ADVERTISEMENT

ಸುರಪುರ | ಕಾರ್ಮಿಕರು ಮಾನ್-ಧನ್ ಯೋಜನೆ ಸೌಲಭ್ಯ ಪಡೆಯಿರಿ: ಶಾಂತಪ್ಪ ಹೊಸೂರು

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2026, 6:07 IST
Last Updated 8 ಫೆಬ್ರುವರಿ 2026, 6:07 IST
ಸುರಪುರ ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್-ಧನ್ ಯೋಜನೆ ಅಭಿಯಾನದಲ್ಲಿ ಎಇಇ ಶಾಂತಪ್ಪ ಹೊಸೂರು, ಯಲ್ಲಪ್ಪ ನಾಯಕ ಭಾಗವಹಿಸಿದ್ದರು
ಸುರಪುರ ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್-ಧನ್ ಯೋಜನೆ ಅಭಿಯಾನದಲ್ಲಿ ಎಇಇ ಶಾಂತಪ್ಪ ಹೊಸೂರು, ಯಲ್ಲಪ್ಪ ನಾಯಕ ಭಾಗವಹಿಸಿದ್ದರು   

ಸುರಪುರ: ‘ಬೀದಿ ವ್ಯಾಪಾರಿಗಳು, ಕಾರ್ಮಿಕರು ಕಡ್ಡಾಯವಾಗಿ ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್-ಧನ್ ಯೋಜನೆಯಡಿ ಹೆಸರನ್ನು ನೋಂದಾಯಿಸಿಕೊಂಡು ಮಾಸಿಕ ಕನಿಷ್ಟ ಪಿಂಚಣಿ ಸೌಲಭ್ಯ ಪಡೆದುಕೊಳ್ಳಬೇಕು’ ಎಂದು ನಗರಸಭೆಯ ಎಇಇ ಶಾಂತಪ್ಪ ಹೊಸೂರು ತಿಳಿಸಿದರು.

ನಗರಸಭೆಯ ಡೇ-ನಲ್ಮ ಯೋಜನೆಯಡಿ ಕುಂಬಾರಪೇಟದ ಕಟ್ಟಡ ಕಾರ್ಮಿಕ ಭವನದಲ್ಲಿ ಶನಿವಾರ ಆಯೋಜಿಸಿದ್ದ ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್-ಧನ್ ಯೋಜನೆಯ ಅಭಿಯಾನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಪ್ರಧಾನ ಮಂತ್ರಿ ಆತ್ಮ ನಿರ್ಭರ ನಿಧಿ ಯೋಜನೆಯಡಿ ಸಾಲ ಸೌಲಭ್ಯ ಪಡೆದುಕೊಂಡಿರುವ ಬೀದಿ ವ್ಯಾಪಾರಿಗಳು ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್-ಧನ್ ಯೋಜನೆಯಡಿ ಕನಿಷ್ಟ ಪಿಂಚಣಿ ಸೌಲಭ್ಯಕ್ಕಾಗಿ ಅರ್ಹತೆ ಪಡೆದುಕೊಂಡಿರುತ್ತಾರೆ’ ಎಂದರು.

ADVERTISEMENT

‘ದೇಶದ ಅರ್ಧದಷ್ಟು ಆದಾಯವು ಅಸಂಘಟಿತ ವಲಯದ 42 ಕೋಟಿ ಕಾರ್ಮಿಕರಿಂದ ಉತ್ಪಾದನೆಯಾಗುತ್ತಿದೆ. ಎಲ್ಲಾ ವಲಯಗಳಲ್ಲಿ ಕಾರ್ಮಿಕರು ಕಾರ್ಯ ನಿರ್ವಹಿಸುತ್ತಾರೆ. ಅಂತಹವರಿಗೆ 60 ವರ್ಷ ಪೂರ್ಣಗೊಂಡ ನಂತರ ತಿಂಗಳಿಗೆ ₹ 3000 ಖಚಿತ ಕನಿಷ್ಟ ಪಿಂಚಣಿಯನ್ನು ನೀಡಲು ಕೇಂದ್ರ ಸರ್ಕಾರದ ಉದ್ದೇಶವಿದೆ’ ಎಂದರು.

ನಗರಸಭೆ ವ್ಯವಸ್ಥಾಪಕ ಯಲ್ಲಪ್ಪ ನಾಯಕ ಮಾತನಾಡಿ, ‘ಯೋಜನೆಯಡಿ ಹೆಸರು ನೋಂದಾಯಿಸಿಕೊಂಡು ಫಲಾನುಭವಿಗಳು ಕಡ್ಡಾಯವಾಗಿ ಮಾಸಿಕ ವಂತಿಗೆಯನ್ನು ಪಾವತಿಸಬೇಕು. 10 ವರ್ಷ ಅಥವಾ ಅದಕ್ಕಿಂತ ಹೆಚ್ಚಿಗೆ ಅವಧಿಯ ನಂತರ ನಿರ್ಗಮಿಸಿದಲ್ಲಿ ಅವರು ಪಾವತಿಸಿದ ವಂತಿಕೆಯೊಂದಿಗೆ ಪಿಂಚಣಿ ಖಾತೆಗೆ ಜಮೆಯಾಗಿರುವ ಬಡ್ಡಿಯೊಂದಿಗೆ ಮಾಸಿಕ ಕನಿಷ್ಟ ಪಿಂಚಣಿ ಸೌಲಭ್ಯ ಕಲ್ಪಿಸುವ ಯೋಜನೆಯಾಗಿದೆ’ ಎಂದರು.

ನಗರಸಭೆ ಸಮುದಾಯ ಸಂಘಟಕ ದುರಗಪ್ಪ ನಾಯಕ ಮಾತನಾಡಿದರು.

ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ದೇವಿಂದ್ರಪ್ಪ ನಗರಗುಂಡ, ಕಟ್ಟಡ ಕಾರ್ಮಿಕ ಇಲಾಖೆ ಅಧಿಕಾರಿ ಶರಣು, ಕೆನರಾ ಬ್ಯಾಂಕ್‍ನ ಕ್ಷೇತ್ರಾಧಿಕಾರಿ ವಿಜಯ ಮಹಾಂತೇಶ, ಕರ್ನಾಟಕ ಬ್ಯಾಂಕ್‍ನ ಕ್ಷೇತ್ರಾಧಿಕಾರಿ ಗದ್ದೆಪ್ಪ, ಕಟ್ಟಡ ಕಾರ್ಮಿಕರ ಸಂಘದ ಸದಸ್ಯ ಗೋಪಾಲ ಗುತ್ತೇದಾರ್ ಹಾಗೂ ಕಟ್ಟಡ ಕಾರ್ಮಿಕ ವಲಯದ ಕಾರ್ಮಿಕರು, ಸದಸ್ಯರು ಇದ್ದರು.

ಸಮುದಾಯ ಸಂಪನ್ಮೂಲ ವ್ಯಕ್ತಿಗಳಾದ ಗೀತಾ ಸ್ವಾಗತಿಸಿದರು. ಶ್ರೀದೇವಿ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.