ಶಹಾಪುರ: ‘ಮಹಿಳೆಯರು ಸ್ವಾವಲಂಬಿಯಾಗಿ ವ್ಯಾಪಾರ ನಡೆಸಲು ಮುಸ್ಲಿಂ ಸೌಹಾರ್ದ ಬ್ಯಾಂಕ್ ಆರ್ಥಿಕ ನೆರವು ಒದಗಿಸಲು ಶ್ರಮಿಸುತ್ತಿದೆ ಎಂದು ಬ್ಯಾಂಕ್‌ನ ಅಧ್ಯಕ್ಷ ಯೂಸೂಫ್ ಸಿದ್ದಿಕಿ ತಿಳಿಸಿದರು.
ನಗರದಲ್ಲಿ ಭಾನುವಾರ ನಡೆದ ಮುಸ್ಲಿಂ ಸೌಹಾರ್ದ ಸಹಕಾರ ಸಂಘದ 31ನೇ ವಾರ್ಷಿಕ ಸಭೆಯಲ್ಲಿ ಅವರು ಮಾತನಾಡಿದರು.
‘31 ವರ್ಷದ ಹಿಂದೆ ಸ್ಥಾಪಿಸಿದ ಸಂಘವು ತನ್ನದೆ ಆದ ಹೆಜ್ಜೆ ಗುರುತು ಮೂಡಿಸಿದೆ. ಪ್ರಸಕ್ತ ವರ್ಷ ₹6.96 ಲಕ್ಷ ನಿವ್ವಳ ಲಾಭಗಳಿಸಿದೆ. ಸುಸ್ಥಿರವಾಗಿ ಬೆಳೆದು ನಿಲ್ಲಲು ಸಂಘದ ನಿರ್ದೇಶಕರ ಹಾಗೂ ಷೇರುದಾರರ ಸಹಕಾರ ಮರೆಯುವಂತಿಲ್ಲ’ ಎಂದರು.
‘ನಮ್ಮ ಸಂಘವು ಪ್ರಸಕ್ತ ವರ್ಷ ₹2.74 ಕೋಟಿ ವಹಿವಾಟು ನಡೆಸಿದೆ. ಷೇರುದಾರರಿಗೆ ಲಾಭಾಂಶ ನೀಡಲಾಗುವುದು. ಸಹಕಾರ ಸಂಘವು ಯಾವಾಗಲು ಪರಸ್ಪರ ವಿಶ್ವಾಸದ ತಳಹದಿಯ ಮೇಲೆ ನಿಂತಿವೆ ಎಂದರು.
‘ಸಾಲ ಪಡೆಯುವಾಗ ಎಷ್ಟು ಅಗತ್ಯವಿತ್ತೊ ಅದನ್ನು ಮರಳಿ ವಾಪಸ್ ಮಾಡುವಾಗ ಅಷ್ಟೆ ಪ್ರಾಮಾಣಿಕವಾಗಿ ಮರು ಪಾವತಿ ಮಾಡಿದರೆ ಅಭಿವೃದ್ಧಿ ಹೊಂದಲು ಸಾಧ್ಯ’ ಎಂದರು.
ಸಗರದ ಸಯ್ಯದ ಶಫಿಯುದ್ದೀನ್ ಸರಮಸ್ತ್ ಹಾಗೂ ಸಂಘದ ನಿರ್ದೇಶಕ ಅಬ್ದುಲ್ ಮತೀನ ಸಗರಿ, ಅಮದ್ ಬಿನ್ ಅಮರ ಚಾವುಸ್, ನೂರಲ್ ಹಸನ್ ಇನಾಮದಾರ, ಶೇಖ್ ಅಬೀದ್ ಬಡೇಘರ್, ಇಫ್ತಿಯಾರ್ ಖುರೇಶಿ, ಶಕೀಲ್ ಮುಲ್ಲಾ, ನಾರಾಯನರಾವ, ಚಾಂದಾಪಾಶ, ರಫೀಕ್ ಚೌದರಿ, ಸಯ್ಯದ್ ಮುಸ್ತಾಫ್ ದರ್ಬಾನ್, ಸಲಿಂ ಸಂಗ್ರಾಮ್, ಸಯ್ಯದ್ ಜಾಫ್ರಿ, ಸಯ್ಯದ ಖಾದ್ರಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.