ADVERTISEMENT

ಶಹಾಪುರ | ಕೈ ಬೆರಳಿಗೆ ಗಾಯ: ಇಬ್ಬರಿಗೆ ದಂಡ, ಶಿಕ್ಷೆ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2025, 8:13 IST
Last Updated 31 ಡಿಸೆಂಬರ್ 2025, 8:13 IST
<div class="paragraphs"><p>ಜೈಲು (ಪ್ರಾತಿನಿಧಿಕ ಚಿತ್ರ)</p></div>

ಜೈಲು (ಪ್ರಾತಿನಿಧಿಕ ಚಿತ್ರ)

   

ಶಹಾಪುರ: ಕಲ್ಲಿನಿಂದ ಕೈ ಬೆರಳಿಗೆ ಹೊಡೆದು ಗಾಯ ಮಾಡಿ, ಜೀವ ಬೆದರಿಕೆ, ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪ ಸಾಬೀತಾಗಿದ್ದರಿಂದ ಮಂಗಳವಾರ ಇಲ್ಲಿನ ಹೆಚ್ಚುವರಿ ಜೆಎಂಎಫ್ ಸಿ ನ್ಯಾಯಾಲಯದ ನ್ಯಾಯಾಧೀಶ ಬಸವರಾಜ ಪೂಜಾರ ಅವರು ಒಬ್ಬರಿಗೆ ₹3 ಸಾವಿರ ಹಾಗೂ ಇನ್ನೊಬ್ಬರಿಗೆ ₹13 ಸಾವಿರ ದಂಡ ಹಾಗೂ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ.

ತಾಲ್ಲೂಕಿನ ಗೋಗಿ(ಕೆ) ಗ್ರಾಮದ ಚಂದ್ರಪ್ಪ ತಿಪ್ಪಣ್ಣ ಹೊಸಮನಿ ಹಾಗೂ ದೊಡ್ಡಮ್ಮ ಚಂದ್ರಪ್ಪ ಹೊಸಮನಿ ಶಿಕ್ಷೆ ಹಾಗೂ ದಂಡನೆಗೆ ಒಳಗಾದ ವ್ಯಕ್ತಿಗಳು ಆಗಿದ್ದಾರೆ.

ADVERTISEMENT

ಚಂದ್ರಪ್ಪ ಅವರಿಗೆ ನ್ಯಾಯಾಲಯವು ₹13 ಸಾವಿರ ದಂಡ ಹಾಗೂ 1ವರ್ಷ ಜೈಲು ಶಿಕ್ಷೆ ವಿಧಿಸಿದೆ. ದೊಡ್ಡಮ್ಮ ಅವರಿಗೆ ₹3 ಸಾವಿರ ದಂಡ ವಿಧಿಸಿದೆ.

2023 ಮಾರ್ಚ್ 4ರಂದು ಮನೆಯ ಜಾಗದ ವಿಷಯವಾಗಿ ತಕರಾರು ನಡೆದಾಗ ಚಂದ್ರಪ್ಪ ಹಾಗೂ ದೊಡ್ಡಮ್ಮ ಇಬ್ಬರು ನಮ್ಮ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ಗೋಗಿ ಠಾಣೆಯಲ್ಲಿ ಅಂಬಲಪ್ಪ ಸಾಯಿಬಣ್ಣ ಹೊಸಮನಿ ದೂರು ದಾಖಲಿಸಿದ್ದರು.

ಅಂದಿನ ಠಾಣೆಯ ಪಿಎಸ್‌ಐ ವಸೀಮ್ ಪಟೇಲ್ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಫಿರ್ಯಾದಿದಾರರ ಪರವಾಗಿ ಎಪಿಪಿ ಮರೆಪ್ಪ ಹೊಸಮನಿ ವಾದ ಮಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.