ಪ್ರಾತಿನಿಧಿಕ ಚಿತ್ರ
– ಪ್ರಜಾವಾಣಿ ಚಿತ್ರ
ಯಾದಗಿರಿ: ‘ಯಿಮ್ಸ್’ನ ತಾಯಿ- ಮಕ್ಕಳ ಆಸ್ಪತ್ರೆಯಲ್ಲಿ ಭಾನುವಾರ ಹೆರಿಗೆ ವೇಳೆ ಶಿಶು ಮೃತಪಟ್ಟಿದ್ದು, ವೈದ್ಯರ ನಿರ್ಲಕ್ಷ್ಯವೇ ಕಾರಣವೆಂದು ಆರೋಪಿಸಿ ಸಂಬಂಧಿಕರು ಪ್ರತಿಭಟನೆ ನಡೆಸಿದರು.
ಶನಿವಾರ ಆಸ್ಪತ್ರೆಗೆ ದಾಖಲಾಗಿದ್ದ ತಾಲ್ಲೂಕಿನ ಬಳಿಚಕ್ರ ತಾಂಡಾ ನಿವಾಸಿ ನೀಲಾಬಾಯಿ ಅವರ ಶಿಶು ಮೃತಪಟ್ಟಿತು. ವೈದ್ಯರು ಮತ್ತು ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಶಿಶುವಿನ ಶವ ಇರಿಸಿ ಒತ್ತಾಯಿಸಿದರು.
ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ‘ಯಿಮ್ಸ್’ ಪ್ರಸೂತಿ ವಿಭಾಗದ ಮುಖ್ಯಸ್ಥ ಡಾ.ಶಿವಕುಮಾರ, ‘ಶನಿವಾರ ರಾತ್ರಿ ನೀಲಾಬಾಯಿ ಅವರ ಸ್ಥಿತಿ ಸ್ಥಿರವಾಗಿತ್ತು. ಮಧ್ಯರಾತ್ರಿ ರಕ್ತದೊತ್ತಡ ಹೆಚ್ಚಾಗಿ ರಕ್ತಸ್ರಾವವಾಗಿದೆ. ಮಗುವಿನ ಹೃದಯದ ಬಡಿತ ಇರಲಿಲ್ಲ. ತಾಯಿಗೂ ಅಪಾಯ ಸಾಧ್ಯತೆ ಇದ್ದಿದ್ದರಿಂದ ಸಿಸೇರಿಯನ್ ಮೂಲಕ ಶಿಶುವನ್ನು ಹೊರ ತೆಗೆಯಲಾಗಿದೆ. ಈ ಬಗ್ಗೆ ವರದಿ ಪಡೆಯಲಾಗುವುದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.