ADVERTISEMENT

ಶಹಾಪುರ | ಅಡ್ಡಗಟ್ಟಿ ರೌಡಿ ಶೀಟರ್ ಕೊಲೆ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2025, 6:56 IST
Last Updated 16 ಮಾರ್ಚ್ 2025, 6:56 IST
<div class="paragraphs"><p>ಸಣ್ಣ ಮಾಪಣ್ಣ ಭೀಮಪ್ಪ ಬಡಿಗೇರ</p></div>

ಸಣ್ಣ ಮಾಪಣ್ಣ ಭೀಮಪ್ಪ ಬಡಿಗೇರ

   

ಶಹಾಪುರ (ಯಾದಗಿರಿ ಜಿಲ್ಲೆ): ತಾಲ್ಲೂಕಿನ ಬೀದರ್-ಶ್ರೀರಂಗಪಟ್ಟಣ ರಾಜ್ಯ ಹೆದ್ದಾರಿಯ ಸಾದ್ಯಾಪುರ ಹಳ್ಳದ ಹತ್ತಿರ ರೌಡಿ ಶೀಟರ್‌ನನ್ನು ಚಾಕು ಮಚ್ಚುನಿಂದ ಹಲ್ಲೆ ಮಾಡಿ ಕೊಲೆ ಮಾಡಲಾಗಿದೆ.

ಸಣ್ಣ ಮಾಪಣ್ಣ ಭೀಮಪ್ಪ ಬಡಿಗೇರ (55) ಕೊಲೆಯಾದ ವ್ಯಕ್ತಿ.

ADVERTISEMENT

ಘಟನೆ ವಿವರ:

ಮಾಪಣ್ಣ ಮತ್ತು ಅಲಿಸಾಬ್, ಭೀಮರಾಯನಗುಡಿಯಿಂದ ತನ್ನೂರಾದ ಮದ್ರಿಕಿ ಗ್ರಾಮಕ್ಕೆ ಬೈಕ್ ಮೇಲೆ ತೆರಳುತ್ತಿದ್ದಾಗ ಸಾದ್ಯಾಪುರ ಗ್ರಾಮದ ಹಳ್ಳದ ಬಳಿ ದುಷ್ಕರ್ಮಿಗಳು ಹೆದ್ದಾರಿ ಮೇಲೆ ಅಡ್ಡಗಟ್ಟಿ ನಿಂತು ಮಾರಕಾಸ್ತ್ರಗಳಿಂದ ಕೊಲೆ ಮಾಡಿದ್ದಾರೆ.

ಆಗ ಬೈಕ್ ಸವಾರ ಅಲಿಸಾಬ್(52) ಓಡಿ ಹೋಗಿ ಮದ್ರಿಕಿ ಗ್ರಾಮದಲ್ಲಿ ಅಡಗಿ ಕುಳಿತುಕೊಂಡಾಗ, ಮಾಪಣ್ಣ ಮಕ್ಕಳು ‘ನನ್ನ ತಂದೆಯನ್ನು ನೀನೆ ಕೊಲೆ ಮಾಡಿದ್ದೀಯಾ’ ಎಂದು ಹಲ್ಲೆ ಮಾಡಿದ್ದಾರೆ. ಗಾಯಗೊಂಡ ಅಲಿಸಾಬ್‌ ಆಸ್ಪತ್ರೆ ಮಾರ್ಗ ಮಧ್ಯದಲ್ಲಿ ಅಸುನೀಗಿದ್ದಾರೆ ಎಂದು ಸುರಪುರ ಡಿವೈಎಸ್ಪಿ ಜಾವೇದ ಇನಾಂಮದಾರ ಮಾಹಿತಿ ನೀಡಿದರು.

ಸರ್ಕಾರಿ ಆಸ್ಪತ್ರೆಯಲ್ಲಿ ಶವಾಗಾರದಲ್ಲಿ ಎರಡು ಶವ ಇಡಲಾಗಿದೆ. ನೂರಾರು ಜನರು ಸೇರಿದ್ದಾರೆ.

ಭೀಮರಾಯಗುಡಿ ಠಾಣೆಯಲ್ಲಿ ದೂರು ದಾಖಲಾಗಿದೆ.

ಮದ್ರಿಕಿ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ.

ಘಟನಾ ಸ್ಥಳಕ್ಕೆ ಎಸ್ಪಿ ಭೇಟಿ:

ಯಾದಗಿರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಮೇಲ್ನೋಟಕ್ಕೆ ಹಳೆಯ ವೈಷಮ್ಯ ಕಾಣುತ್ತಲಿದೆ. 2014ರಲ್ಲಿ ಕೊಲೆಯತ್ನ ಪ್ರಕರಣದಲ್ಲಿ ಭಾಗಿಯಾಗಿರುವ ಹುಸೇನಿ ಅವರ ಬಗ್ಗೆ ಅನುಮಾನವಿದೆ. ಈ ಬಗ್ಗೆ ತಂಡ ರಚಿಸಿದೆ. ಗ್ರಾಮದಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದೆ' ಎಂದರು.

ಜೋಡಿ ಕೊಲೆ ಘಟನೆಯಿಂದ ಮದ್ರಿಕಿ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.