ADVERTISEMENT

ಬಂಜಾರ ಸಮುದಾಯದವರು ಶ್ರಮಜೀವಿಗಳು: ಶಾಸಕ ಶರಣಗೌಡ ಕಂದಕೂರ

ಸೈದಾಪುರ: ಸಂತ ಶ್ರೀ ಸೇವಾಲಾಲರವರ 287ನೇ ಜಯಂತ್ಯುತ್ಸವ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2026, 4:07 IST
Last Updated 19 ಫೆಬ್ರುವರಿ 2026, 4:07 IST
ಸೈದಾಪುರ ಪಟ್ಟಣದಲ್ಲಿ ಬಂಜಾರ ಸಮುದಾಯದ ವತಿಯಿಂದ ಸಂತ  ಸೇವಲಾಲರ 287ನೇ ಜಯಂತ್ಯುತ್ಸವ ಕಾರ್ಯಕ್ರಮವನ್ನು ಶಾಸಕ ಶರಣಗೌಡ ಕಂದಕೂರ ಹಾಗೂ ಇತರರು ಉದ್ಘಾಟಿಸಿದರು
ಸೈದಾಪುರ ಪಟ್ಟಣದಲ್ಲಿ ಬಂಜಾರ ಸಮುದಾಯದ ವತಿಯಿಂದ ಸಂತ  ಸೇವಲಾಲರ 287ನೇ ಜಯಂತ್ಯುತ್ಸವ ಕಾರ್ಯಕ್ರಮವನ್ನು ಶಾಸಕ ಶರಣಗೌಡ ಕಂದಕೂರ ಹಾಗೂ ಇತರರು ಉದ್ಘಾಟಿಸಿದರು   

ಸೈದಾಪುರ: ‘ಬಂಜಾರ ಸಮುದಾಯದ ಜನರು ಶ್ರಮಜೀವಿಗಳಾಗಿದ್ದು, ಇದರಿಂದ ಆಸ್ತಿ ಮಾಡಿಕೊಳ್ಳಬಹುದು. ಜೊತೆಗೆ ನಿಮ್ಮ ಮಕ್ಕಳಿಗೆ ಹೆಚ್ಚಿನ ಶಿಕ್ಷಣ ನೀಡಿ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ’ ಎಂದು ಶಾಸಕ ಶರಣಗೌಡ ಕಂದಕೂರ ಹೇಳಿದರು.

ಪಟ್ಟಣದಲ್ಲಿ ಬುಧವಾರ ಆಸ್ಪಲ್ಲಿ ಲೇಔಟ್‍ನಲ್ಲಿ ನಡೆದ ಸಂತ  ಸೇವಲಾಲರ 287ನೇ ಜಯಂತ್ಯುತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

‘ಸರ್ಕಾರದ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು, ಬಂಜಾರ ಸಮುದಾಯದ ಪಾಲಕರು ನಿಮ್ಮ ಮಕ್ಕಳಿಗೆ ಕಡ್ಡಾಯ ಹಾಗೂ ಉನ್ನತ ಮಟ್ಟದ ಶಿಕ್ಷಣವನ್ನು ಕೊಡಿಸಲು ಆಸಕ್ತಿಯನ್ನು ಬೆಳಿಸಿಕೊಳ್ಳಿ. ಶಿಕ್ಷಣದಿಂದ ಸಮ ಸಮಾಜದ ನಿರ್ಮಾಣ ಹಾಗೂ ದೇಶದ ಪ್ರಗತಿ ಸಾಧ್ಯ ಎಂಬುದು ಸೇವಾಲಾಲರ ಕನಸಾಗಿತ್ತು’ ಎಂದರು.

ADVERTISEMENT

‘ಸೈದಾಪುರ ಪಟ್ಟಣದಲ್ಲಿ ಬಂಜಾರ ಸಮುದಾಯದ ಬೇಡಿಕೆಯಂತೆ ಸಂತ  ಸೇವಾಲಾಲ ಮತ್ತು ಮಾರೆಮ್ಮ ದೇವಸ್ಥಾನದ ನಿರ್ಮಾಣಕ್ಕೆ ಸಹಕಾರ ನೀಡುವುದರ ಜೊತೆಗೆ ನನ್ನವಧಿ ಪೂರ್ಣಗೊಳ್ಳುವ ಮುನ್ನವೇ ಉದ್ಘಾಟಿಸುವೆ ಹಾಗೂ ಸರ್ಕಾರ ನೀಡಿದ ಯೋಜನೆಗಳನ್ನು ತಲುಪಿಸುವ ಪೋಸ್ಟ್ ಮ್ಯಾನ್ ನಾನು. ತಾಂಡಗಳ ಮೂಲ ಸೌಕರ್ಯಗಳನ್ನು ನೀಡುವುದು ನನ್ನ ಜವಬ್ದಾರಿಯಾಗಿದೆ’ ಎಂದು ತಿಳಿಸಿದರು.

