ADVERTISEMENT

ಯಾದಗಿರಿ : ನಾರಾಯಣಪುರ ತಾಳಿಕೋಟೆ ಬಸ್ ಸಂಚಾರ ಆರಂಭ 

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2025, 5:48 IST
Last Updated 15 ಸೆಪ್ಟೆಂಬರ್ 2025, 5:48 IST
   

ಹುಣಸಗಿ: ತಾಲ್ಲೂಕಿನ ನಾರಾಯಣಪುರ ಗ್ರಾಮದ ಜನತೆಯ ಬಹುದಿನಗಳ ಬೇಡಿಕೆಯಾದ ನಾರಾಯಣಪುರ ಮೂಲಕ ತಾಳಿಕೋಟಿಗೆ ನೂತನ ಬಸ್ ಸೇವೆ ಆರಂಭಗೊಂಡಿದ್ದು ಗ್ರಾಮಸ್ಥರಲ್ಲಿ ಸಂತಸ ತಂದಿದೆ.

ಈ ಬಸ್ ಸೇವೆ ಆರಂಭಿಸುವ ಕುರಿತಂತೆ ಹಲವಾರು ತಿಂಗಳಿಂದಲೂ ವಿಭಾಗೀಯ ನಿಯಂತ್ರಕರು ಹಾಗೂ ಸುರುಪುರ ಘಟಕ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಲಾಗಿತ್ತು.

ನಾರಾಯಣಪುರದಿಂದ ಕೊಡೇಕಲ್ಲ ಬಿಳೆಬಾವಿ ಮಾರ್ಗವಾಗಿ ತಾಳಿಕೋಟೆಗೆ ಈ ಬಸ್ ಸೇವೆ ಆರಂಭವಾಗಿದೆ. ಅಧಿಕಾರಿಗಳು ಮನವಿಗೆ ಸ್ಪಂದಿಸಿರುವದು ಅತ್ಯಂತ ಖುಷಿ ಕೊಟ್ಟಿದೆ ಎಂದರು.

ಈ ಸಂದರ್ಭದಲ್ಲಿ ನಾರಾಯಣಪುರ ಸಾರಿಗೆ ನಿಯಂತ್ರಕರು, ಬಸ್ ಚಾಲಕ ಹಾಗೂ ನಿರ್ವಾಹಕರಿಗೆ ಗ್ರಾಮಸ್ಥರು ಸನ್ಮಾನಿಸಿ ಗೌರವಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.