕೊಂಡಿದೆ.

ADVERTISEMENT

ಹಬ್ಬದ ನೆಪದಲ್ಲಿ ಯುವಕರು ಬೇರೆ ಕಡೆ ಪ್ರವಾಸದ ಕಡೆ ಮುಖಮಾಡಿದ್ದರೆ, ಇನ್ನೂ ಕೆಲವರು ಅಂಗಡಿ ಮುಗ್ಗಟ್ಟು ಮುಚ್ಚಿ ಮನೆಯಲ್ಲಿ ಉಳಿದುಕೊಂಡರು.

ಸರ್ಕಾರಿ ಕಚೇರಿಗಳು ಎಂದಿನಂತೆ ಕಾರ್ಯನಿರ್ವಹಿಸಿದವು. ಬ್ಯಾಂಕ್ ವಹಿವಾಟು ಕಡಿಮೆ ಇತ್ತು. ರಸ್ತೆ ಮೇಲೆ ಸಂಚಾರ ಕಡಿಮೆಯಾಗಿತ್ತು. ಮಧ್ಯಾಹ್ನ ಕಾಮದಹನ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.