ಅಪಘಾತ
–ಪ್ರಾತಿನಿಧಿಕ ಚಿತ್ರ
ಶಹಾಪುರ: ತಾಲ್ಲೂಕಿನ ಮದ್ರಿಕಿ ಕ್ರಾಸ್ ಬಳಿ ಮಹಿಂದ್ರಾ ಪಿಕಪ್ ವಾಹನ ಹಾಗೂ ಸಾರಿಗೆ ಬಸ್ ನಡುವೆ ನಡೆದ ರಸ್ತೆ ಅಪಘಾತದಲ್ಲಿ ನಾಲ್ವರು ಅಸುನೀಗಿದ್ದಾರೆ. ಹೆಸರು ಪತ್ತೆಯಾಗಿಲ್ಲ. ಹತ್ತು ಜನ ಗಾಯಗೊಂಡಿದ್ದಾರೆ.
ಮಹಿಂದ್ರಾ ಪಿಕಪ್ ಶಹಾಪುರದಿಂದ ಕಲಬುರಗಿಗೆ ತೆರಳುತ್ತಿತ್ತು. ಕಲಬುರಗಿಯಿಂದ ಸಾರಿಗೆ ಬಸ್ ಆಗಮಿಸುತ್ತಿತ್ತು ಎನ್ನಲಾಗುತ್ತಿದೆ.
ಅಪಘಾತದಿಂದ ಬೀದರ್ ಶ್ರೀರಂಗಪಟ್ಟಣ ಹೆದ್ದಾರಿಯ ಬಳಿ ಟ್ರಾಫಿಕ್ ಜಾಂ ಉಂಟಾಗಿ ಒಂದೂವರೆ ಗಂಟೆ ಪ್ರಯಾಣಿಕರು, ವಾಹನ ಸವಾರರು ಪರದಾಡಿದರು.
ಸ್ಥಳಕ್ಕೆ ಆಗಮಿಸಿದ ಪೊಲೀಸರು ಮತ್ತು ಅವರೊಂದಿಗೆ ಸಾರ್ವಜನಿಕರ ಸಹಕಾರದಿಂದ ವಾಹನದಡಿ ಸಿಲುಕಿದ ಹಲವರನ್ನು ತೆಗೆಯಲು ಹರಸಾಹಸ ಮಾಡಿದರು. ಪಿಕಪ್ ಚಾಲಕ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಗಾಯಗೊಂಡವರನ್ನು ಶಹಾಪುರ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕಳುಹಿಸಲಾಗಿದೆ. ಭೀಮರಾಯನಗುಡಿ ಠಾಣೆಯಲ್ಲಿ ದೂರು ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.