ADVERTISEMENT

ಯಾದಗಿರಿ | ಉಳ್ಳವರ ಪಾಲಾದ ಪ್ರಜಾಪ್ರಭುತ್ವ; ಜ್ಞಾನಪ್ರಕಾಶ ಸ್ವಾಮೀಜಿ

ಮೈಸೂರಿನ ಉರಿಲಿಂಗ ಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2021, 4:24 IST
Last Updated 27 ಡಿಸೆಂಬರ್ 2021, 4:24 IST
ವಡಗೇರಾ ಪಟ್ಟಣದ ಸ್ವಾಮಿ ವಿವೇಕಾನಂದ ಶಾಲೆ ಆವರಣದಲ್ಲಿ ಬಹುಜನ ಜನಜಾಗೃತಿ ವೇದಿಕೆ ವತಿಯಿಂದ ಪ್ರಜಾಪ್ರಭುತ್ವ ಉಳಿಸಿ, ಸಂವಿಧಾನ ರಕ್ಷಿಸಿ ಕಾರ್ಯಕ್ರಮ ನಡೆಯಿತು
ವಡಗೇರಾ ಪಟ್ಟಣದ ಸ್ವಾಮಿ ವಿವೇಕಾನಂದ ಶಾಲೆ ಆವರಣದಲ್ಲಿ ಬಹುಜನ ಜನಜಾಗೃತಿ ವೇದಿಕೆ ವತಿಯಿಂದ ಪ್ರಜಾಪ್ರಭುತ್ವ ಉಳಿಸಿ, ಸಂವಿಧಾನ ರಕ್ಷಿಸಿ ಕಾರ್ಯಕ್ರಮ ನಡೆಯಿತು   

ವಡಗೇರಾ: ಪ್ರಸ್ತುತ ದಿನಗಳಲ್ಲಿ ದೇಶದ ಪ್ರಜಾಪ್ರಭುತ್ವ ಉಳ್ಳವರ ಪಾಲಾಗಿದೆ’ ಎಂದು ಮೈಸೂರಿನ ಉರಿಲಿಂ ಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ ಹೇಳಿದರು.

ವಡಗೇರಾ ಪಟ್ಟಣದ ಸ್ವಾಮಿ ವಿವೇಕಾನಂದ ಶಾಲೆಯ ಆವರಣದಲ್ಲಿ ಭಾನುವಾರ ಬಹುಜನ ಜನಜಾಗೃತಿ ವೇದಿಕೆ ವತಿಯಿಂದ ಆಯೋಜಿಸಿದ ‘ಪ್ರಜಾಪ್ರಭುತ್ವ ಉಳಿಸಿ ಸಂವಿಧಾನ ರಕ್ಷಿಸಿ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಸಮುದಾಯದವರು ಭಾರತದ ಮಾಲೀಕರು. ರಾಜ್ಯ, ರಾಷ್ಟ್ರವನ್ನು ಆಳಬೇಕಾದವರು ಇಂದು ಬೀದಿಗೆ ಬಿದಿದ್ದಾರೆ. ಏಕೆಂದರೇ ಪ್ರಜಾಪ್ರಭುತ್ವ ಕೆಲವರಿಂದ ಕೆಲವರಿಗಾಗಿ ಕೆಲವರಿಗೋಸ್ಕರ ಸೀಮಿತವಾಗಿದೆ. ಅಸಲಿ ಪ್ರಜಾಪ್ರಭುತ್ವ ಇಲ್ಲವೇ ಇಲ್ಲ. ಇಲ್ಲಿ ನಕಲಿ ಪ್ರಜಾಪ್ರಭುತ್ವ ಇದೆ ಎಂದರು.

ADVERTISEMENT

ನಮ್ಮದು ಪೆನ್ನುಗಳ ಭಾರತ ಹೊರತು ಗನ್ನುಗಳ ಭಾರತ ಅಲ್ಲಾ. ಪ್ರಧಾನಿ ಅವರು ಹೊರದೇಶಕ್ಕೆ ಹೋಗಿ ಬುದ್ಧನ ನಾಡಿನಿಂದ ಬಂದಿರುವೆ ಎಂದು ಹೇಳುತ್ತಾರೆ. ಬುದ್ಧ, ಬಸವ ಮತ್ತು ಅಂಬೇಡ್ಕರ್ ತತ್ವ ಅಳವಡಿಸಿಕೊಳ್ಳದೆ ಆಯುಧಗಳ ಖರೀದಿಯಲ್ಲಿ ಭಾರತ ಜಗತ್ತಿನ ನಂಬರ ಒನ್ ಸ್ಥಾನದಲ್ಲಿದೆ ಎಂದು ಹೇಳಿದರು.

