
ಪ್ರಜಾವಾಣಿ ವಾರ್ತೆ
ಶಹಾಪುರ: ಸರ್ಕಾರಿ ಶಾಲೆಗಳನ್ನು ಮುಚ್ಚುವ ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಕೈ ಬಿಡುವಂತೆ ಆಗ್ರಹಿಸಿ ಶುಕ್ರವಾರ ಮಕ್ಕಳ ಪೋಷಕರು ಪ್ರತಿಭಟನೆ ನಡೆಸಿದರು.
ನಂತರ ಎಐಡಿಎಸ್ ಒ ಜಿಲ್ಲಾ ಸಂಚಾಲಕಿ ಶಿಲ್ಪಾ ಬಿಕೆ ಮಾತನಾಡಿ, ‘ಸರ್ಕಾರ 40 ಸಾವಿರ ಶಾಲೆಗಳನ್ನು ಮುಚ್ಚಲು ಹೊರಟಿದೆ. ಇದು ಬಡ ಮಕ್ಕಳಿಗೆ ಹಾಗೂ ಜನ ವಿರೋಧಿ ಕಾನೂನು ಆಗಿದೆ. ಸರ್ಕಾರ ಸರ್ಕಾರ ಶಾಲೆ ಮುಚ್ಚುವುದಿಲ್ಲ ಎಂದು ಬಾಯಿ ಮಾತಿನಿಂದ ಹೇಳುತ್ತಿದೆ. ಇನ್ನೊಂದಡೆ ಕೆಪಿಎಸ್ ಯೋಜನೆ ಸಮರ್ಥಿಸಿಕೊಳ್ಳುತ್ತಿದೆ’ ಎಂದು ಆರೋಪಿಸಿದರು.
ಗ್ರಾಮದ ಮುಖಂಡರಾದ ಮಲ್ಲಪ್ಪ, ಅಯ್ಯಪ್ಪ, ಮಾಳಿಂಗರಾಯ, ಮರೆಪ್ಪ ಹಾಗೂ ಶಾಲೆಯ ಮಕ್ಕಳು ಭಾಗವಹಿಸಿದ್ದರು.