ADVERTISEMENT

ಸುರಪುರ: ಇನ್‌ಕ್ಯುಬೇಶನ್ ಸಂಶೋಧನಾ ಕೇಂದ್ರಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2022, 7:12 IST
Last Updated 17 ಫೆಬ್ರುವರಿ 2022, 7:12 IST
ಸುರಪುರದ ವೀರಪ್ಪ ನಿಷ್ಠಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮಂಗಳವಾರ ಇನ್‌ಕ್ಯುಬೇಶನ್ ಸಂಶೋಧನಾ ಕೇಂದ್ರವನ್ನು ಶಾಸಕ ರಾಜೂಗೌಡ ಉದ್ಘಾಟಿಸಿದರು. ಕಾಲೇಜಿನ ಪ್ರಮುಖರು ಹಾಗೂ ಸಿಬ್ಬಂದಿ ಇದ್ದರು
ಸುರಪುರದ ವೀರಪ್ಪ ನಿಷ್ಠಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮಂಗಳವಾರ ಇನ್‌ಕ್ಯುಬೇಶನ್ ಸಂಶೋಧನಾ ಕೇಂದ್ರವನ್ನು ಶಾಸಕ ರಾಜೂಗೌಡ ಉದ್ಘಾಟಿಸಿದರು. ಕಾಲೇಜಿನ ಪ್ರಮುಖರು ಹಾಗೂ ಸಿಬ್ಬಂದಿ ಇದ್ದರು   

ಸುರಪುರ: ‘ಇನ್‌ಕ್ಯುಬೇಶನ್ ಸಂಶೋಧನಾ ಕೇಂದ್ರದ ಮೂಲಕ ಮಾಹಿತಿ ಮತ್ತು ತಂತ್ರಜ್ಞಾನದಲ್ಲಿ ಹೆಚ್ಚು ಪ್ರಗತಿಯನ್ನು ಸಾಧಿಸಲು ಸಾಧ್ಯ. ಇಲ್ಲಿ ಈ ಕೇಂದ್ರ ಆರಂಭಿಸುವ ಮೂಲಕ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಿರುವುದು ಶ್ಲಾಘನೀಯ’ ಎಂದು ಶಾಸಕ ರಾಜೂಗೌಡ ಹೇಳಿದರು.

ಇಲ್ಲಿನ ವೀರಪ್ಪ ನಿಷ್ಠಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮಂಗಳವಾರ ಇನ್‌ಕ್ಯುಬೇಶನ್ ಸಂಶೋಧನಾ ಕೇಂದ್ರ ಉದ್ಘಾಟಿಸಿ ಅವರು ಮಾತನಾಡಿದರು.

‘ಯೋಜನೆಯು ಅಗತ್ಯ ಕಲಿಕೆ, ವಿಮರ್ಶಾತ್ಮಕ ಚಿಂತನೆ ಮತ್ತು ಹೆಚ್ಚು ಸಮಗ್ರ ಅನುಭವ, ಚರ್ಚಾ ಆಧಾರಿತ ಮತ್ತು ವಿಶ್ಲೇಷಣೆ ಆಧಾರಿತ ಕಲಿಕೆಯನ್ನು ಹೆಚ್ಚಿಸಲು ಹಾಗೂ ಪಠ್ಯಕ್ರಮದ ವಿಷಯವನ್ನು ಕಡಿಮೆ ಮಾಡುವ ಸಾಮರ್ಥ್ಯ ಇನ್‌ಕ್ಯುಬೇಶನ್ ಸಂಶೋಧನಾ ಕೇಂದ್ರ ಹೊಂದಿದೆ’ ಎಂದು ಕಲಬುರಗಿ ಶರಣಬವ ವಿಶ್ವವಿದ್ಯಾಲಯದ ಕುಲಸಚಿವ ಅನಿಲಕುಮಾರ ಬಿಡವೆ ಹೇಳಿದರು.

ADVERTISEMENT

‘ವಿದ್ಯಾಭ್ಯಾಸ ಮಾಡುವುದರ ಜೊತೆಗೆ ಕಲಿತ ಜ್ಞಾನವನ್ನು ವ್ಯವಸಾಯದಲ್ಲಿ ಉಪಯೋಗ ಮಾಡಿಕೊಳ್ಳಬೇಕು ಹಾಗೂ ರಾಷ್ಟ್ರೀಯ ಅಂತರರಾಷ್ಟ್ರಿಯ ರಫ್ತು, ಆಮದಿನ ತಂತ್ರಗಳನ್ನು ತಿಳಿದುಕೊಂಡು ಅಳವಡಿಸಿಕೊಳ್ಳಬೇಕು’ ಎಂದು ಡಾ.ಎಸ್.ಎ.ಪಾಟೀಲ ತಿಳಿಸಿದರು.

ಸಂಸ್ಥೆಯ ಕಾರ್ಯದರ್ಶಿ ಶರಣಬಸವಪ್ಪ ನಿಷ್ಠಿ ಜಾಹಾಗೀರದಾರ, ಬಸವರಾಜ ದೇಶಮುಖ, ದೊಡ್ಡಪ್ಪ ನಿಷ್ಠಿ
ಮುಖಂಡರಾದ ರಾಜಾ ಹನುಮಪ್ಪನಾಯಕ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸುರೇಶ ಸಜ್ಜನ್, ಪ್ರಕಾಶ ಸಜ್ಜನ್, ಬಿ.ಎಂ.ಅಳ್ಳಿಕೋಟಿ, ವೇಣುಮಾಧವ ನಾಯಕ, ಎಚ್.ಸಿ.ಪಾಟೀಲ, ದೊಡ್ಡದೇಸಾಯಿ ಇದ್ದರು. ಡಾ.ಶರಣಬಸಪ್ಪ ಸಾಲಿ ಸ್ವಾಗತಿಸಿದರು. ಮೋಹನರೆಡ್ಡಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.