‘ಯುವಕರು ಸೇವಲಾಲರ ಅಶಯದಂತೆ ದುಶ್ಚಟಗಳಿಂದ ದೂರವಿದ್ದು ಸ್ವಸ್ಥ ಸಮಾಜದ ನಿರ್ಮಾಣದಲ್ಲಿ ಪ್ರಮುಖ ಪಾತ್ರವಹಿಸಬೇಕು. ಪ್ರತಿ ತಾಂಡಗಳಲ್ಲಿ ನ್ಯಾಯಬೆಲೆ ಅಂಗಡಿಗಳ ನಿರ್ಮಾಣ ಮತ್ತು ಕಂದಾಯ ಗ್ರಾಮಗಳನ್ನಾಗಿ ಪರಿವರ್ತನೆಗೆ ಸರ್ಕಾರದ ಮೇಲೆ ಒತ್ತಡ ಹೇರುವ ಮೂಲಕ ನಿಮ್ಮ ಪ್ರೀತಿ ವಿಶ್ವಾಸದಿಂದ ತಾಂಡಗಳ ಅಭಿವೃದ್ಧಿಗೆ ಶ್ರಮಿಸುತ್ತೇನೆ. ಹಾಗೂ ಬಂಜಾರ ಸಮುದಾಯದ ಕಟ್ಟಕಡೆಯ ವ್ಯಕ್ತಿಯ ಕಣ್ಣೀರನ್ನು ಒರೆಸಲು ನಾನು ಸದಾ ನಿಮ್ಮ ಜೊತೆಗಿರುತ್ತೇನೆ’ ಎಂದರು.

ಇದಕ್ಕೂ ಮೊದಲು ಸೈದಾಪುರ ರೈಲು ನಿಲ್ದಾಣದಿಂದ ಬಸವೇಶ್ವರ ವೃತ್ತದ ಮಾರ್ಗವಾಗಿ ಲಕ್ಷ್ಮೀ ನಗರದವರೆಗೆ ಸೇವಾಲಾಲ್ ಮಾಹಾರಾಜರ ಪ್ರತಿಮೆಯ ಭವ್ಯ ಮೆರವಣಿಗೆ ಹಾಗೂ ಶೋಭಯಾತ್ರೆಯನ್ನು ವಿವಿಧ ವಾದ್ಯಗಳ ಹಾಗೂ ನೃತ್ಯದ ಮೂಲಕ ನೋಡುಗರ ಗಮನ ಸೆಳೆಯಿತು.

ಈ ಸಂದರ್ಭದಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಶರಣಿಕ ಕುಮಾರ ದೊಕಾ, ಚಂದ್ರಶೇಖರ ವಾರಾದ, ಬಸವಂತರಾಯಗೌಡ, ಚಂದ್ರುಗೌಡ, ನರಸಪ್ಪ ಕವಡೆ, ಗುರುನಾಥರೆಡ್ಡಿಗೌಡ, ಶ್ರೀದೇವಿ ಶೆಟ್ಟಿಹಳ್ಳಿ, ರಾಜೇಶ ಉಡುಪಿ, ವೆಂಕಟೇಶ ಗಡದ, ಲಕ್ಷ್ಮಣ ನಾಯಕ ಕೂಡ್ಲೂರು, ಅರ್ಜುನ ಚವ್ಹಾಣ ಸೈದಾಪುರ, ಜೈ ಸೇವಾಲಾಲ್ ಸೇವಾ ಸಂಘದ ಅಧ್ಯಕ್ಷ ಭೀಮು ಚವ್ಹಾಣ, ಧರ್ಮರಾಜ ರಾಠೋಡ, ಉಪಾಧ್ಯಕ್ಷ ಕುಂದನ ಕುಮಾರ ಚವ್ಹಾಣ, ಕಾರ್ಯದರ್ಶಿ ಅಂಬ್ರೇಶ ರಾಠೋಡ, ಗೋವಿಂದ ಚವ್ಹಾಣ, ವಿಶ್ವನಾಥ ಚವ್ಹಾಣ, ಸಂತೋಷ ಚವ್ಹಾಣ, ಬಾಲಾಜಿ ಚವ್ಹಾಣ ಸೇರಿದಂತೆ ಇತರರಿದ್ದರು.

ಸೈದಾಪುರ ಪಟ್ಟಣದಲ್ಲಿ ಬಂಜಾರ ಸಮುದಾಯದವತಿಯಿಂದ ಸಂತ ಶ್ರೀ ಸೇವಲಾಲರ 287ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಶಾಸಕ ಶರಣಗೌಡ ಕಂದಕೂರ ಮಾತನಾಡಿದರು
ಸೈದಾಪುರ ಪಟ್ಟಣದಲ್ಲಿ ಬಂಜಾರ ಸಮುದಾಯದ ವತಿಯಿಂದ ಸಂತ ಸೇವಲಾಲರ 287ನೇ ಜಯಂತ್ಯುತ್ಸವ ನಿಮಿತ್ತ ಅದ್ಧೂರಿ ಮೆರವಣಿಗೆ ಜರುಗಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.