ಶಹಾಪುರ: ತಾಲ್ಲೂಕಿನ ಗಂಗನಾಳ, ಸಗರ ಹಾಗೂ ಇನ್ನಿತರ ಗ್ರಾಮಗಳಿಗೆ ಶನಿವಾರ ಬಿಜೆಪಿ ತಂಡವು ಭೇಟಿ ನೀಡಿ ಮಳೆ ಹಾನಿಯಿಂದ ಬೆಳೆ ಹಾಳಾದ ಹತ್ತಿ, ತೊಗರಿ ಬೆಳೆ ವೀಕ್ಷಣೆ ಮಾಡಿದರು.
ಬಿಜೆಪಿಯ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ವಿಭೂತಿಹಳ್ಳಿ ಮಾತನಾಡಿ, ಸರ್ಕಾರ ಬೆಳೆ ಸರ್ವೆ ನಿಖರವಾಗಿ ಮಾಡುತ್ತಿಲ್ಲ. ಕಾಟಾಚಾರದ ಕೆಲಸ ನಡೆಯುತ್ತದೆ. ರೈತರ ಹಿತ ಬೇಕಿಲ್ಲ. ಜಾತಿ ಗಣತಿಯ ಬಗ್ಗೆ ಹೆಚ್ಚಿನ ಕಾಳಜಿವಹಿಸಿದೆ ಎಂದು ಆರೋಪಿಸಿದರು.
ಮುಖಂಡ ಅಮೀನರಡ್ಡಿ ಪಾಟೀಲ ಯಾಳಗಿ ಮಾತನಾಡಿ, ಸರ್ವೆ ಕಾರ್ಯ ತ್ವರಿತವಾಗಿ ಪೂರ್ಣಗೊಳಿಸಿ ಹೆಚ್ಚಿನ ಪರಿಹಾರ ಒದಗಿಸಬೇಕು. ರೈತರ ಹಿಂಗಾರಿ ಬೆಳೆ ಬಿತ್ತನೆಗೆ ನೆರವಾಗಬೇಕು ಎಂದರು.
ಮುಖಂಡರಾದ ಪರಶುರಾಮ ಕುರಕುಂದಿ, ಚಂದ್ರಶೇಖರ ಸುಬೇದಾರ, ರಾಜಶೇಖರ ಗೂಗಲ್, ಅಡಿವೆಪ್ಪ ಜಾಕಾ, ರಾಜೂಗೌಡ ಉಕ್ಕಿನಾಳ, ದೇವೀಂದ್ರ ಕೊನೆರ, ಅಮರೇಶ, ಗಿರೀಶ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.