ADVERTISEMENT

ಮಾನವ ಸರಪಳಿ: ರಸ್ತೆ ಮೇಲೆ ಮೂಡಿದ ಯಾದಗಿರಿ ಜಿಲ್ಲೆಯ ಹೆಸರು

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2024, 14:14 IST
Last Updated 15 ಸೆಪ್ಟೆಂಬರ್ 2024, 14:14 IST
ಯರಗೋಳ ರಾಷ್ಟ್ರೀಯ ಹೆದ್ದಾರಿ- 150 ಮೇಲೆ ವಿದ್ಯಾರ್ಥಿಗಳು ಯಾದಗಿರಿ ಜಿಲ್ಲೆ ಹೆಸರಿನ ಮಾನವ ಸರಪಳಿ ನಿರ್ಮಿಸಿದರು
ಯರಗೋಳ ರಾಷ್ಟ್ರೀಯ ಹೆದ್ದಾರಿ- 150 ಮೇಲೆ ವಿದ್ಯಾರ್ಥಿಗಳು ಯಾದಗಿರಿ ಜಿಲ್ಲೆ ಹೆಸರಿನ ಮಾನವ ಸರಪಳಿ ನಿರ್ಮಿಸಿದರು   

ಯರಗೋಳ: ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಭಾನುವಾರ ಯಾದಗಿರಿ ಜಿಲ್ಲೆ ಮಾರ್ಗದ ಮೊದಲ ಗ್ರಾಮ ಯರಗೋಳ ಹೊರವಲಯದ ರಾಷ್ಟ್ರೀಯ ಹೆದ್ದಾರಿ-150ರ ಮೇಲೆ ಶಾಲಾ ವಿದ್ಯಾರ್ಥಿಗಳು ಮಾನವ ಸರಪಳಿ ಮೂಲಕ, ಕೇಸರಿ-ಬಿಳಿ-ಹಸಿರು ಉಡುಪುಗಳಲ್ಲಿ ಮಿಂಚಿ ಯಾದಗಿರಿ ಜಿಲ್ಲೆಯ ಹೆಸರನ್ನು ರಸ್ತೆ ಮೇಲೆ ಮೂಡಿಸಿದರು.

ತಲೆಯ ಮೇಲೆ ಕುಂಬ–ಕಳಶ ಹೊತ್ತ ಮಹಿಳೆಯರು, ಉದ್ದನೆಯ ಬಾವುಟ ಹಿಡಿದ ವಿದ್ಯಾರ್ಥಿಗಳು, ಬಿಳಿ ಪಂಚೆ ತೊಟ್ಟ ಗಣ್ಯರು, ಯುವಕರು ಡೊಳ್ಳು ಕುಣಿತಕ್ಕೆ ಹೆಜ್ಜೆ ಹಾಕಿ ರಾಷ್ಟ್ರಗೀತೆ ಹಾಡಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಮಣ್ಣ ಅಲಿಪುರ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕಲ್ಯಾಣ ಕುಮಾರ್, ಗ್ರಾಮ ಪಂಚಾಯತಿ ಸದಸ್ಯರಾದ ಹಸೆನಪ್ಪ ಹಲಗಿ, ಸಿದ್ದಪ್ಪ ಬನ್ನಟ್ಟಿ, ಮೋನಪ್ಪ ಹಲಕಟ್ಟಿ, ಭೀಮಶಾ ಗೋಡೆಕರ್, ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಜಗದೀಶ, ಗ್ರಾಮ ಲೆಕ್ಕಾಧಿಕಾರಿ ಲಕ್ಷ್ಮಿ, ಶಾಲಾ ಮುಖ್ಯಶಿಕ್ಷಕಿ ಶಾಂತಮ್ಮ, ಚಂದ್ರಪ್ಪ ಗುಂಜನೂರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಸಂಘಟನೆ ಮುಖಂಡರಾರ ಭೀಮಶಂಕರ್ ಮಮ್ಮದರ, ಶರಣು, ಶಿವರಾಜ್ ಮಾನೆಗಾರ್ ಹಾಜರಿದ್ದರು.

ADVERTISEMENT

ಅಲ್ಲಿಪುರ, ಅರಿಕೇರಾ ಬಿ, ಠಾಣಗುಂದಿ, ಹೊನಗೇರಾ, ಮೋಟ್ನಳ್ಳಿ, ಬಂದಳ್ಳಿ, ಮುದ್ನಾಳ ಗ್ರಾಮ ಪಂಚಾಯಿತಿಯ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ವಿಜಯಲಕ್ಷ್ಮಿ, ರಾಜೇಂದ್ರ, ಶಿವಶರಣಪ್ಪ, ನೀಲಕಂಠ, ವಿಜಯಲಕ್ಷ್ಮಿ ಶಾಬಾದಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.