ADVERTISEMENT

ಕೆಂಭಾವಿ | ಕೋಳಿಪಂದ್ಯ: ₹14 ಸಾವಿರ, 37 ಬೈಕ್ ಜಪ್ತಿ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2024, 14:24 IST
Last Updated 28 ಮಾರ್ಚ್ 2024, 14:24 IST
ಕೋಳಿ ಪಂದ್ಯದ ಅಡ್ಡ ಮೇಲೆ ಮಾಡಿ ವಶಕ್ಕೆ ಪಡೆದ 37 ಬೈಕ್‍ಗಳು
ಕೋಳಿ ಪಂದ್ಯದ ಅಡ್ಡ ಮೇಲೆ ಮಾಡಿ ವಶಕ್ಕೆ ಪಡೆದ 37 ಬೈಕ್‍ಗಳು   

ಕೆಂಭಾವಿ: ಕೋಳಿ ಪಂದ್ಯ ವೇಳೆ ದಾಳಿ ಮಾಡಿದ ಪೊಲೀಸರು ನಗದು, ಬೈಕ್ ಸೇರಿದಂತೆ ಹಲವು ವಸ್ತುಗಳನ್ನು ವಶಪಡಿಸಿಕೊಂಡಿದ್ದು ಗುರುವಾರ ತಿಳಿದುಬಂದಿದೆ. 

ಪಟ್ಟಣ ಸೀಮಾಂತರದ ನಗನೂರ ರಸ್ತೆಯ ಸರ್ಕಾರಿ ಜಾಗದಲ್ಲಿ ಕಳೆದ ಸೋಮವಾರ (ಮಾ.25)ಕೋಳಿ ಪಂದ್ಯ ನಡೆಯುತ್ತಿತ್ತು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಪಿಎಸ್‍ಐ ರಾಜಶೇಖರ ರಾಠೋಡ ಅವರ ಪೊಲೀಸ್ ತಂಡ ದಾಳಿ ಮಾಡಿದೆ.

₹14,700, 6 ಮೊಬೈಲ್, 4 ಹುಂಜ, 37 ಬೈಕ್ ವಶಪಡಿಸಿಕೊಳ್ಳಲಾಗಿದೆ. ಪ್ರಕರಣ ಸಂಬಂಧ ಒಟ್ಟು 11 ಜನರ ಮೇಲೆ ಕೆಂಭಾವಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಪಿಎಸ್‍ಐ ರಾಜಶೇಖರ ರಾಠೋಡ ತಿಳಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.