ಚಿತ್ರನಟ ಚೇತನ ಮಾತಾನಾಡಿ ಬುದ್ಧ, ಬಸವ ಮತ್ತು ಅಂಬೇಡ್ಕರ್, ಪೆರಿಯಾರ, ಕುವೆಂಪು ಅವರ ವಿಚಾರ ಗಳು ಚರ್ಚೆಯಾಗಬೇಕು. ವೈಚಾರಿ ಕಥೆ ಗಳನ್ನು ಚರ್ಚೆ ಮಾಡಿ ಬದಲಾವಣೆ ತರುವುದಕ್ಕೆ ಸಾಧ್ಯವಾಗುತ್ತದೆ ಎಂದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಅವರು ಮತಾಂತರ ನಿಷೇಧ ಕಾಯಿದೆ ಮೂಲಕ ನಮ್ಮ ಮತಾಂತರದ ಹಕ್ಕು ಕಸಿದುಕೊಳ್ಳುವ ಕುತಂತ್ರ ನಡೆಸಿದ್ದಾರೆ. ಸಿ.ಎಂ ಸಾಮಾನ್ಯ ವ್ಯಕ್ತಿಯಲ್ಲ. ಅವರು ಕಮ್ಯುನಿಷ್ಟ ಮ್ಯಾನ್ ಎಂದು ಆರೋಪಿಸಿದರು.

ಬಹುಜನ ಸಮಾಜದ ಚಿಂತಕಿ ನಜೀಮಾ ನಾಜೀರ್ ಮಾತಾನಾಡಿ, ನಾವು ಎಲ್ಲಾರೂ ಒಗ್ಗಾಟಾದಾಗ 2 ಪ್ರತಿಶತ ಇರುವ ಜನರ ಪಿತೂರಿಯನ್ನು ಹೊರ ತೆಗೆಯಬಹುದು. ಬಹುಜನ ಸಮಾಜದವರು ಒಗ್ಗೂಡಿ ಹೋರಾಟ ಮಾಡಿದರೆ ಸಾಧ್ಯವಾಗುತ್ತದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಹನುಮೇಗೌಡ ಬೀರನಕಲ್ ಮಾತನಾಡಿ, ಅಂಬೇಡ್ಕರ್ ಅವರು ದೇಶದ ಜನರಿಗೆ ಸಮಾನ ಹಕ್ಕು ನೀಡುವ ಸಲುವಾಗಿ ಸಂವಿಧಾನ ರಚಿಸಿದ್ದರು. ಆದರೆ, ಇಂದಿನ ಅಸಮಾನ ಮನಸ್ಥಿತಿ ಹೊಂದಿದವರ ದುರಾಡಳಿತದಿಂದ ಹಿಂದುಳಿದ ವರ್ಗದ ಜನರಿಗೆ ಅನ್ಯಾಯವಾಗುತ್ತಿದೆ. ಆದ್ದರಿಂದ ಎಲ್ಲರೂ ಅಂತವರ ವಿರುದ್ದ ಹೋರಾಟ ಮಾಡಬೇಕು ಎಂದು ಹೇಳಿದರು.

ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠ ತಿಂಥಣಿ ಸಿದ್ದರಾಮಾನಂದಪುರಿ ಸ್ವಾಮೀಜಿ, ಛಲವಾದಿ ಗುರುಪೀಠ ಚಿತ್ರದುರ್ಗದ ಬಸವನಾಗಿದೇವ ಶರಣರು, ಬಸವಮೂರ್ತಿ ಮಾದರಚನ್ನಯ್ಯ ಸ್ವಾಮೀಜಿ, ಡಾ.ಭೀಮಣ್ಣ ಮೇಟಿ, ಮಹಾರಾಜ ದಿಗ್ಗಿ, ಪ್ರಭು ಎಂ. ಬುಕ್ಕಲ್, ಭೀಮರಾವ್ ಸುಂಗಲ್ಕರ್, ಮರೆಪ್ಪ ಬುಕ್ಕಲ್, ಬಸವರಾಜ ಸೊನ್ನದ, ಶಿವರಾಜ ಬಾಗೂರ, ವಿನಯಕುಮಾರ ಯಾದಗಿರಿ, ಅಶೋಕ ಕರಣಗಿ, ಸಾಬಣ್ಣ ವರೀಕೆರಿ, ಹಣಮಂತ್ರಾಯಗೌಡ ತೇಕರಾಳ, ಭೀಮಣ್ಣ ಚಿನ್ನಿ, ಮರೆಪ್ಪ ಜಡಿ, ಗುರುನಾಥ ನಾಟೇಕಾರ, ಫಕೀರ್ ಅಹಮ್ಮದ್ ಮರಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.