ಹುಣಸಗಿ: ವರಕವಿ ದ.ರಾ.ಬೇಂದ್ರೆ ಅವರು ತಮ್ಮ ಸಾಹಿತ್ಯದ ಪ್ರಕಾರಗಳ ಮೂಲಕ ಎಲ್ಲ ವರ್ಗದ ಜನರನ್ನು ತಲುಪಿದ್ದಾರೆ. ಆ ಮೂಲಕ ಕನ್ನಡ ಸಾಹಿತ್ಯವನ್ನು ಎತ್ತರಕ್ಕೆ ಕೊಂಡೊಯ್ದಿದ್ದಾರೆ ಎಂದು ಕಸಾಪ ವಲಯಾಧ್ಯಕ್ಷ ಕೋರಿಸಂಗಯ್ಯ ಗಡ್ಡದ ಹೇಳಿದರು.
ಹುಣಸಗಿ ತಾಲ್ಲೂಕಿನ ಕೊಡೇಕಲ್ಲ ಗ್ರಾಮದ ವಲಯ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಬೇಂದ್ರ ಅವರ ಬದುಕು ಬರಹಗಳ ಕುರಿತು ಹಮ್ಮಿಕೊಂಡಿದ್ದ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಾಹಿತ್ಯ ಜತೆಗೆ ಉತ್ತಮ ವಾಗ್ಮಿಗಳಾದ್ದ ಬೇಂದ್ರೆ ಅವರ ಮಾತನ್ನು ಕೇಳಲು ಜನರು ಕಾಯುತ್ತಿದ್ದರು. ಅವರು ಧಾರವಾಡದಲ್ಲಿ ಗೆಳೆಯರ ಬಳಗದ ಮೂಲಕ ಸಾಹಿತ್ಯಕ್ಕೆ ಹೊಸ ಕಳೆ ತಂದುಕೊಟ್ಟರು ಎಂದರು.
ಸಾಹಿತಿ ಬಸಣ್ಣ ಗೊಡ್ರಿ ಮಾತನಾಡಿ, ಬೇಂದ್ರೆ ಅವರು ಕೆಲ ಕಾಲ ಸೆರಮನೆ ವಾಸ ಕೂಡ ಅನುಭವಿಸಿದ್ದರು. ಈ ಸಂದರ್ಭದಲ್ಲಿಯೂ ಅವರು ಬರೆಯುವುದನ್ನು ಬಿಡಲಿಲ್ಲ ಎಂದು ಸ್ಮರಿಸಿಕೊಂಡರು.
ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತ ತಂಡಗಳಿಗೆ ಪ್ರಶಸ್ತಿಪತ್ರ ಹಾಗೂ ಪುರಸ್ಕಾರ ನೀಡಿ ಗೌರವಿಸಲಾಯಿತು.
ಗ್ರಾಮದ ಚಂದ್ರಶೇಖರ ಹೊಕ್ರಾಣಿ, ಮದನು ಸಾಲವಾಡಗಿ, ಬಸವರಾಜ ಅಂಗಡಿ, ಸಂಗಮೇಶ ಅಡ್ಡಿ, ಭೀಮನಗೌಡ, ಬಿರಾದಾರ, ಮೌನೇಶ ಹೂಗಾರ, ಹಣಮೇಶ ಗಿಡ್ನೂರ, ಸಂಗನಬಸ್ಸು ಪಂಜಗಲ್ಲ, ಸೋಮಶೇಖರ ಪಂಜಗಲ್, ನೀಲಪ್ಪ ತೆಗ್ಗಿ, ಓಂಕಾರಪ್ಪ ನಾಕೆ, ಬಸು ಕೋಲಾರ, ಚರಲಿಂಗ ತಂಗಡಗಿ, ಸೀತಾರಮ ರಾಠೋಡ, ನೀಲಮ್ಮ ಹಾವೇರಿ, ಅಂಜುಮ ಕೌಸರ್, ಮಲ್ಲಿಕಾರ್ಜುನ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.