ADVERTISEMENT

ವಿಶ್ವನಾಥರಡ್ಡಿ ಮುದ್ನಾಳ ಪುಣ್ಯಸ್ಮರಣೆ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2022, 6:03 IST
Last Updated 2 ಡಿಸೆಂಬರ್ 2022, 6:03 IST
ಯಾದಗಿರಿ ನಗರದ ಮುದ್ನಾಳ ತೋಟದಲ್ಲಿ ಸ್ವಾತಂತ್ರ‍್ಯ ಹೋರಾಟಗಾರ, ಮಾಜಿ ಸಚಿವ ವಿಶ್ವನಾಥರಡ್ಡಿ ಮುದ್ನಾಳ ಮತ್ತು ಪತ್ನಿ ಲಿಂ.ನೀಲಗಂಗಮ್ಮ ತಾಯಿ ಮುದ್ನಾಳರ 14ನೇ ಪುಣ್ಯಸ್ಮರಣೆ ನಡೆಯಿತು
ಯಾದಗಿರಿ ನಗರದ ಮುದ್ನಾಳ ತೋಟದಲ್ಲಿ ಸ್ವಾತಂತ್ರ‍್ಯ ಹೋರಾಟಗಾರ, ಮಾಜಿ ಸಚಿವ ವಿಶ್ವನಾಥರಡ್ಡಿ ಮುದ್ನಾಳ ಮತ್ತು ಪತ್ನಿ ಲಿಂ.ನೀಲಗಂಗಮ್ಮ ತಾಯಿ ಮುದ್ನಾಳರ 14ನೇ ಪುಣ್ಯಸ್ಮರಣೆ ನಡೆಯಿತು   

ಯಾದಗಿರಿ: ನಗರದ ಮುದ್ನಾಳ ತೋಟದಲ್ಲಿ ಸ್ವಾತಂತ್ರ‍್ಯ ಹೋರಾಟಗಾರ, ಮಾಜಿ ಸಚಿವ ವಿಶ್ವನಾಥರಡ್ಡಿ ಮುದ್ನಾಳ ಮತ್ತು ಪತ್ನಿ ನೀಲಗಂಗಮ್ಮ ತಾಯಿ ಮುದ್ನಾಳರ 14ನೇ ಪುಣ್ಯಸ್ಮರಣೆ ಗುರುವಾರ ನಡೆಯಿತು.

ದಿ.ವಿಶ್ವನಾಥರಡ್ಡಿ ಮುದ್ನಾಳ ಕಲ್ಯಾಣ ಕರ್ನಾಟಕದ ದೊಡ್ಡ ಶಕ್ತಿಯಾಗಿದ್ದವರು. ತಾವು ನಂಬಿದ ಸಿದ್ಧಾಂತಕ್ಕೆ ಕೊನೆವರೆಗೂ ಉಸಿರಾಗಿ ನಡೆದುಕೊಂಡವರು ಹೆಡಗಿಮದ್ರಾ ಮಠದ ಶ್ರೀ ಶಿವಶಾಂತ ಮಲ್ಲಿಕಾರ್ಜುನ ಪಂಡಿತಾರಾಧ್ಯ ಶಿವಾಚಾರ್ಯರು ನುಡಿದರು.

ಮುದ್ನಾಳ ದೇಶಪ್ರೇಮ ಹಾಗೂ ಸಮಾಜವನ್ನು ಸಂಘಟಿಸುವ ಶಕ್ತಿ ಇಂದಿನ ಯುವಕರಿಗೆ ಮಾದರಿಯಾಗಿದೆ. ಸರ್ವ ಜನರನ್ನು ಸಮಾನರನ್ನಾಗಿ ಕಂಡು ನಾಗರಿಕ ಸಮಾಜ ದಾರಿ ತಪ್ಪಿದ ಸಂದರ್ಭದಲೆಲ್ಲ ಸರಿದಾರಿಗೆ ತರುವ ಕೆಲಸ ಮಾಡಿದ್ದಾರೆ. ಸಮಾಜದಲ್ಲಿ ಮನೆ ಮಾಡಿದ್ದ ಅಸ್ಪಶ್ಯತೆ ಹೋಗಲಾಡಿಸಲು ತಲೆಮೇಲೆ ಸದಾ ಶ್ವೇತವಸ್ತ್ರ ಧರಿಸಿ ಮೌನಕ್ರಾಂತಿ ಮಾಡಿದ ಪುಣ್ಯ ಪುರುಷ ಎಂದು ಬಣ್ಣಿಸಿದರು.

ADVERTISEMENT

ಶಾಸಕ ವೆಂಕಟರೆಡ್ಡಿ ಮುದ್ನಾಳ, ಮಾಜಿ ಶಾಸಕ ಡಾ.ವೀರಬಸವಂತರಡ್ಡಿ ಮುದ್ನಾಳ, ರಾಚನಗೌಡ ಮುದ್ನಾಳ, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಮಲ್ಲಣ್ಣಗೌಡ ಹತ್ತಿಕುಣಿ, ಮಹೇಶರಡ್ಡಿ ಮುದ್ನಾಳ, ಕಸಾಪ ಜಿಲ್ಲಾಧ್ಯಕ್ಷ ಸಿದ್ದಪ್ಪ ಹೊಟ್ಟಿ, ಯುಡಾ ಅಧ್ಯಕ್ಷ ರುದ್ರಗೌಡ ಪಾಟೀಲ, ನಗರಸಭೆ ಮಾಜಿ ಅಧ್ಯಕ್ಷ ವಿಲಾಸ ಪಾಟೀಲ, ಖಂಡಪ್ಪ ದಾಸನ್, ಶರಣಗೌಡ ಬಾಡಿಯಾಳ, ಆರ್.ಮಹಾದೇವಪ್ಪ ಅಬ್ಬೆತುಮಕೂರ, ಅಯಣ್ಣಾ ಹುಂಡೇಕಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.