ADVERTISEMENT

ಕಾಂಗ್ರೆಸ್ ನೇತೃತ್ವದ ಹೋರಾಟ, ಬಲಿದಾನದಿಂದ ಸ್ವಾತಂತ್ರ್ಯ: ಬಾಬುರಾವ ಚಿಂಚನಸೂರ

ಗಾಂಧೀಜಿ, ಶಾಸ್ತ್ರಿ ಜಯಂತಿ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2024, 15:05 IST
Last Updated 2 ಅಕ್ಟೋಬರ್ 2024, 15:05 IST
ಗುರುಮಠಕಲ್‌ದಲ್ಲಿ ಗುರುಮಠಕಲ್ ಮತ್ತು ಸೈದಾಪುರ ಬ್ಲಾಕ್ ಕಾಂಗ್ರೆಸ್ ಸಮಿತಿಗಳ ಸಹಯೋಗದಲ್ಲಿ ಅಯೋಜಿಸಿದ್ದ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಬಾಬುರಾವ ಚಿಂಚನಸೂರ ಮಾತನಾಡಿದರು
ಗುರುಮಠಕಲ್‌ದಲ್ಲಿ ಗುರುಮಠಕಲ್ ಮತ್ತು ಸೈದಾಪುರ ಬ್ಲಾಕ್ ಕಾಂಗ್ರೆಸ್ ಸಮಿತಿಗಳ ಸಹಯೋಗದಲ್ಲಿ ಅಯೋಜಿಸಿದ್ದ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಬಾಬುರಾವ ಚಿಂಚನಸೂರ ಮಾತನಾಡಿದರು   

ಗುರುಮಠಕಲ್‌: ‘ಮಹಾತ್ಮ ಗಾಂಧೀಜಿ ನೇತೃತ್ವದಲ್ಲಿ ಲಕ್ಷಾಂತರ ಜನರು ಮಾಡಿದ ತ್ಯಾಗ ಮತ್ತು ಬಲಿದಾನದಿಂದ ದೇಶಕ್ಕೆ ಸ್ವಾತಂತ್ರ್ಯ ಲಭಿಸಿದೆ’ ಎಂದು ಮಾಜಿ ಸಚಿವ ಬಾಬುರಾವ ಚಿಂಚನಸೂರ ಅಭಿಪ್ರಾಯಪಟ್ಟರು.

ಪಟ್ಟಣದ ಗಾಂಧಿ ಮೈದಾನದಲ್ಲಿ ಬುಧವಾರ ಸೈದಾಪುರ ಮತ್ತು ಗುರುಮಠಕಲ್‌ ಬ್ಲಾಕ್‌ ಕಾಂಗ್ರೆಸ್‌ ಸಮಿತಿಗಳ ಸಹಯೋಗದಲ್ಲಿ ಆಯೋಜಿಸಿದ್ದ ಬೆಳಗಾವಿ ಅಧಿವೇಶನದ ಶತಮಾನೋತ್ಸವ, ಗಾಂಧಿ ಜಯಂತಿ ಮತ್ತು ಲಾಲ್‌ ಬಹದ್ದೂರ ಶಾಸ್ತ್ರಿ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮುಖಂಡ ಸಾಯಿಬಣ್ಣ ಬೋರಬಂಡಾ ಮಾತನಾಡಿ,‘1924ರ ಬೆಳಗಾವಿಯಲ್ಲಿ ಮಹಾತ್ಮ ಗಾಂಧೀಜಿ ಅಧ್ಯಕ್ಷತೆಯಲ್ಲಿ ನಡೆದ ಅಧಿವೇಶನದ ಶತಮಾನೋತ್ಸವದ ಹಿನ್ನೆಲೆ ಈ ಸಂಭ್ರಮವನ್ನು ರಾಜ್ಯದೆಲ್ಲೆಡೆ ಆಚರಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ’ ಎಂದರು.

ADVERTISEMENT

ಬ್ಲಾಕ್‌ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಕೃಷ್ಣಾ ಚಪೆಟ್ಲಾ ಮಾತನಾಡಿ, ಸ್ವಾತಂತ್ರ್ಯಕ್ಕೂ ಮೊದಲು ದೇಶ ಬ್ರಿಟಿಷರ ಕೈಯಲ್ಲಿತ್ತು. ಗಾಂಧೀಜಿ, ಶಾಸ್ತ್ರೀಜಿ, ಸುಭಾಷ್‌ಚಂದ್ರ ಬೋಸ್‌, ಭಗತ್‌ಸಿಂಗ್‌ರಂಥ ನಾಯಕರು ದೇಶದ ವಿಮೋಚಗೆ ಹೋರಾಡಿದ್ದು, ಅಂತಹ ಮಹಾನ ನಾಯಕರ ಹೋರಾಟದಿಂದ ದೇಶ ಸ್ವಾತಂತ್ರ್ಯಗೊಂಡಿದೆ’ ಎಂದು ಹೇಳಿದರು.

ಸೈದಾಪುರ ಬ್ಲಾಕ್‌ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ನಿರಂಜನರೆಡ್ಡಿ, ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ಶ್ರೇಣಿಕಕುಮಾರ ದೋಖಾ, ತಾಲ್ಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಲಕ್ಷ್ಮೀಕಾಂತರೆಡ್ಡಿ ಪಲ್ಲ, ಮುಖಂಡ ಸಾಯಿಬಣ್ಣ ಬೋರಬಂಡಾ, ಸಂಜೀವಕುಮಾರ ಚಂದಾಪುರ, ಖಾಜಾ ಮೈನೋದ್ಧಿನ್‌, ಸಾಬಣ್ಣ ಹೂಗಾರ, ಸೈಯದ್‌ ಬಾಬಾ, ಫಯಾಜ್‌ ಅಹ್ಮದ್‌ ಸೇರಿ ಕಾಂಗ್ರೆಸ್‌ ಮುಖಂಡರು ಉಪಸ್ಥಿತರಿದ್ದರು.

ಗುರುಮಠಕಲ್ ಪಟ್ಟಣದ ಬಸವೇಶ್ವರ ವೃತ್ತದಿಂದ ಗಾಂಧಿ ಮೈದಾನದವರೆಗೆ ಬುಧವಾರ ಕಾಂಗ್ರೆಸ್ ಆಯೋಜಿಸಿದ್ದ ಮೆರವಣಿಗೆಯಲ್ಲಿ ಮುಖಂಡರು ಭಾಗವಹಿಸಿದ್ದರು
'ಸಿದ್ದರಾಮಯ್ಯ ರಾಜೀನಾಮೆ ಪ್ರಶ್ನೆಯಿಲ್ಲ'
‘ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ’ ಎಂದು ಮಾಜಿ ಸಚಿವ ಬಾಬುರಾವ ಚಿಂಚನಸೂರು ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು‘ಸಿದ್ದರಾಮಯ್ಯ ಜನಪ್ರಿಯತೆ ಕುಗ್ಗಿಸಲು ಬಿಜೆಪಿ ಸುಳ್ಳು ಹುಟ್ಟಿಸಿದೆ. ಅವರಿಗೆ ಕಳಂಕತರುವ ಬಿಜೆಪಿಯ ಪ್ರಯತ್ನ ಫಲಿಸುವುದಿಲ್ಲ. ಸಮಸ್ಯೆಯೇ ಇಲ್ಲದಿರುವಾಗ ರಾಜೀನಾಮೆ ನೀಡುವ ಅವಶ್ಯಕತೆಯೇನು’ ಎಂದು ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.