ADVERTISEMENT

ಶಹಾಪುರ | ಲಂಚ ಆರೋಪ; ದರ್ಶನಾಪುರ ರಾಜೀನಾಮೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2023, 7:16 IST
Last Updated 26 ಮಾರ್ಚ್ 2023, 7:16 IST
ಶಹಾಪುರ ನಗರದ ಬಸವೇಶ್ವರ ವೃತ್ತದಲ್ಲಿ ಬಿಜೆಪಿ ಮುಖಂಡರು ಪ್ರತಿಭಟನೆ ನಡೆಸಿ ಶಾಸಕ ಶರಣಬಸಪ್ಪಗೌಡ ದರ್ಶನಾಪುರ ರಾಜೀನಾಮೆ ನೀಡುವಂತೆ ಆಗ್ರಹಿಸಿ ಗ್ರೇಡ್-2 ತಹಶೀಲ್ದಾರ್ ಸೇತು ಮಾಧವ ಕುಲಕರ್ಣಿ ಅವರಿಗೆ ಮನವಿ ಸಲ್ಲಿಸಿದರು
ಶಹಾಪುರ ನಗರದ ಬಸವೇಶ್ವರ ವೃತ್ತದಲ್ಲಿ ಬಿಜೆಪಿ ಮುಖಂಡರು ಪ್ರತಿಭಟನೆ ನಡೆಸಿ ಶಾಸಕ ಶರಣಬಸಪ್ಪಗೌಡ ದರ್ಶನಾಪುರ ರಾಜೀನಾಮೆ ನೀಡುವಂತೆ ಆಗ್ರಹಿಸಿ ಗ್ರೇಡ್-2 ತಹಶೀಲ್ದಾರ್ ಸೇತು ಮಾಧವ ಕುಲಕರ್ಣಿ ಅವರಿಗೆ ಮನವಿ ಸಲ್ಲಿಸಿದರು   

ಶಹಾಪುರ: ‘ಶಾಸಕ ಶರಣಬಸ್ಪಗೌಡ ದರ್ಶನಾಪುರ ವಿರುದ್ಧ ಕೇಳಿ ಬಮದಿರುವ ಲಂಚ ಆರೋಪದಿಂದ ಕ್ಷೇತ್ರದ ಜನತೆ ತಲೆ ತಗ್ಗಿಸುವಂತೆ ಆಗಿದೆ. ನೈತಿಕ ಹೊಣೆ ಹೊತ್ತು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಮತ್ತು ಮುಂದಿನ ಚುನಾವಣೆಯಲ್ಲಿ ರಾಜಕೀಯ ನಿವೃತ್ತಿ ಪಡೆಯಬೇಕು’ ಎಂದು ಮಾಜಿ ಶಾಸಕ ಗುರು ಪಾಟೀಲ ಶಿರವಾಳ ಆಗ್ರಹಿಸಿದರು.

ನಗರದಲ್ಲಿ ಪ್ರತಿಭಟನಾ ಮರವಣಿಗೆಯಲ್ಲಿ ಅವರು ಮಾತನಾಡಿದರು. ಬಿಜೆಪಿಯದ್ದು 40 ಪರ್ಸೆಂಟ್ ಸರ್ಕಾರವೆಂದು ಆರೋಪ
ಮಾಡುವ ದರ್ಶನಾಪುರ ಅವರು ಲಂಚದ ಬಗ್ಗೆ ಬೇಡಿಕೆ ಇಟ್ಟಿದ್ದಾರೆ ಇಲ್ಲ ಎಂಬುದರ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ಅವರು ಒತ್ತಾಯಿಸಿದರು.

ಈ ವೇಳೆ ಮುಖಂಡರಾದ ಅಮಾತೆಪ್ಪ ಕಂದಕೂರ, ಡಾ.ಚಂದ್ರಶೇಖರ ಸುಬೇದಾರ, ದೇವು ಕೋನೇರ, ಗುರು ಕಾಮಾ, ರಾಜೂಗೌರ ಉಕ್ಕಿನಾಳ, ಶ್ರೀಕಾಂತ ಸುಬೇದಾರ, ಮರೆಪ್ಪ ಹಯ್ಯಾಳಕರ್, ಮಲ್ಲಿಕಾರ್ಜುನ ಗಂಧದಮಠ, ಸತೀಶ ಪಂಚಭಾವಿ, ಅಪ್ಪಣ್ಣ ದಶವಂತ, ಅಶೋಕ ನಾಯಕ, ರಾಮಚಂದ್ರ ಕಾಶಿರಾಜ ವನದುರ್ಗ, ಮರೆಪ್ಪ ಪ್ಯಾಟಿ, ಶೇಖರ ದೊರಿ, ಮಲ್ಲಿಕಾರ್ಜುನ ಕಂದಕೂರ, ಭೀಮಶಂಕರ ಕಟ್ಟಿಮನಿ, ರಾಘವೇಂದ್ರ ಯಕ್ಷಿಂತಿ, ಅಮರೇಶ ನಂದಿಕೋಲ, ಅಮೃತ ಹೂಗಾರ, ಸೋಮಶೇಖರ ಗುತ್ತಿಪೇಟ, ಡಾ,ವೆಂಕಟೇಶ, ಸಂತೋಷ ಭಾಸುತ್ಕರ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.