
ಹುಣಸಗಿ: ‘ಎಲ್ಲ ಕನ್ನಡ ಮನಸ್ಸುಗಳು ಸಾಹಿತ್ಯಾಸಕ್ತರು ಪಟ್ಟಣದ ಎಲ್ಲರ ಸಹಕಾರದೊಂದಿಗೆ ತಾಲ್ಲೂಕಿನ ಪ್ರಥಮ ಸಾಹಿತ್ಯ ಸಮ್ಮೇಳನ ಯಶಸ್ವಿಗಾಗಲಿ’ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ನಾಗಣ್ಣ ಸಾಹು ದಂಡಿನ್ ಹೇಳಿದರು.
ಹುಣಸಗಿ ಪಟ್ಟಣ ಯುಕೆಪಿ ಕ್ಯಾಂಪಿನ ನೀಲಕಂಠೇಶ್ವರ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸಮ್ಮೇಳನ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದರು.
‘ಹುಣಸಗಿ ಪಟ್ಟಣಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದ್ದು, ಇಲ್ಲಿನ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಸಾರುವ ಮತ್ತು ಹೊಸ ಪೀಳಿಗೆಗೆ ತಿಳಿಪಡಿಸುವ ಸಮ್ಮೇಳನ ಇದಾಗಲಿ’ ಎಂದರು.
ಭುವನೇಶ್ವರಿಯ ಭಾವಚಿತ್ರಕ್ಕೆ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಸವರಾಜಸ್ವಾಮಿ ಸ್ಥಾವರಮಠ ಪೂಜೆ ಸಲ್ಲಿಸಿ ಮಾತನಾಡಿ, ‘ಇಡೀ ತಾಲ್ಲೂಕನ್ನು ಪ್ರತಿನಿಧಿಸುವ ಸಮ್ಮೇಳನ ಇದಾಗಲಿದ್ದು, ಎಲ್ಲ ಯುವಕರು ಉತ್ಸುಕತೆ ಮೆಚ್ಚುವಂತಹದ್ದಾಗಿದೆ’ ಎಂದು ಹೇಳಿದರು.
ಸಾಹಿತ್ಯ ಪರಿಷತ್ ಅಧ್ಯಕ್ಷ ವೆಂಕಟಗಿರಿ ದೇಶಪಾಂಡೆ ಮಾತನಾಡಿ, ‘ಸಮ್ಮೇಳನ ಯಶ್ವಸಿಯಾಗಿ ನಡೆಯುವಂತಾಗಲು ಸ್ವಾಗತ ಸಮೀತಿ ಸೇರಿದಂತೆ 12 ಕ್ಕೂ ಹೆಚ್ಚು ಸಮಿತಿಗಳನ್ನು ಉಪ ಸಮಿತಿಗಳನ್ನು ರಚಿಸುವ ಮೂಲಕ ಕಾರ್ಯಕ್ರಮ ಯಶ್ವಸಿಗೆ ಒತ್ತು ನೀಡಲಾಗುತ್ತಿದೆ’ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಚೇರಿ ಉಸ್ತುವಾರಿಗಳಾಗಿ ನಿವೃತ್ತ ನೌಕರರಾದ ಪ್ರಾಣೇಶ ಕುಲಕರ್ಣಿ, ಬಾಳಾಸಾಹೇಬ ದೇಶಮುಖ, ರಾಜಕುಮಾರ ಬಿರಾದಾರ, ಬಸವರಾಜ ಕೋಳಕೂರು, ಯಲ್ಲಪ್ಪ ಚಂನಕೇರಿ, ಅವರನ್ನು ನಿಯೋಜಿಲಾಯಿತು.
