ADVERTISEMENT

ಪ್ರಜಾಪ್ರಭುತ್ವ ಮೌಲ್ಯ ಪ್ರತಿಪಾದಿಸಿದ್ದ ಜಯಪ್ರಕಾಶ ನಾರಾಯಣ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2020, 16:48 IST
Last Updated 11 ಅಕ್ಟೋಬರ್ 2020, 16:48 IST
ಸುರಪುರದ ಜೆಡಿಎಸ್ ಕಚೇರಿಯಲ್ಲಿ ಭಾನುವಾರ ಏರ್ಪಡಿಸಿದ್ದ ಜಯಪ್ರಕಾಶ ನಾರಾಯಣ ಜನ್ಮದಿನಾಚರಣೆಯಲ್ಲಿ ಉಸ್ತಾದ್ ವಜಾಹತ್ ಹುಸೇನ್ ಮಾತನಾಡಿದರು
ಸುರಪುರದ ಜೆಡಿಎಸ್ ಕಚೇರಿಯಲ್ಲಿ ಭಾನುವಾರ ಏರ್ಪಡಿಸಿದ್ದ ಜಯಪ್ರಕಾಶ ನಾರಾಯಣ ಜನ್ಮದಿನಾಚರಣೆಯಲ್ಲಿ ಉಸ್ತಾದ್ ವಜಾಹತ್ ಹುಸೇನ್ ಮಾತನಾಡಿದರು   

ಸುರಪುರ: ‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನಶಕ್ತಿಯನ್ನು ಬಿಂಬಿಸಿದ ಕೀರ್ತಿ ಜಯಪ್ರಕಾಶ ನಾರಾಯಣ ಅವರಿಗೆ ಸಲ್ಲುತ್ತದೆ. ಅಂತೇಯೇ ಅವರಿಗೆ ಲೋಕ ನಾಯಕ ಎಂಬ ಹೆಸರು ಬಂದಿದೆ’ ಎಂದು ಜೆಡಿಎಸ್ ರಾಜ್ಯ ಸಂಘಟನಾ ಕಾರ್ಯದರ್ಶಿ ಉಸ್ತಾದ ವಜಾಹತ್ ಹುಸೇನ್ ಹೇಳಿದರು.

ಜೆಡಿಎಸ್ ಕಚೇರಿಯಲ್ಲಿ ಭಾನುವಾರ ಏರ್ಪಡಿಸಿದ್ದ ಜಯಪ್ರಕಾಶ ನಾರಾಯಣ ಅವರ ಜನ್ಮದಿನಾಚರಣೆಯಲ್ಲಿ ಅವರು ಮಾತನಾಡಿದರು.

‘ಜಯಪ್ರಕಾಶ ನಾರಾಯಣ ಅವರ ತತ್ವ ಸಿದ್ಧಾಂತದ ತಳಹದಿಯ ಮೇಲೆ ಜೆಡಿಎಸ್ ಪಕ್ಷ ನಡೆಯುತ್ತಿದೆ. ಹೀಗಾಗಿ ಜೆಡಿಎಸ್ ರಾಜ್ಯದಲ್ಲಿ ಪ್ರಬಲ ಪಕ್ಷವಾಗಿದೆ’ ಎಂದರು.

ADVERTISEMENT

‘ಈಶಾನ್ಯ ಶಿಕ್ಷಕರ ಮತ ಕ್ಷೇತ್ರದಿಂದ ಶಿಕ್ಷಕರ ನೋವಿಗೆ ಸ್ಪಂದಿಸುವ, ಕೆ.ಸಿ.ಎಸ್.ಆರ್. ನಿಯಮಗಳ ಬಗ್ಗೆ ಸಂಪೂರ್ಣ ಮಾಹಿತಿ ಇರುವ ಪಿಯು ಉಪನ್ಯಾಸಕರ ಸಂಂಘದ ಮಾಜಿ ಅಧ್ಯಕ್ಷ ತಿಮ್ಮಯ್ಯ ಪುರ್ಲೆ ಅವರಿಗೆ ಜೆಡಿಎಸ್ ಟಿಕೆಟ್ ನೀಡಲಾಗಿದೆ. ಅವರ ಗೆಲುವಿಗೆ ಕಾರ್ಯಕರ್ತರು ಶ್ರಮಿಸಬೇಕು’ ಎಂದರು.

ಸಂಗಣ್ಣ ಬಾಕ್ಲಿ, ಶಾಂತು ತಳವವಾರಗೇರಾ, ಶೌಕತಅಲಿ, ಎಂ.ಡಿ. ಬಾಬಾ, ಅಲ್ತಾಫ ಸಗರಿ, ಗೌಸ್ ಸಾಹುಕಾರ, ವಿನಾಯಕ ಕಕ್ಕೇರಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.