ADVERTISEMENT

ಯಾದಗಿರಿ: ನೂತನ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷೆ ಅಧಿಕಾರ ಸ್ವೀಕಾರ

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2020, 3:20 IST
Last Updated 3 ನವೆಂಬರ್ 2020, 3:20 IST
ಯಾದಗಿರಿ ನಗರಸಭೆಯ ಅಧ್ಯಕ್ಷರಾಗಿ ವಿಲಾಸ ಪಾಟೀಲ, ಉಪಾಧ್ಯಕ್ಷೆಯಾಗಿ ಪ್ರಭಾವತಿ ಮಾರುತಿ ಕಲಾಲ್ ಅವರು ಅಧಿಕಾರ ಸ್ವೀಕರಿಸಿದರು
ಯಾದಗಿರಿ ನಗರಸಭೆಯ ಅಧ್ಯಕ್ಷರಾಗಿ ವಿಲಾಸ ಪಾಟೀಲ, ಉಪಾಧ್ಯಕ್ಷೆಯಾಗಿ ಪ್ರಭಾವತಿ ಮಾರುತಿ ಕಲಾಲ್ ಅವರು ಅಧಿಕಾರ ಸ್ವೀಕರಿಸಿದರು   

ಯಾದಗಿರಿ: ‘ನಗರದಲ್ಲಿ ಮೂಲಸೌಕರ್ಯ ಕಲ್ಪಿಸಲು ಒತ್ತು ನೀಡಲಾಗುವುದು. ಎಲ್ಲ ವಾರ್ಡ್‌ಗಳ ಸಮಸ್ಯೆಗಳಿಗೆ ಸ್ಪಂದಿಸಲಾಗುವುದು’ ಎಂದು ನಗರಸಭೆ ಅಧ್ಯಕ್ಷ ವಿಲಾಸ ಪಾಟೀಲ ಹೇಳಿದರು.

ನಗರಸಭೆಯಲ್ಲಿ ಸೋಮವಾರ ಅಧಿಕಾರ ಸ್ವೀಕರಿಸಿ ಮಾತನಾಡಿದ ಅವರು, ‘ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲಾಗುವುದು. ನೂತನ ಜಾಕ್‌ವೆಲ್‌ ನಿರ್ಮಾಣಕ್ಕೆ ₹ 29 ಕೋಟಿ ಮಂಜೂರು ಆಗಿದೆ. ಒಂದು ತಿಂಗಳಲ್ಲಿ ಹೊಸ ಜಾಕ್‌ವೆಲ್‌ ಕಾಮಗಾರಿಗೆ ಶಂಕುಸ್ಥಾಪನೆ ಮಾಡಲಾಗುವುದು. ಪುಣೆ ಕಂಪೆನಿಗೆ ಕಾಮಗಾರಿ ವಹಿಸಲಾಗಿದೆ’ ಎಂದರು.

‘ಮಳೆಯಿಂದ ರಸ್ತೆಗಳು ಹಾಳಾಗಿವೆ. ಪೌರಾಯುಕ್ತರ ಜತೆ ಚರ್ಚಿಸಿ ದುರಸ್ತಿಗೆ ಕ್ರಮ ವಹಿಸಲಾಗುವುದು. ಬಿಡಾಡಿ ದನಗಳ ಸಮಸ್ಯೆ ನಿವಾರಿಸಲಾಗುವುದು’ ಎಂದರು.

ADVERTISEMENT

‘ನಗರಸಭೆಯಲ್ಲಿ ಪೌರಕಾರ್ಮಿಕರ ಕೊರತೆ ಇದೆ. ಹೀಗಾಗಿ ಪೌರಕಾರ್ಮಿಕರ ನೇಮಿಸಲು ಈಗಾಗಲೇ ಜಿಲ್ಲಾಧಿಕಾರಿಗೆ ಪತ್ರ ಬರೆಯಲಾಗಿದೆ’ ಎಂದು ಹೇಳಿದರು.

‘ಶಾಸಕ ವೆಂಕಟರೆಡ್ಡಿಗೌಡ ಮುದ್ನಾಳ ಅವರನ್ನು ಒಳಗೊಂಡಂತೆ ಜನ ಸಂಪರ್ಕ ಸಭೆ ಕರೆಯಲು ತೀರ್ಮಾನಿಸಲಾಗಿದೆ’ ಎಂದು ಮಾಹಿತಿ ನೀಡಿದರು.
ಈ ವೇಳೆ ಶಾಸಕ ವೆಂಕಟರಡ್ಡಿಗೌಡ ಮುದ್ನಾಳ, ಮಾಜಿ ಶಾಸಕ ಡಾ.ವೀರಬಸವಂತರೆಡ್ಡಿ ಮುದ್ನಾಳ, ನಗರಸಭಾ ಉಪಾಧ್ಯಕ್ಷೆ ಪ್ರಭಾವತಿ ಮಾರುತಿ ಕಲಾಲ, ಖಂಡಪ್ಪ ದಾಸನ್, ಮಲ್ಲನಗೌಡ ಹತ್ತಿಕುಣಿ, ಮಹಾದೇವಪ್ಪ ಯಲಸತ್ತಿ, ಯುಡಾ ಅಧ್ಯಕ್ಷ ಬಸವರಾಜ ಚಂಡ್ರಕಿ, ನಗರಸಭೆ ಸದಸ್ಯ ಮತ್ತು ನಗರಧಕ್ಷ ಸುರೇಶ ಅಂಬಿಗೇರ, ನಗರಸಭೆ ಸದಸ್ಯರಾದ ಅಸ್ಸರ ಚಾವುಸ್ಸ, ಸ್ವಾಮಿದೇವ ದಾಸನಕೇರಿ, ಅಂಬಯ್ಯ ಶಾಬಾದಿ, ಚಂದ್ರಕಾಂತ ಮಡ್ಡಿ, ಮಾರುತಿ ಕಲಾಲ, ಕೃಷ್ಣಾ ನಾಯಕ ನಾನೇಕ, ಮಹೇಶ್ ಕುರಕುಂಬಳ, ಮಹಮ್ಮದ್ ವಹಾಬ, ಶಕುಂತಲಾ ಜಿ., ಸುನಿತಾ ಚವಾಣ್, ವೀಣಾ ಮೋದಿ, ರಮಾದೇವಿ ಕವಲಿ, ನಾಗರಾಜ ಬೀರನೂರ, ಸುರೇಶ್ ಮಡ್ಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.