ADVERTISEMENT

ಲಾಕ್‌ಡೌನ್‌ಗೆ ಮಿಶ್ರ ಪ್ರತಿಕ್ರಿಯೆ

ಮುಚ್ಚಿದ ಅಂಗಡಿ ಮುಂಗಟ್ಟುಗಳು, ಸಂಚಾರ ವಿರಳ, ಪೊಲೀಸರ ನಿಯೋಜನೆ

​ಪ್ರಜಾವಾಣಿ ವಾರ್ತೆ
Published 12 ಜುಲೈ 2020, 15:57 IST
Last Updated 12 ಜುಲೈ 2020, 15:57 IST
ಯಾದಗಿರಿಯ ಶಾಸ್ತ್ರಿ ವೃತ್ತದ ಬಳಿ ಸಂಚಾರ ಪೊಲೀಸರ ಎದುರಿಗೆ ಭಾನುವಾರ ಬೈಕ್‌, ಆಟೊ ಓಡಾಡಿದವು
ಯಾದಗಿರಿಯ ಶಾಸ್ತ್ರಿ ವೃತ್ತದ ಬಳಿ ಸಂಚಾರ ಪೊಲೀಸರ ಎದುರಿಗೆ ಭಾನುವಾರ ಬೈಕ್‌, ಆಟೊ ಓಡಾಡಿದವು   

ಯಾದಗಿರಿ: ಭಾನುವಾರದ ಕರ್ಫ್ಯೂಗೆ ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು. ಅಲ್ಲಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಜಿಲ್ಲಾ ಕೇಂದ್ರವಾದ ನಗರದಲ್ಲಿ ಬೈಕ್, ಆಟೊಗಳ ಓಡಾಟ ಅಲ್ಲಲ್ಲಿ ಸಾಮಾನ್ಯವಾಗಿತ್ತು.

ದಿನಸಿ, ಹಾಲು ಅಂಗಡಿಗಳನ್ನು ಬೆಳಿಗ್ಗೆ ಎರಡು ಗಂಟೆ ತೆಗೆದು ನಂತರ ಮುಚ್ಚಲಾಗಿತ್ತು. ಬೇರೆ ಅಂಗಡಿಗಳು ಸಂಪೂರ್ಣ ಬಂದ್‌ ಆಗಿದ್ದವು. ಬಂದ್‌ನಿಂದ ಸಾರಿಗೆ ಬಸ್‌ಗಳು ಓಡಾಟಇರಲಿಲ್ಲ. ಖಾಸಗಿ ವಾಹನಗಳು ಓಡಾಟ ನಡೆಸಿದ್ದವು.
ಬಸ್‌ ನಿಲ್ದಾಣ ಬಿಕೋ ಎನ್ನುತ್ತಿತ್ತು. ಮರಳು ಲಾರಿಗಳು ರಸ್ತೆಗೆ ಇಳಿದಿದ್ದವು.ಸಂಜೆಯ ನಂತರ ಯಥಾಸ್ಥಿತಿ ಓಡಾಟ
ನಡೆದಿತ್ತು.

ಅನಗತ್ಯವಾಗಿ ತಿರುಗಾಡುತ್ತಿದ್ದವರಿಗೆ ಪೊಲೀಸರು ಎಚ್ಚರಿಕೆ ನೀಡಿದರು. ಮಾಸ್ಕ್‌ ಧರಿಸುವಂತೆ ಜಾಗೃತಿ ಮೂಡಿಸುತ್ತಿದ್ದರು.

ADVERTISEMENT

ಶಹಾಪುರ ನಗರದಲ್ಲಿಭಾನುವಾರ ಲಾಕ್‌ಡೌನ್‌ದಿಂದ ಅಂಗಡಿ ಬಂದ್‌ಆಗಿದ್ದವು. ಕೆಲವು ಕಡೆ ಪೊಲೀಸರು ಬಲವಂತದಿಂದ ಅಂಗಡಿ ಮುಚ್ಚಿಸಿದರು. ವಾಹನಗಳ ಓಡಾಟ ವಿರಳವಾಗಿತ್ತು.

ಹುಣಸಗಿ ಪಟ್ಟಣದಲ್ಲಿವಾಹನಗಳ ಓಡಾಟ ವಿರಳವಾಗಿತ್ತು. ಪ್ರಮುಖ ಸ್ಥಳಗಳಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು.

ಯರಗೋಳ ಗ್ರಾಮದಲ್ಲಿ ಅಂಗಡಿ, ಹೋಟೆಲ್, ಸಂಪೂರ್ಣ ಬಂದ್ಆಗಿದ್ದವು. ಮೆಡಿಕಲ್, ಖಾಸಗಿ ಆಸ್ಪತ್ರೆಗಳು ತೆರೆದಿದ್ದವು. ವಾಹನ ಸಂಚಾರ ಸಂಪೂರ್ಣ ಸ್ತಬ್ಧವಾಗಿತ್ತು.ಕೃಷಿ ಚಟುವಟಿಕೆಗಳಲ್ಲಿ ರೈತರು
ತಲ್ಲೀನ ಆಗಿದ್ದರು.

ಕಕ್ಕೇರಾ ಸ್ತಬ್ಧ

ಕಕ್ಕೇರಾ ಪಟ್ಟಣದಲ್ಲಿ ಕೊರೊನಾ ಹಿನ್ನೆಲೆಯಲ್ಲಿ ಭಾನುವಾರ ಲಾಕ್‌ಡೌನ್‌ ನಡೆಸಲಾಯಿತು. ಸಾರ್ವಜನಿಕರು ಹೊರಬರದ ಕಾರಣ ಪಟ್ಟಣ ಸಂಪೂರ್ಣ ಸ್ತಬ್ಧವಾಗಿತ್ತು. ಅಗತ್ಯ ಸೇವೆಗಳ ಅಂಗಡಿ ಬಿಟ್ಟರೆ ಉಳಿದ ಅಂಗಡಿಗಳು ಮುಚ್ಚಿದ್ದವು.

ಭಾನುವಾರದ ಲಾಕ್‌ಡೌನ್‌ ಬಗ್ಗೆ ಈಚೆಗೆ ಪುರಸಭೆಯು ಆಟೊ ಮೂಲಕ ಪ್ರಚಾರ ಮಾಡಿತ್ತು. ಕೂಲಿ ಕಾರ್ಮಿಕರು ಕಟ್ಟಡ, ಕೃಷಿ ಕಾರ್ಯಗಳಲ್ಲಿ ತೊಡಗಿದ್ದು ಕಂಡು ಬಂದಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.