ADVERTISEMENT

ಮಾವಿನಕೆರೆ ಅಭಿವೃದ್ಧಿಗೆ ಬದ್ಧ: ಶಾಸಕ

​ಪ್ರಜಾವಾಣಿ ವಾರ್ತೆ
Published 22 ಜೂನ್ 2021, 13:16 IST
Last Updated 22 ಜೂನ್ 2021, 13:16 IST
ಶಹಾಪುರ ನಗರದ ಮಾವಿನಕೆರೆಗೆ ಸೋಮವಾರ ಶಾಸಕ ಶರಣಬಸಪ್ಪ ದರ್ಶನಾಪುರ ಭೇಟಿ ನೀಡಿ ಸ್ವಚ್ಛತಾ ಕಾರ್ಯದ ಬಗ್ಗೆ ಪರಿಶೀಲಿಸಿದರು
ಶಹಾಪುರ ನಗರದ ಮಾವಿನಕೆರೆಗೆ ಸೋಮವಾರ ಶಾಸಕ ಶರಣಬಸಪ್ಪ ದರ್ಶನಾಪುರ ಭೇಟಿ ನೀಡಿ ಸ್ವಚ್ಛತಾ ಕಾರ್ಯದ ಬಗ್ಗೆ ಪರಿಶೀಲಿಸಿದರು   

ಶಹಾಪುರ: ‘ನಗರದ ಹೃದಯ ಭಾಗವಾಗಿರುವ ಮಾವಿನಕೆರೆಗೆ ಸಾರ್ವಜನಿಕರು ವಾಯು ವಿಹಾರಕ್ಕಾಗಿ ಬರುವಂತಾಗಲು ಕೆರೆಯ ದಂಡೆಯ ಮೇಲೆ ಸಿಸಿ ರಸ್ತೆ ನಿರ್ಮಿಸುವುದು. ಕೆರೆಯ ನೀರು ಪೋಲಾಗದಂತೆ ತಡೆಗೋಡೆ ದುರಸ್ತಿ ಮಾಡುವುದು. ಕೆರೆಯಲ್ಲಿ ಸದಾಕಾಲ ನೀರು ನಿಲ್ಲುವಂತೆ ಮಡುವುದರಿಂದ ಅಂತರ್ಜಲಮಟ್ಟ ಹೆಚ್ಚಳಕ್ಕೆ ಸಹಕಾರಿಯಾಗುತ್ತದೆ‘ ಎಂದು ಶಾಸಕ ಶರಣಬಸಪ್ಪ ದರ್ಶನಾಪುರ ತಿಳಿಸಿದರು.

ನಗರದ ಮಾವಿನ ಕೆರೆಗೆ ಸೋಮವಾರ ನಗರಸಭೆಯ ಸಿಬ್ಬಂದಿಯ ಜೊತೆ ಪರಿಶೀಲಿಸಿದ ನಂತರ ಅವರು ಮಾತನಾಡಿದರು.

ಕೆರೆಯ ಬಳಿ ದಿನಾಲು ಒಬ್ಬ ಪೌರಕಾರ್ಮಿಕರನ್ನು ಕೆರೆಯ ಸುತ್ತಲಿನ ತ್ಯಾಜ್ಯ ವಿಲೇವಾರಿ ಮಾಡಲು ನಿಯೋಜಿಸಬೇಕು. ಕೆರೆಯನ್ನು ಸುಂದರ ಪ್ರವಾಸಿತಾಣವಾಗಿ ನಿರ್ಮಾಣ ಮಾಡಲು ಬೇಕಾಗುವ ಕ್ರೀಯಾಯೋಜನೆ ಸಿದ್ಧಪಡಿಸುವಂತೆ ನಗರಸಭೆ ಎಂಜಿನಿಯರ್ ಶರಣು ಪೂಜಾರಿ ಅವರಿಗೆ ಶಾಸಕ ದರ್ಶನಾಪುರ ಸೂಚಿಸಿದರು.

ADVERTISEMENT

ಮಾವಿನ ಕೆರೆಯ ಒಟ್ಟು ವಿಸ್ತೀರ್ಣದ ಬಗ್ಗೆ ಸಮೀಕ್ಷೆ ನಡೆಸಿ ಗಡಿ ಗುರುತು ಹಾಕಬೇಕು. ಕೆರೆ ಒತ್ತುವರಿ ಪ್ರದೇಶವನ್ನು ತೆರವುಗೊಳಿಸಬೇಕು. ಕೆರೆಯ ಮಾಹಿತಿಯನ್ನು ಒಳಗೊಂಡ ನಾಮಫಲಕ ಅಳವಡಿಸಬೇಕು. ಕೆರೆಯಲ್ಲಿ ನೀರು ಪೋಲಾಗುತ್ತದೆ ಎಚ್ಚರಿಕೆ ವಹಿಸಬೇಕು ಎಂದು ಚಿಂತಕ ವಿಶ್ವಾರಾಧ್ಯ ಸತ್ಯಂಪೇಟೆ ಮನವಿ ಮಾಡಿದರು.

ನಗರಸಭೆ ಪ್ರಬಾರಿ ಪೌರಾಯುಕ್ತ ದೇವಿಂದ್ರ ಹೆಗ್ಗಡೆ, ಪರಿಸರ ಎಂಜಿನಿಯರ್‌ ಹರೀಶ ಸಜ್ಜನಶೆಟ್ಟಿ, ಕಿರಿಯ ಆರೋಗ್ಯ ಸಹಾಯಕ ಜಂಬಯ್ಯ ಗಣಾಚಾರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.