ಪಟ್ಟಣ ಪಂಚಾಯಿತಿ ಸದಸ್ಯ ಸಿದ್ದು ಮುದಗಲ್ಲ, ಮುಖಂಡರಾದ ಬಾಪುಗೌಡ ಪಾಟೀಲ, ಮುರಗೆಣ್ಣ ದೇಸಾಯಿ, ಅಮರಣ್ಣ ದೇಸಾಯಿ, ಮೇಲಪ್ಪ ಗುಳಗಿ, ಬಸವರಾಜ ಸಜ್ಜನ್, ಗುಂಡು ಅಂಗಡಿ, ರಮೇಶ ವಾಲಿ, ಈರಣ್ಣ ಬಡಿಗೇರ, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಅಮರೇಶ ಮಾಲಗತ್ತಿ, ಪದಾಧಿಕಾರಿಗಳಾದ ಗುರು ಹುಲಕಲ್ಲ, ನೀಲಕಂಠ ಹೊನಕಲ್ಲ, ನಿಂಗಪ್ಪ ಚವ್ಹಾಣ, ಶಶಿಕಲಾ ಮಠದ, ಅಕ್ಕಮಹಾದೇವಿ ದೇಶಮುಖ, ನೀಲಮ್ಮ ನಾಗರಬಟ್ಟ, ಸೇರಿದಂತೆ ಇತರರು ಇದ್ದರು. ಬಸವರಾಜ ಮೇಲಿನಮನಿ ನಿರೂಪಿಸಿ ವಂದಿಸಿದರು.
ಸಮ್ಮೇಳನ ಸರ್ವಾಧ್ಯಕ್ಷರಾಗಿ ವೀರೇಶ ಹಳ್ಳೂರ ಆಯ್ಕೆ
ಹುಣಸಗಿ ತಾಲ್ಲೂಕು ಪ್ರಥಮ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಹುಣಸಗಿಯ ಹಿರಿಯ ಸಾಹಿತಿ ವೀರೇಶ ಹಳ್ಳೂರ ಅವರನ್ನು ಆಯ್ಕೆ ಮಾಡಲಾಯಿತು. ಸುಮಾರು 6 ದಶಕಗಳ ಸಾಹಿತ್ಯ ಕೃಷಿ ಯಲ್ಲಿ ತೊಡಗಿಕೊಂಡಿರುವ ಹಳ್ಳೂರ ಅವರು 1940 ಏ 13 ರಂದು ವಿಜಯಪುರ ಜಿಲ್ಲೆಯ ಹಳ್ಳೂರ ಗ್ರಾಮದಲ್ಲಿ ಜನಿಸಿದ್ದಾರೆ. ಅವರು ಸರ್ಕಾರಿ ಶಾಲೆಯ ಶಿಕ್ಷರಾಗಿ ವಜ್ಜಲ ಹುಣಸಗಿ ಹಾಗೂ ಮುದನೂರು ಗ್ರಾಮದಲ್ಲಿ ಸೇವೆ ಸಲ್ಲಿಸಿದ್ದಾರೆ. 19 98 ರಲ್ಲಿಯೇ ನಿವೃತ್ತರಾಗಿದ್ದು ಬಳಿಕ ಸಾಹಿತ್ಯ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ. ಇವರ ಆಯ್ಕೆ ತಾಲ್ಲೂಕು ಸೇರಿದಂತೆ ಜಿಲ್ಲೆಯ ಜನತೆಯ ಸಂಭ್ರಮಕ್ಕೆ ಕಾರಣವಾಗಿದೆ. 500 ಕ್ಕೂ ಹೆಚ್ಚು ಕನವನಗಳನ್ನು ಬರೆದಿದ್ದು 15 ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಇವರ ಕೃತಿಗಳಲ್ಲಿ ಸ್ವಾತಂತ್ರ್ಯ ಹೋರಾಟಗಾರ ಕೋಳೂರು ಕೇಸರಿ ವಿರುಪಾಕ್ಷಪ್ಪಗೌಡ ಸೂಗುರು ಶಿವಶರಣೆ ಶಿವಲಿಂಗಮ್ಮ ನವರು ಎಂಬ ಕೃತಿಗಳು ಹೆಚ್ಚು ಜನ ಆಕರ್ಷಿತವಾಗುವಂತೆ ಮಾಡಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.